ಆರೋಗ್ಯಕರ ಓಟ್ಸ್ ಮಿಲ್ಕ್ ಶೇಕ್ ರೆಸಿಪಿ : ಶಕ್ತಿ ಮತ್ತು ಪೌಷ್ಟಿಕಾಂಶ ತುಂಬಿದ ಓಟ್ಸ್ ಮಿಲ್ಕ್ ಶೇಕ್‌ನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು: ಓಟ್ಸ್ – 1/2 ಕಪ್, ಹಾಲು – 2 ಕಪ್, ಕಲ್ಲಂಗಡಿ ಬೀಜ – 1/2 ಚಮಚ, ಸೂರ್ಯಕಾಂತಿ ಬೀಜ – 1/2 ಚಮಚ, ಒಣ ಖರ್ಜೂರ – 2, ಬೆಲ್ಲ – 2 ಚಮಚ, ಐಸ್ ಕ್ಯೂಬ್‌ಗಳು – ಅಗತ್ಯಷ್ಟು
ತಯಾರಿಸುವ ವಿಧಾನ: ಓಟ್ಸ್‌ನ್ನು 1/2 ಕಪ್ ಹಾಲಿನಲ್ಲಿ ನೆನೆಸಿ. ಅದಕ್ಕೆ ಕಲ್ಲಂಗಡಿ ಬೀಜ, ಸೂರ್ಯಕಾಂತಿ ಬೀಜ ಹಾಗೂ ಒಣ ಖರ್ಜೂರ ಸೇರಿಸಿ 30 ನಿಮಿಷ ನೆನೆಸಿಡಿ. ಬಳಿಕ ಜಾರ್‌ನಲ್ಲಿ 2 ಕಪ್ ಹಾಲು, ಬೆಲ್ಲ, ನೆನೆಸಿದ ಸಾಮಗ್ರಿಗಳನ್ನು ಹಾಕಿ. ಐಸ್ ಕ್ಯೂಬ್ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ತಣ್ಣಗಾಗಿಸಿ ಕುಡಿದರೆ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ.
ಆರೋಗ್ಯ ಲಾಭ: ಶಕ್ತಿವರ್ಧಕ ಪಾನೀಯ, ಜೀರ್ಣಕ್ರಿಯೆಗೆ ಸಹಕಾರಿ, ನೈಸರ್ಗಿಕ ಸಿಹಿತನದಿಂದ ಆರೋಗ್ಯಕರ ಆಯ್ಕೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




