ಹೊಸರುಚಿ – ಮನೆಯಅಡುಗೆ ಮಾತು | ಆರೋಗ್ಯಕರ ಓಟ್ಸ್ ಮಿಲ್ಕ್ ಶೇಕ್ ರೆಸಿಪಿ

January 24, 2026
6:26 AM

ಆರೋಗ್ಯಕರ ಓಟ್ಸ್ ಮಿಲ್ಕ್ ಶೇಕ್ ರೆಸಿಪಿ : ಶಕ್ತಿ ಮತ್ತು ಪೌಷ್ಟಿಕಾಂಶ ತುಂಬಿದ ಓಟ್ಸ್ ಮಿಲ್ಕ್ ಶೇಕ್‌ನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು: ಓಟ್ಸ್ – 1/2 ಕಪ್, ಹಾಲು – 2 ಕಪ್, ಕಲ್ಲಂಗಡಿ ಬೀಜ – 1/2 ಚಮಚ, ಸೂರ್ಯಕಾಂತಿ ಬೀಜ – 1/2 ಚಮಚ, ಒಣ ಖರ್ಜೂರ – 2, ಬೆಲ್ಲ – 2 ಚಮಚ, ಐಸ್ ಕ್ಯೂಬ್‌ಗಳು – ಅಗತ್ಯಷ್ಟು

ತಯಾರಿಸುವ ವಿಧಾನ: ಓಟ್ಸ್‌ನ್ನು 1/2 ಕಪ್ ಹಾಲಿನಲ್ಲಿ ನೆನೆಸಿ. ಅದಕ್ಕೆ ಕಲ್ಲಂಗಡಿ ಬೀಜ, ಸೂರ್ಯಕಾಂತಿ ಬೀಜ ಹಾಗೂ ಒಣ ಖರ್ಜೂರ ಸೇರಿಸಿ 30 ನಿಮಿಷ ನೆನೆಸಿಡಿ. ಬಳಿಕ ಜಾರ್‌ನಲ್ಲಿ 2 ಕಪ್ ಹಾಲು, ಬೆಲ್ಲ, ನೆನೆಸಿದ ಸಾಮಗ್ರಿಗಳನ್ನು ಹಾಕಿ. ಐಸ್ ಕ್ಯೂಬ್ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ತಣ್ಣಗಾಗಿಸಿ ಕುಡಿದರೆ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ.

ಆರೋಗ್ಯ ಲಾಭ: ಶಕ್ತಿವರ್ಧಕ ಪಾನೀಯ, ಜೀರ್ಣಕ್ರಿಯೆಗೆ ಸಹಕಾರಿ, ನೈಸರ್ಗಿಕ ಸಿಹಿತನದಿಂದ ಆರೋಗ್ಯಕರ ಆಯ್ಕೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಚಾಮರಾಜನಗರದಲ್ಲಿ ರೈತರಿಗೆ 12 ತಿಂಗಳ ಕೃಷಿ ಸಾಲ ಮರುಪಾವತಿ ಮುಂದೂಡಿಕೆ
October 24, 2026
8:09 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3.0 ತೀವ್ರತೆಯ ಭೂಕಂಪ ದಾಖಲು
October 23, 2026
8:40 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-10-2026 | ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯ ಮುನ್ಸೂಚನೆ
October 23, 2026
6:41 PM
by: ಸಾಯಿಶೇಖರ್ ಕರಿಕಳ
ಕಿರಾಣಿ ಅಂಗಡಿಯಿಂದ ದಾಳಿಂಬೆ ಕೃಷಿಯತ್ತ ಯಶಸ್ವಿ ಜಿಗಿತ
October 23, 2026
10:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror