ನುಗ್ಗೆ ಸೊಪ್ಪು ತಿಂದರೆ ನೈಸರ್ಗಿಕವಾಗಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಸಸ್ಯ ಆಧಾರಿತ ಪ್ರೋಟೀನ್ ಗಳು ಆಧಾರಿತವಾಗಿರುವುದರಿಂದ ಸ್ನಾಯುಗಳ ಕಾರ್ಯ ಮತ್ತು ಮೂಳೆಯ ಬಲವನ್ನು ಬೆಂಬಲಿಸುತ್ತದೆ. ಇದರಿಂದ ನುಗ್ಗೆ ಸೊಪ್ಪು ದೇಹಕ್ಕೆ ತುಂಬಾ ಉತ್ತಮ. ಮನೆಯಲ್ಲಿ ನುಗ್ಗೆ ಸೊಪ್ಪುವಿನ ಪಲ್ಯವನ್ನು ಮಾಡಿದರೆ ಎಷ್ಟೋ ಜನರು ತಿನ್ನಲು ಹಿಂಜರಿಯುತ್ತಾರೆ. ಇಂತಹವರಿಗಾಗಿ ನುಗ್ಗೆ ಸೊಪ್ಪಿನ ಜ್ಯೂಸ್ ಉತ್ತಮ. ಆದರಲ್ಲೂ ಮಕ್ಕಳಿಗೂ ಹಾಗೂ ವಯಸ್ಸದವರಿಗೂ ಇನ್ನೂ ಒಳಿತು. ಏಕೆಂದರೆ ಈ ಜ್ಯೂಸ್ ಮೂಳೆಯ ಬಲ ಮತ್ತು ಸ್ನಾಯುಗಳ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಮತ್ತು ಊರಿಯೂತವನ್ನು ಕಡಿಮೆ ಮಾಡುದಷ್ಟೇ ಅಲ್ಲದೇ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ನುಗ್ಗೆ ಸೊಪ್ಪಿನ ಜ್ಯೂಸ್ ಮಾಡುವ ವಿಧಾನ: ತಾಜಾ ನುಗ್ಗೆ ಸೊಪ್ಪನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ. ಅದಕ್ಕೆ ಬೇಕಾದಷ್ಟು ಈರು ಸೇರಿಸಿ, ನಿಂಬೆ ರಸ ಮತ್ತು ಒಂದು ತುಂಡು ಶುಂಠಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಈ ಜ್ಯೂಸ್ ಅನ್ನು ಶೋಧಿಸಿ ಇಟ್ಟುಕೊಳ್ಳಿ. ಇದಕ್ಕೆ ಬೇಕಿದ್ದರೆ ಜೇನುತುಪ್ಪ ಸೇರಿಸಿ ಸಹ ಕುಡಿಯಬಹುದು.

