ಕೇಂದ್ರ ಸರ್ಕಾರಿ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳು ಜಂಟಿ ಸಹಯೋಗದಲ್ಲಿ ದೇಶಾದ್ಯಂತ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಒಟ್ಟಾರೆ 3,410 ತಪಾಸಣೆ ಮತ್ತು ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಲಕ್ಷಾಂತರ ಮಹಿಳೆಯರು, ಮಕ್ಕಳು ಮತ್ತು ಕುಟುಂಬಗಳು ಸಮಗ್ರ ಆರೋಗ್ಯ ಸೇವೆಗಳ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಸೆಪ್ಟೆಂಬರ್ 17ರಂದು ಆರಂಭವಾದ ಅಭಿಯಾನದಲ್ಲಿ ಸೆಪ್ಟೆಂಬರ್ 20ರ ವೇಳೆಗೆ 2.83 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆಸಲಾಗಿದ್ದು, ದೇಶಾದ್ಯಂತ 76 ಲಕ್ಷಕ್ಕೂ ಹೆಚ್ಚು ನಾಗರಿಕರು ಭಾಗಿಯಾದ್ದಾರೆ. ಅಭಿಯಾನದಲ್ಲಿ ಫಲಾನುಭವಿಗಳಿಗೆ ಸುಧಾರಿತ ತಪಾಸಣೆ, ರೋಗನಿರ್ಣಯ, ಸಮಾಲೋಚನೆ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಆ ಮೂಲಕ ರಾಜ್ಯ ಸರ್ಕಾರಗಳು ಮತ್ತು ಸಮುದಾಯ ಮಟ್ಟದ ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳಿಗೆ ಪೂರಕವಾಗಿವೆ. ಆಯುಷ್ಮಾನ್ ಆರೋಗ್ಯ ಮಂದಿರಗಳು, ಏಮ್ಸ್, ಇತರ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು (ಐ.ಎನ್.ಐಗಳು), ತೃತೀಯ ಆರೈಕೆ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳು ಸೇರಿದಂತೆ ಎನ್‌ಎಚ್‌ಎಂ ಆರೋಗ್ಯ ಶಿಬಿರಗಳ ವ್ಯಾಪಕ ಜಾಲದ ಜೊತೆಗೆ ಈ ರಾಷ್ಟ್ರೀಯ ಅಭಿಯಾನವು ಮುಂಚೂಣಿಯಲ್ಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

