ತೆಲಂಗಾಣ ಹಾಗೂ ಹೈದ್ರಾಬಾದ್ ಪ್ರದೇಶದಲ್ಲಿ ಹೀಟ್‌ವೇವ್ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ ಅಲೆಯ ಪರಿಸ್ಥಿತಿಗಳಿಗೆ ಸಾರ್ವಜನಿಕರು ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತೆಲಂಗಾಣ ಸರ್ಕಾರ ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಸೂಚಿಸಿದೆ.
ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು 12 ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ನೆಡೆಸಿದ ಸಭೆಯಲ್ಲಿ ಈ ನಿರ್ದೇಶನಗಳನ್ನು ನೀಡಿದರು. ಜೂನ್ ವರೆಗೆ ತೆಲಂಗಾಣದಲ್ಲಿ ಅತಿಯಾದ ಶಾಖ ಮತ್ತು ದೀರ್ಘಕಾಲದ ಅಧಿಕ ತಾಪಮಾನವನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಯಿತು. ತೆಲಂಗಾಣ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ, ಹವಾಮಾನ ಇಲಾಖೆಯ ಸಹಯೋಗದೊಂದಿಗೆ, ತೆಲಂಗಾಣ ರಾಜ್ಯದ ಉಷ್ಣ ಅಲೆಯ ಸಂದರ್ಭ ಸುರಕ್ಷತಾ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ – 2025 ಅನ್ನು ಸಿದ್ಧಪಡಿಸಿದೆ. ರಾಜ್ಯದ 612 ಮಂಡಲಗಳಲ್ಲಿ 588 ಮಂಡಲಗಳನ್ನು ಅಧಿಕೃತವಾಗಿ ಶಾಖದ ಅಲೆ ಪೀಡಿತ ಮಂಡಲಗಳೆಂದು ವರ್ಗೀಕರಿಸಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel