Karnataka Weather | ದೇಶದಲ್ಲಿ ಉಷ್ಣ ಮಾರುತದ ಆತಂಕ | ರಾಜ್ಯದಲ್ಲಿ ಪರಿಣಾಮ ಏನು ? ಈಗ ಹೇಗಿದೆ ಉಷ್ಣ ಮಾರುತ ಪ್ರಭಾವ |

March 4, 2024
10:29 PM
ಮಾರ್ಚ್ ನಿಂದ ಮೇ ತಿಂಗಳ ಕೊನೆಯ ತನಕ ಭಾರತದ ಹೆಚ್ಚಿನ ಭಾಗಗಳಲ್ಲಿಉಷ್ಣ ಮಾರುತ ಬೀಸುವ ಆತಂಕ ಇದೆ. ರಾಜ್ಯದಲ್ಲಿ ಏನೇನು ಪರಿಣಾಮವಾಗಬಹುದು ?

ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ 2024 ಮಾರ್ಚ್ ನಿಂದ ಮೇ ತಿಂಗಳ ಕೊನೆಯ ತನಕ ಭಾರತದ ಹೆಚ್ಚಿನ ಭಾಗಗಳಲ್ಲಿ (ಮಧ್ಯ ಭಾರತ, ದಕ್ಷಿಣ ಭಾರತದ ಉತ್ತರ ಕರ್ನಾಟಕ, ಆಂಧ್ರಾ ತನಕ) ಉಷ್ಣ ಮಾರುತ ಬೀಸುವ ಆತಂಕ ಇದೆ. ಸದ್ಯ ಉಷ್ಣ ಮಾರುತದ ಪ್ರಭಾವ ತಗ್ಗಿದೆ. 

Advertisement
Advertisement

ಕರ್ನಾಟಕದಲ್ಲಿ ಉಷ್ಣ ಮಾರುತ ಪರಿಣಾಮ : ಉತ್ತರ ಕರ್ನಾಟಕ ಹೆಚ್ಚಿನ ಭಾಗಗಳಲ್ಲಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಉಷ್ಣ ಮಾರುತ ಬೀಸುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಎಲ್ನಿನೋ ಪ್ರಭಾವ ಕುಸಿತಗೊಳ್ಳುತ್ತಿದ್ದರೂ ಸಂಪೂರ್ಣ ಶಿಥಿಲಗೊಂಡಿಲ್ಲ. ಉತ್ತರದ ಕಡೆಯಿಂದ ಉಷ್ಣ ಮಾರುತಗಳು ಆರಂಭವಾದರೆ ಶುಷ್ಕ ಹವೆ ಮುಂದುವರಿಯಬಹುದು. ಮಾರ್ಚ್ ತಿಂಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುವ ಲಕ್ಷಣ ಇದೆ. ವರದಿಯಂತೆ ಪೆಸಿಫಿಕ್ ಸಾಗರ ಹಾಗೂ ಹಿಂದೂಮಹಾಸಾಗರದ ಮೇಲ್ಮೈ ಉಷ್ಣತೆ ಈಗಾಗಲೇ ಸಾಮಾನ್ಯಕ್ಕಿಂತ ಹೆಚ್ಚಿದೆ.ಹಾಗಾಗಿ ಉಷ್ಣ ಮಾರುತದ ಜೊತೆಗೆ ಅರಬ್ಬಿ ಸಮುದ್ರ ಅಥವಾ ಬಂಗಾಳಕೊಲ್ಲಿಯಲ್ಲಿಯ ಮೂಲಕ ಗಾಳಿ ಭೂಮಿಗೆ ಬೀಸಲು ಆರಂಭವಾದರೆ ಮಳೆಯ ಸಾಧ್ಯತೆ ಇರಬಹುದು.

Advertisement
ಹವಾಮಾನ ಇಲಾಖೆಯ ವಿಶ್ಲೇಷಣೆ
ಕಳೆದ ವರ್ಷ ಎಲ್ ನಿನೋ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿ ರಾಜ್ಯದಲ್ಲಿ ಮಳೆ ಕೊರತೆಯಾಗಿತ್ತು. ಆದರೆ, ಜಾಗತಿಕ ನಿಯಂತ್ರಕ ಸೂಚ್ಯಂಕದ ಪ್ರಕಾರ ಕಳೆದ ಫೆಬ್ರವರಿಯಿಂದ ಎಲ್ ನಿನೋ ಮಧ್ಯಮ ಹಂತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ವಿಜ್ಞಾನಿ ಎ.ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಫೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ ಲಾ-ನಿನಾ ಎಂದು ಕರೆಯಲಾಗುತ್ತಿದ ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮಳೆ ಮೇಲೆ ಪರಿಣಾಮ ಬೀರಲಿದೆ. ಈ ವರ್ಷ ಇವೆರಡೂ ಸಾಧಾರಣ ಮಟ್ಟದಲ್ಲಿ ಇರುವುದರಿಂದ ಮುಂಗಾರು, ಹಿಂಗಾರಿನಲ್ಲಿ ಉತ್ತಮ ವರ್ಷಧಾರೆಯಾಗಲಿದೆ.ಏಪ್ರಿಲ್ ಮೊದಲ ವಾರದಿಂದ ಕೆಲವೆಡೆ ವರ್ಷಧಾರೆಯಾಗಲಿದೆ ಎಂದು ಮಾಹಿತಿ ನೀಡಿದರು.

From March to the end of May, there is an heat wave blowing in most parts of India. What can be the effect in the Karnataka state?

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಸ ಎಸೆದರೂ “ದಂಡ” | ರಥಬೀದಿಯಲ್ಲಿ ಮಲಗಿದರೂ “ದಂಡ” |
May 9, 2024
10:10 PM
by: ಮಹೇಶ್ ಪುಚ್ಚಪ್ಪಾಡಿ
ಬೆಳೆಗಳಿಗೆ ಕೀಟನಾಶಕ ಸಿಂಪಡಣೆಗೆ ಡ್ರೋನ್‌ ಬಳಕೆ | 1 ವರ್ಷಕ್ಕೆ ಅನುಮೋದನೆಯನ್ನು ವಿಸ್ತರಿಸಿದ ಸರ್ಕಾರ
May 9, 2024
8:27 PM
by: ದ ರೂರಲ್ ಮಿರರ್.ಕಾಂ
Karnataka Weather | 09-05-2024 | ಅಲ್ಲಲ್ಲಿ ಗುಡುಗು ಸಹಿತ ಮಳೆ | ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ |
May 9, 2024
12:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ
May 8, 2024
9:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror