ವೆದರ್‌ ಮಿರರ್‌ | ದೆಹಲಿಯಲ್ಲಿ ಗರಿಷ್ಟ ತಾಪಮಾನ | ಎಲ್ಲೋ ಎಲರ್ಟ್‌ ಘೋಷಣೆ | 46 ಡಿಗ್ರಿ ಸೆಲ್ಸಿಯಸ್‌ ತಲಪುವ ಸಾಧ್ಯತೆ |

Advertisement

ದೆಹಲಿಯಲ್ಲಿ ಗರಿಷ್ಠ ತಾಪಮಾನ 44.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಭಾರತೀಯ ಹವಾಮಾನ ಇಲಾಖೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಹೀಟ್‌ ವೇವ್‌ ಕಾರಣದಿಂದ ಎಲ್ಲೋ ಎಲರ್ಟ್‌ ಎಚ್ಚರಿಕೆಯನ್ನು ನೀಡಿದೆ. ಎ.28 ರಂದು ದೆಹಲಿಯ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 46 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆಯೇ ಏಪ್ರಿಲ್ 29 ರಂದು ಉತ್ತರ ಭಾರತದಲ್ಲಿ ಧೂಳಿನ ಚಂಡಮಾರುತ, ಗಾಳಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement

ಆದರೆ, ರಾಷ್ಟ್ರ ರಾಜಧಾನಿಯಲ್ಲಿ ಮೇ 1-2 ರಿಂದ ತಾಪಮಾನ ಕಡಿಮೆಯಾಗಲಿದೆ. ದೆಹಲಿಯ ಪೂರ್ವ ಪ್ರದೇಶವು ಏಪ್ರಿಲ್ 30 ರಿಂದಲೇ ತಾಪಮಾನ ಕಡಿಮೆಯಾಗಬಹುದಾಗಿದೆ ಎಂದು ಇಲಾಖೆ ಹೇಳಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ ದೆಹಲಿಯ ಸಫ್ದರ್‌ಜಂಗ್ ವೀಕ್ಷಣಾಲಯವು ಮಂಗಳವಾರ ಗರಿಷ್ಠ ತಾಪಮಾನ 40.8 ಡಿಗ್ರಿ ಸೆಲ್ಸಿಯಸ್ ಎಂದು ವರದಿ ಮಾಡಿದೆ. ದೆಹಲಿಯಲ್ಲಿ ಏಪ್ರಿಲ್ ತಿಂಗಳ ಸಾರ್ವಕಾಲಿಕ ಗರಿಷ್ಠ ತಾಪಮಾನವು 1941 ರಲ್ಲಿ 45.6 ಡಿಗ್ರಿ ಸೆಲ್ಸಿಯಸ್ ಆಗಿತ್ತು.

Advertisement
Advertisement
Advertisement

ತೆಲಂಗಾಣ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ, ಛತ್ತೀಸ್‌ಗಢ ಮತ್ತು ದೆಹಲಿಯು ಹೀಟ್ ವೇವ್  ಪ್ರದೇಶವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಶಾಖದ ಪೀಡಿತ ಪ್ರದೇಶವಾಗಿದೆ.

ಹೀಟ್‌ ವೇವ್‌ ಅಥವಾ ಅಧಿಕ ತಾಪಮಾನವು  ಜನರಿಗೆ  ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಹವಾಮಾನ ಸಂಸ್ಥೆ ಸೂಚಿಸಿದೆ. ಆದ್ದರಿಂದ ಈ ಪ್ರದೇಶಗಳ ಜನರು ಶಾಖಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು, ಹಗುರವಾದ, ತಿಳಿ ಬಣ್ಣದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಬೇಕು ಮತ್ತು ಬಟ್ಟೆ, ಟೋಪಿ ಅಥವಾ ಛತ್ರಿ ಇತ್ಯಾದಿಗಳನ್ನು ಬಳಸಿ ತಲೆಯನ್ನು ಮುಚ್ಚಬೇಕು. ಈ ಕಾರಣದಿಂದಲೇ ಎಲ್ಲೋ ಎಲರ್ಟ್‌ ಘೋಷಣೆ ಮಾಡಲಾಗಿದೆ.

Advertisement
Advertisement

ಕಳೆದ 122 ವರ್ಷಗಳಲ್ಲಿ ಭಾರತವು ಅಧಿಕ ತಾಪಮಾನದ ಮಾರ್ಚ್ ಅನ್ನು ಈ ಬಾರಿ ದಾಖಲಿಸಿದೆ, ತೀವ್ರವಾದ ಶಾಖದ ಅಲೆಯು ತಿಂಗಳ ಅವಧಿಯಲ್ಲಿ ದೇಶದ ಕೆಲವು ಪ್ರದೇಶದಲ್ಲಿ ಪ್ರತೀ ವರ್ಷ ಸಮಸ್ಯೆ ತರುತ್ತದೆ. ಕೃಷಿ ಸೇರಿದಂತೆ ಕುಡಿಯುವ ನೀರಿಗೂ ತೊಂದರೆಯಾಗುತ್ತದೆ. ಅಕಾಲಿಕ ತಾಪಮಾನದಿಂದ ದೇಶದ ಕೆಲವು ಭಾಗಗಳಲ್ಲಿ ಗೋಧಿ ಇಳುವರಿಯು 35 ಪ್ರತಿಶತದಷ್ಟು ಕುಸಿಯುತ್ತಿದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ವೆದರ್‌ ಮಿರರ್‌ | ದೆಹಲಿಯಲ್ಲಿ ಗರಿಷ್ಟ ತಾಪಮಾನ | ಎಲ್ಲೋ ಎಲರ್ಟ್‌ ಘೋಷಣೆ | 46 ಡಿಗ್ರಿ ಸೆಲ್ಸಿಯಸ್‌ ತಲಪುವ ಸಾಧ್ಯತೆ |"

Leave a comment

Your email address will not be published.


*