ಸೋಮವಾರ ರಾತ್ರಿ ಕಲ್ಮಕಾರು-ಕೊಲ್ಲಮೊಗ್ರ ಪ್ರದೇಶದಲ್ಲಿ ಮೇಘಸ್ಫೋಟಗೊಂಡು ಭಾರೀ ಮಳೆಯಾಗಿತ್ತು. ಭಾನುವಾರ ಸಂಜೆ ಜಲಸ್ಫೋಟದೊಂದಿಗೆ ಭೂಕುಸಿತ ಸಂಭವಿತ್ತು. ಇದೀಗ ಮಂಗಳವಾರ ರಾತ್ರಿಯೂ ಮಳೆಯಾಗುತ್ತಿದೆ. ಆದರೆ ಈ ಪ್ರದೇಶದಲ್ಲಿ ಮಳೆಯ ಅಬ್ಬರ, ತಕ್ಷಣದ ನೆರವಿಗೆ ಸಂಪರ್ಕ ಮಾಡಲು ಈಗಲೂ ಸೂಕ್ತ ನೆಟ್ವರ್ಕ್ ವ್ಯವಸ್ಥೆ ಇಲ್ಲವಾಗಿದೆ. ಸಚಿವರು, ಅಧಿಕಾರಿಗಳು ಬಂದಾಗ ಆನ್ ಆಗುವ ಬಿ ಎಸ್ ಎನ್ ಎಲ್ ನೆಟ್ವರ್ಕ್ ನಂತರ ಮಾಯವಾಗಿದೆ ಎಂದು ಕಲ್ಮಕಾರು-ಕೊಲ್ಲಮೊಗ್ರ ಜನರು ತಿಳಿಸಿದ್ದಾರೆ. ಜನರಿಗೆ ಅಗತ್ಯ ಸಮಯದಲ್ಲೂ ನೆಟ್ವರ್ಕ್ ವ್ಯವಸ್ಥೆಯ ಬಗ್ಗೆ ಎಚ್ಚರವಾಗದೇ ಇದ್ದರೆ ಇನ್ಯಾವಾಗ ? ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಕಳೆದ ಹಲವು ಸಮಯಗಳಿಂದ ಕಲ್ಮಕಾರು-ಕೊಲ್ಲಮೊಗ್ರ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ವಿದ್ಯುತ ಸಂಪರ್ಕ ಕಡಿತಗೊಂಡ ತಕ್ಷಣವೇ ನೆಟ್ವರ್ಕ್ ಆಫ್ ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಬಿ ಎಸ್ ಎನ್ ಎಲ್ ನೆಟ್ವರ್ಕ್ ಬಹುಮಂದಿಯನ್ನು ತಲಪುತ್ತದೆ. ಈಚೆಗೆ ಜಿಯೋ ನೆಟ್ವರ್ಕ್ ಕೂಡಾ ಕೆಲವು ಕಡೆ ಲಭ್ಯವಿದೆ ಇಲ್ಲಿ, ಆದರೆ ಗ್ರಾಮೀಣ ಭಾಗದಲ್ಲಿ, ಸೋಮವಾರ ತಡರಾತ್ರಿ ಅಪಾಯಕ್ಕೆ ಸಿಲುಕಿದ ಕಡೆಗಳಲ್ಲಿ ಅದೂ ಸಿಗುತ್ತಿಲ್ಲ, ಲಭ್ಯವಾಗುತ್ತಿದ್ದ ಬಿ ಎಸ್ ಎನ್ ಎಲ್ ನೆಟ್ವರ್ಕ್ ಆಫ್ ಆಗಿತ್ತು. ಆದರೆ ಅಧಿಕಾರಿಗಳು, ಸಚಿವರು ಸ್ಥಳಕ್ಕೆ ಭೇಟಿ ನೀಡುವ ವೇಳೆ ಸಿಗ್ನಲ್ ಲಭ್ಯವಾಗಿತ್ತು, ಆದಾದ ಬಳಿಕ ಸಿಗ್ನಲ್ ಸಿಗುತ್ತಿಲ್ಲ ಎಂಸು ಸ್ಥಳೀಯರು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ನೆಟ್ವರ್ಕ್ ವ್ಯವಸ್ಥೆಗೆ ಬಿ ಎಸ್ ಎನ್ ಎಲ್ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು ಎಂಬುದು ಸ್ಥಳೀಯರ ಒತ್ತಾಯ. ಸೋಮವಾರ ರಾತ್ರಿ ಕೂಡಾ ನೆಟ್ವರ್ಕ್ ಲಭ್ಯವಿದ್ದರೆ ಕೆಲವು ಪ್ರದೇಶ ಮನೆಗಳಿಗೆ ರಕ್ಷಣೆ ನೀಡಬಹುದಿತ್ತು ಎನ್ನುವುದು ಸ್ಥಳೀಯರ ಮಾಹಿತಿ.
ಹೀಗಾಗಿ ಇಲಾಖೆಗಳು ತಕ್ಷಣವೇ ಡೀಸೆಲ್ ವ್ಯವಸ್ಥೆ ಒದಗಿಸಿ ಭೀಕರ ಮಳೆಯ ಈ ಅವಧಿಯಲ್ಲೂ ಖಾಸಗಿ ಟವರ್ ಸಹಿತ ಬಿ ಎಸ್ ಎನ್ ಎಲ್ ನೆಟ್ವರ್ಕ್ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…