ಕಳೆದ ರಾತ್ರಿ ಮತ್ತೆ ಮಹಾಮಳೆ ಸುರಿದಿದೆ. ಪಯಸ್ವಿನಿ ನದಿ ಉಕ್ಕಿ ಹರಿದಿದೆ. ಕಲ್ಲುಗುಂಡಿ, ಸಂಪಾಜೆ , ಗೂನಡ್ಕದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಸಂಪಾಜೆ, ಕಲ್ಲುಗುಂಡಿ, ಗೂನಡ್ಕ ಪ್ರದೇಶ ಎರಡು ದಿನಗಳ ಭಾರೀ ಮಳೆ ತತ್ತರವಾಗಿದೆ.
ಸಂಪಾಜೆ ಕೊಯನಾಡುನಲ್ಲಿ ನೆರೆ ಸೃಷ್ಟಿಯಾಗಿದೆ. ಸಂಪಾಜೆಯ ಮೇಲಿನ ಪ್ರದೇಶದಲ್ಲಿ ಭಾರೀ ಮಳೆಯಾದ್ದರಿಂದ ನೆರೆ ಸೃಷ್ಟಿಯಾಗಿತ್ತು. ಕೆಲವು ಮನೆಗಳ ಸ್ಥಳಾಂತರ ಮಾಡಲಾಗಿದೆ. ಕಲ್ಲುಗುಂಡಿಯ ಕೂಲಿಶೆಡ್ ಬಳಿ ನೀರು ನಿಂತಿರುವುದರಿಂದ ಸುಳ್ಯ-ಮಡಿಕೇರಿ ರಸ್ತೆ ಸಂಚಾರ ಬಂದ್ ಆಗಿದೆ. ಉಳಿದಂತೆ ಕಲ್ಲುಗುಂಡಿ ಪ್ರದೇಶದಲ್ಲಿ ಹಲವು ತೋಟ, ಮನೆಗಳಿಗೂ ನೀರು ನುಗ್ಗಿದೆ. ಸುಳ್ಯದ ಪೆರಾಜೆಯಲ್ಲೂ ನೀರು ಉಕ್ಕಿ ಹರಿದಿದೆ. ಅಲ್ಲಿನ ನಾಲ್ಕು ಕುಟುಂಬ ಸ್ಥಳಾಂತರ ಮಾಡಲಾಗಿದೆ. ಅರಂಬೂರು ಬಳಿ ತೂಗು ಸೇತುವೆಯ ಮೇಲೆ ನೀರು ಹರಿದಿದೆ.
ಸಂಪಾಜೆ ಪ್ರದೇಶದಲ್ಲಿ ಭಾರೀ ಮಳೆ | ಉಕ್ಕಿ ಹರಿದ ಪಯಸ್ವಿನಿ ನದಿ | ಸುಳ್ಯದ ಅರಂಬೂರು ಬಳಿಯ ಚಿತ್ರಣ|#HeavyRain #rain #Karnatakarains #ಮಳೆ #ಸುಳ್ಯ #ಸಂಪಾಜೆ #sullia #ruralmirror pic.twitter.com/FwkJO4HhBr
— theruralmirror (@ruralmirror) August 3, 2022
Advertisement
ಕಡಬ ಪ್ರದೇಶದಲ್ಲಿಯೂ ಭಾರೀ ಮಳೆಯಾಗಿದ್ದು, ನೆಟ್ಟಣ, ರೆಂಜಿಲಾಡಿ ಪ್ರದೇಶದಲ್ಲಿ ಹೊಳೆ ಉಕ್ಕಿ ಹರಿದಿದೆ. ಹೀಗಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ.ಏಳು ಮಂದಿಯ ರಕ್ಷಣೆ ಮಾಡಲಾಗಿದೆ.
ಉಕ್ಕಿ ಹರಿದ ಪಯಸ್ವಿನಿ ನದಿ | ಹಲವು ಮನೆಗಳು ಜಲಾವೃತ | ಅರಂಬೂರು ತೂಗು ಸೇತುವೆಯ ಮೇಲೆ ಹರಿದ ನೀರು |
Heavy rain at Sampaje, Sullia. Waterlogged into foot bridge near Aramboor #HeavyRain #rain #ಮಳೆ #ಸುಳ್ಯ #ಸಂಪಾಜೆ #Karnatakarains #ruralmirror pic.twitter.com/oboINc8xcV
Advertisement— theruralmirror (@ruralmirror) August 3, 2022