ಕಳೆದ ರಾತ್ರಿ ಮತ್ತೆ ಮಹಾಮಳೆ ಸುರಿದಿದೆ. ಪಯಸ್ವಿನಿ ನದಿ ಉಕ್ಕಿ ಹರಿದಿದೆ. ಕಲ್ಲುಗುಂಡಿ, ಸಂಪಾಜೆ , ಗೂನಡ್ಕದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಸಂಪಾಜೆ, ಕಲ್ಲುಗುಂಡಿ, ಗೂನಡ್ಕ ಪ್ರದೇಶ ಎರಡು ದಿನಗಳ ಭಾರೀ ಮಳೆ ತತ್ತರವಾಗಿದೆ.
ಸಂಪಾಜೆ ಕೊಯನಾಡುನಲ್ಲಿ ನೆರೆ ಸೃಷ್ಟಿಯಾಗಿದೆ. ಸಂಪಾಜೆಯ ಮೇಲಿನ ಪ್ರದೇಶದಲ್ಲಿ ಭಾರೀ ಮಳೆಯಾದ್ದರಿಂದ ನೆರೆ ಸೃಷ್ಟಿಯಾಗಿತ್ತು. ಕೆಲವು ಮನೆಗಳ ಸ್ಥಳಾಂತರ ಮಾಡಲಾಗಿದೆ. ಕಲ್ಲುಗುಂಡಿಯ ಕೂಲಿಶೆಡ್ ಬಳಿ ನೀರು ನಿಂತಿರುವುದರಿಂದ ಸುಳ್ಯ-ಮಡಿಕೇರಿ ರಸ್ತೆ ಸಂಚಾರ ಬಂದ್ ಆಗಿದೆ. ಉಳಿದಂತೆ ಕಲ್ಲುಗುಂಡಿ ಪ್ರದೇಶದಲ್ಲಿ ಹಲವು ತೋಟ, ಮನೆಗಳಿಗೂ ನೀರು ನುಗ್ಗಿದೆ. ಸುಳ್ಯದ ಪೆರಾಜೆಯಲ್ಲೂ ನೀರು ಉಕ್ಕಿ ಹರಿದಿದೆ. ಅಲ್ಲಿನ ನಾಲ್ಕು ಕುಟುಂಬ ಸ್ಥಳಾಂತರ ಮಾಡಲಾಗಿದೆ. ಅರಂಬೂರು ಬಳಿ ತೂಗು ಸೇತುವೆಯ ಮೇಲೆ ನೀರು ಹರಿದಿದೆ.
ಕಡಬ ಪ್ರದೇಶದಲ್ಲಿಯೂ ಭಾರೀ ಮಳೆಯಾಗಿದ್ದು, ನೆಟ್ಟಣ, ರೆಂಜಿಲಾಡಿ ಪ್ರದೇಶದಲ್ಲಿ ಹೊಳೆ ಉಕ್ಕಿ ಹರಿದಿದೆ. ಹೀಗಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ.ಏಳು ಮಂದಿಯ ರಕ್ಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…