ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಬುಧವಾರ ಭರ್ಜರಿ ಮಳೆಯಾಗಿದೆ. ಸುಳ್ಯ ತಾಲೂಕಿನಲ್ಲಿ ಮಧ್ಯಾಹ್ನ 2.30 ರಿಂದ ಆರಂಭವಾದ ಮಳೆ ಸಂಜೆಯವರೆಗೆ ಧಾರಾಕಾರವಾಗಿ ಸುರಿಯಿತು. ಸುಳ್ಯ ನಗರದಲ್ಲಿ 56 ಮಿಮೀ ಮಳೆಯಾಗಿದೆ. ಉಳಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಭಾರೀ ಮಳೆಯಾಗಿದೆ. ಹೈದರಾಬಾದ್, ತೆಲಂಗಾಣದಲ್ಲೂ ಭಾರೀ ಮಳೆಯಾಗಿದ್ದು ಮೇಘಸ್ಫೋಟದ ಅನುಭವವಾಗಿದೆ.
ಬುಧವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಸುರಿದ ಭಾರೀ ಮಳೆಗೆ ಕೆಲ ಕಾಲ ಸಂಕಷ್ಟ ತಂದೊಟ್ಟಿತು. ಸುಳ್ಯ ನಗರದಲ್ಲಿ 56 ಮಿಮೀ ಮಳೆಯಾದರೆ ವಿವಿಧ ಕಡೆಗಳಲ್ಲಿ 40 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಪುತ್ತೂರು ಸೇರಿದಂತೆ ಉಳಿದ ತಾಲೂಕಿನಲ್ಲಿ ಮಳೆಯ ಅಬ್ಬರ ಕಡಿಮೆ ಇತ್ತು.
Heavy #rain in dakshina Kannada and various Places of #karnataka pic.twitter.com/Gt4rSF9DLI
— theruralmirror (@ruralmirror) May 4, 2022
ಚಿಕ್ಕಮಗಳೂರಿನಲ್ಲಿ ಭಾರೀ ಮಳೆ ಸುರಿದಿತ್ತು. ಬೆಂಗಳೂರಿನಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದೆ. ಮಳೆಯ ಜೊತೆಗೆ ಗುಡುಗಿನ ಆರ್ಭಟವೂ ಹೆಚ್ಚಾಗಿತ್ತು. ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.
ರಾಷ್ಟ್ರ ರಾಜಧಾನಿಯಲ್ಲೂ ಮಳೆ ಸುರಿದು ಇದುವರೆಗಿನ ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನರಿಗೆ ಕೊಂಚ ನಿರಾಳವಾಯಿತು. ತಾಪಮಾನ ಏರಿಕೆಯಿಂದ ದೆಹಲಿ ತತ್ತರಿಸಿತ್ತು.

ಬುಧವಾರ ಮುಂಜಾನೆ ಹೈದರಾಬಾದ್‌ನ ಕೆಲವು ಭಾಗಗಳಲ್ಲಿ ಬಿರುಗಾಳಿ ಮತ್ತು ಮಿಂಚು ಸಹಿತ ಭಾರೀ ಮಳೆ ಸುರಿಯಿತು. ಇದರಿಂದ ಬಿಸಿಲಿನ ತಾಪಕ್ಕೆ ಪರಿಹಾರ ದೊರೆತರೂ ಭಾರೀ ಮಳೆ ಸಂಕಷ್ಟ ತಂದಿತ್ತು. ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿತ್ತು. ತೆಲಂಗಾಣದಲ್ಲೀ ಭಾರೀ ಮಳೆಯಿಂದ ಸಂಕಷ್ಟವಾಯಿತು.ಮೇಘಸ್ಫೋಟದ ಮಾದರಿಯಲ್ಲಿ ಮಳೆ ಸುರಿದಿತ್ತು. ತೆಲಂಗಾಣದ ಸಿದ್ದಿಪುರ ಜಿಲ್ಲೆಯ ಹಬ್ಸಿಪುರದಲ್ಲಿ ಬೆಳಿಗ್ಗೆ 6 ಗಂಟೆಯವರೆಗೆ 108 ಮಿಮೀ ಮಳೆ ದಾಖಲಿಸಿದೆ. ಹೈದರಾಬಾದ್‌ನಲ್ಲಿ, ಸಿಕಂದರಾಬಾದ್ ಬಳಿಯ ಸೀತಾಫಲಮಂಡಿಯಲ್ಲಿ 72.8 ಮಿಮೀ ಮಳೆಯಾಗಿದೆ.