ನಮ್ಮ ರಕ್ಷಣಾ ವಲಯಕ್ಕೆ(Military sectoir) ಬೇಕಾದ ಸಾಮಾಗ್ರಿಗಳು, ಶಸ್ತ್ರಾಸ್ತ್ರಗಳು(weapons), ಯುದ್ಧ ವಿಮಾನಗಳು(Fighting jets), ಹೆಲಿಕಾಫ್ಟರ್‌ಗಳು(Helicopters), ನೌಕೆಗಳು(Navy) ಎಲ್ಲವೂ ವಿದೇಶದಿಂದ(Foreign) ಖರೀದಿಸಲಾಗುತ್ತಿತ್ತು. ಆದರೆ ಈ ಚಿತ್ರಣ ಈಗ ಬದಲಾಗಿದೆ. ವಿದೇಶಗಳಿಂದ ಆಮದು(Import) ಮಾಡಿಕೊಳ್ಳುವ ಕಾಲ ಹೋಯ್ತು. ಈಗ ಏನಿದ್ದರೂ ಆತ್ಮನಿರ್ಭರ ಭಾರತ. ಮೇಕ್ ಇನ್ ಇಂಡಿಯಾ(Make in India) ಯೋಜನೆಯಡಿ ಈಗ ಬಹುತೇಕ ಮಿಲಿಟರಿ ಸಂಬಂಧಿತ ವಸ್ತುಗಳನ್ನು ನಮ್ಮ ದೇಶದಲ್ಲೇ ತಯಾರಿಸಲಾಗುತ್ತಿದೆ. ಅಷ್ಟೆ ಅಲ್ಲದೆ ವಿದೇಶಗಳಿಗೆ ರಫ್ತು(Export) ಕೂಡ ಮಾಡಲಾಗುತ್ತಿದೆ. ಭಾರತ (India) ಹಾಗೂ ಫಿಲಿಪೈನ್ಸ್ ನಡುವೆ ನಡೆದಿದ್ದ ಒಪ್ಪಂದದಂತೆ ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ರೂಸ್ ಕ್ಷಿಪಣಿಗಳು (BrahMos missile) ಫಿಲಿಪೈನ್ಸ್‌ಗೆ (Philippines) ರಫ್ತಾಗಿದೆ.
ಇದೀಗ ಯುದ್ಧ ಸಾಮಗ್ರಿಗಳ ಮೊದಲ ಬ್ಯಾಚ್ ಅಂತಿಮವಾಗಿ ಫಿಲಿಪೈನ್ಸ್‌ಗೆ ತಲುಪಿದೆ. ಪ್ರತಿ ಘಟಕದಲ್ಲೂ ಎರಡು ಕ್ಷಿಪಣಿ ಉಡಾವಣಾ ವ್ಯವಸ್ಥೆ, ರೆಡಾರ್ ಘಟಕ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‍ನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ 10 ಸೆಕೆಂಡುಗಳ ಅವಧಿಯಲ್ಲಿ ಎರಡು ಕ್ಷಿಪಣಿಗಳನ್ನು ಉಡಾಯಿಸಬಲ್ಲದು. ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಜೆಟ್ ಮೂಲಕ ಕ್ಷಿಪಣಿಗಳನ್ನು ಭಾರತದಿಂದ ಫಿಲಿಪೈನ್ಸ್‌ಗೆ ಸಾಗಿಸಿದ್ದು, ಇದು ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡಿದ ಮೊದಲ ನಿದರ್ಶನವಾಗಿದೆ. ಅಜೆರ್ಂಟೀನಾ ಸೇರಿದಂತೆ ಹಲವಾರು ರಾಷ್ಟ್ರಗಳು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸಿವೆ. ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಮಿಲಿಟರಿ ಚಟುವಟಿಕೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿದೆ. ಈ ಹಿನ್ನೆಲೆಯ್ಲಲಿ ಫಿಲಿಪೈನ್ಸ್‌ನೊಂದಿಗೆ ರಕ್ಷಣಾ ಸಹಕಾರವನ್ನು ಬಲಪಡಿಸುವ ಗುರಿಯನ್ನು ಭಾರತ ಹೊಂದಿದೆ. ಬ್ರಹ್ಮೋಸ್ ಕ್ಷಿಪಣಿಯು 2.8 ಮ್ಯಾಕ್ ವೇಗದಲ್ಲಿ ಚಲಿಸುತ್ತದೆ, ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…