ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸುಮಾರು ಎರಡು ಗಂಟೆಯಿಂದ ಭೀಕರ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಕಲ್ಮಕಾರು, ಕಲ್ಲಾಜೆ, ಹರಿಹರ, ಬಾಳುಗೋಡು ಪ್ರದೇಶದಲ್ಲಿ ಭೀಕರ ಮಳೆಯಾಗುತ್ತಿದೆ. ಕಲ್ಲಾಜೆಯಲ್ಲಿ 4 ಗಂಟೆಯಿಂದ ಆರಂಭವಾದ ಮಳೆ ಭೀಕರವಾಗಿ ಸುರಿದಿದೆ. ಇದುವರೆಗೆ 150 ಮಿಮೀಗಿಂತಲೂ ಅಧಿಕ ಮಳೆ ಸುರಿದಿದೆ ಎಂದು ಕಲ್ಲಾಜೆಯ ಸಿಜೋ ಅಬ್ರಹಾಂ ತಿಳಿಸಿದ್ದಾರೆ. ಭಾರೀ ಮಳೆಗೆ ಹೊಳೆ ನೀರು ಹಕ್ಕಿ ಹರಿದು ಕೊಲ್ಲಮೊಗ್ರ ಹಾಗೂ ಹರಿಹರದಲ್ಲಿ ಸೇತುವೆ ಮುಳುಗಡೆಯಾಗಿದೆ.
ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನಿನ್ನೆ ತಡರಾತ್ರಿ ಕಲ್ಮಕಾರು ಪ್ರದೇಶದಲ್ಲಿ ಭೂಕುಸಿತ, ಜಲಸ್ಫೋಟ ಉಂಟಾದರೆ ಇಂದೂ ಕೂಡಾ ಭಾರೀ ಮಳೆಯಾಗುತ್ತಿದೆ. ಸಂಜೆ 4 ಗಂಟೆಗೆ ಆರಂಭವಾದ ಭಾರೀ ಮಳೆ ಸಂಜೆಯವರೆಗೂ ಸುರಿಯುತ್ತಲೇ ಇದೆ. ಕೊಲ್ಲಮೊಗ್ರ -ಕಲ್ಮಕಾರು ರಸ್ತೆ ನಡುವೆ ಕೊಲ್ಲಮೊಗ್ರದ ಬಳಿ ಇರುವ ಸೇತುವೆ ಮುಳುಗಡೆಯಾಗಿದೆ. ಹರಿಹರದಲ್ಲಿಯೂ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಬಾಳುಗೋಡು ಸಂಪರ್ಕ ರಸ್ತೆಯಲ್ಲಿರುವ ಸೇತುವೆ ಮುಳುಗಡೆಯಾಗಿದೆ. ಕಲ್ಲಾಜೆಯಲ್ಲಿ ಭಾರೀ ಮಳೆಯಿಂದ ಹೊಳೆ, ತೋಡುಗಳು ತುಂಬಿ ಹರಿದಿದೆ. ಗ್ರಾಮೀಣ ಜನರಿಗೆ ಭಾರೀ ಮಳೆ ಆತಂಕ ತಂದಿದೆ.ಭಾರೀ ಮಳೆ | ಕೊಲ್ಲಮೊಗ್ರ,ಕಲ್ಮಕಾರು ಪ್ರದೇಶದಲ್ಲಿ | ಕೊಲ್ಲಮೊಗ್ರ ಬಳಿ ಮುಳುಗಿದ ಸೇತುವೆ|
Heavy rain at #Kollamogra and #Kalmakar #Sullia
#ಮಳೆ #rain #HeavyRain #rurmirror pic.twitter.com/izpGlSAdJg— theruralmirror (@ruralmirror) August 1, 2022
Rain at Kollamogra #sullia pic.twitter.com/uw9DaLcrvl
— theruralmirror (@ruralmirror) August 1, 2022

Heavy rain at #Kallaje #sullia
ಕಲ್ಲಾಜೆಯಲ್ಲಿ #ಮಳೆ #rain #HeavyRain pic.twitter.com/nEmsxUTeKU— theruralmirror (@ruralmirror) August 1, 2022
ಸುಳ್ಯ ತಾಲೂಕಿನ ಹರಿಹರದಲ್ಲಿ ಭಾರೀ ಮಳೆಗೆ ಉಕ್ಕಿ ಹರಿದ ನೀರು.ಸೇತುವೆ ಜಲಾವೃತ | #HeavyRain #ಮಳೆ pic.twitter.com/D397QyH4t1
— theruralmirror (@ruralmirror) August 1, 2022




