ಕರಾವಳಿ ಜಿಲ್ಲೆಗಳು ಸೇರಿದಂತೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಅದರಂತೆ ಮಡಿಕೇರಿ#Madikeri ತಾಲೂಕಿನ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಈ ಹಿನ್ನಲೆ ದೋಣಿಕಡವು-ಕೂಡಕಂಡಿ ಪರಂಬು ಸಂಪರ್ಕ ಬೆಸೆಯುವ ಸೇತುವೆ ಜಲಾವೃತವಾಗಿದೆ. ಇತ್ತ ಒಣಗಿ ಹೋಗಿದ್ದ KRS Damಗೆ ಧಾರಾಕಾರ ನೀರು ಹರಿದು ಬರಲು ಆರಂಭವಾಗಿದೆ. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ದೋಣಿಕಡವು-ಕೂಡಕಂಡಿ ಪರಂಬು ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ನಾಲ್ಕು ದಿನಗಳಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಿಲ್ಲ. ಇನ್ನು ಅನಾರೋಗ್ಯ ಪೀಡಿತನನ್ನು ಸ್ಟ್ರೆಚರ್ನಲ್ಲಿ ಎತ್ತಿಕೊಂಡು ಸ್ಥಳೀಯರು ಪ್ರವಾಹ ದಾಟಿದ ಘಟನೆ ನಡೆದಿದೆ. ಕೆಪಿ ರಕ್ಷಿತ್ ಎಂಬಾತ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಹೋಗಬೇಕಾಗಿತ್ತು. ಆದರೆ, ಸೇತುವೆ ಮುಳುಗಡೆಯಾದ ಕಾರಣ ಹೋಗಲಾಗಿರಲಿಲ್ಲ. ಇದೀಗ ಸ್ಥಳೀಯರೇ ಸೇರಿ ಸ್ಟ್ರೆಚರ್ನಲ್ಲಿ ಎತ್ತಿಕೊಂಡು ಹೋಗಿದ್ದಾರೆ.
2023ನೇ ಸಾಲಿನಲ್ಲಿ ಇದೇ ಅಧಿಕ ಪ್ರಮಾಣದ ಒಳಹರಿವು ಆಗಿದೆ. ಡ್ಯಾಂ ಬರಿದಾಗುವ ಸಮಯದಲ್ಲಿ ಈ ಪ್ರಮಾಣದ ಒಳಹರಿವು ಕಾವೇರಿ ನೀರು ಅವಲಂಬಿತ ಜನರಲ್ಲಿ ಮಂದಹಾಸ ತರಿಸಿದೆ. 124.80 ಅಡಿಗಳ ಡ್ಯಾಂ 82.00 ಅಡಿಯಲ್ಲಿ ನೀರಿದೆ. 49.452 ಟಿಎಂಸಿ ಗರಿಷ್ಠ ಸಾಂದ್ರತೆ ಡ್ಯಾಂನಲ್ಲಿ 11.695 ಟಿಎಂಸಿ ನೀರು ಶೇಖರಣೆಯಾಗಿದೆ. ಡ್ಯಾಂನ ಒಳ ಹರಿವಿನ ಪ್ರಮಾಣ 13,499 ಕ್ಯೂಸೆಕ್ ಇದ್ದು, ಡ್ಯಾಂ ಹೊರಹರಿವು 353 ಕ್ಯೂಸೆಕ್ ಇದೆ.
ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಬೆಂಗಳೂರು#Bengaluru ಹಾಗೂ ಮೈಸೂರಿಗೆ #Mysuru ಕುಡಿಯುವ ನೀರಿನ ಸಮಸ್ಯೆಯಾಗುವ ಆತಂಕ ಶುರುವಾಗಿತ್ತು. ಇತ್ತೀಚೆಗೆ ಕೊಡಗಿನಲ್ಲಿ ಮಳೆಯಾದ ಕಾರಣ, ಪ್ರಸಕ್ತ ವರ್ಷದಲ್ಲಿ ಕೆಆರ್‌ಎಸ್ ಡ್ಯಾಂಗೆ ಮೊದಲ ಬಾರಿಗೆ ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel