ಮಂಗಳವಾರ ರಾತ್ರಿ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕಿನ ಮರ್ಕಂಜ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮಂಗಳವಾರ ಸಂಜೆ ಮಳೆಯಾಗಿತ್ತು, ತಡರಾತ್ರಿ ಮತ್ತೆ ಸುರಿದ ಗಾಳಿ ಮಳೆಗೆ ನೂರಾರು ಅಡಿಕೆ ಮರಗಳು, ತೆಂಗು ಹಾಗೂ ಕಾಡು ಮರಗಳು ಧರೆಗೆ ಉರುಳಿದವು. ಗಾಳಿ ಮಳೆಯ ಕಾರಣದಿಂದ ಸುಳ್ಯದ ವಿವಿದೆಡೆ ಕೃಷಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಹಲವು ಕಡೆ ಕಡಿತಗೊಂಡಿದೆ.

ಅಡಿಕೆಹಿತ್ಲು ಪ್ರದೇಶದಲ್ಲಿ ಕೃಷಿ ಹಾನಿ
ಬುಧವಾರ ಬೆಳಗಿನವರೆಗೆ ಮಡಪ್ಪಾಡಿ 26 ಮಿಮೀ , ಸುಳ್ಯ ನಗರದಲ್ಲಿ 13 ಮಿಮೀ, ಕಮಿಲ 12 ಮಿಮೀ, ಕಲ್ಲಾಜೆ 11 ಮಿಮೀ, ಗುತ್ತಿಗಾರು 11 ಮಿಮೀ, ಕಂದ್ರಪ್ಪಾಡಿ 10 ಮಿಮೀ , ಕೊಲ್ಲಮೊಗ್ರದಲ್ಲಿ 7 ಮಿಮೀ ಮಳೆ, ಸುಬ್ರಹ್ಮಣ್ಯ 1 ಮಿಮೀ ಮಳೆಯಾಗಿದೆ.

ಗಾಳಿ ಮಳೆಗೆ ಹಾನಿ, ಅಡಿಕೆಹಿತ್ಲು ಸೀತಾರಾಮ ಭಟ್ ಅವರ ತೋಟದಲ್ಲಿ

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ರಾತ್ರಿ ಸುರಿದ ಭಾರೀ ಗಾಳಿ ಮಳೆ | ಮರ್ಕಂಜ ಪ್ರದೇಶದಲ್ಲಿ ಕೃಷಿ ಹಾನಿ |"