ಮಳೆ ಭಾನುವಾರ ಮುಂಜಾನೆ ಮತ್ತೆ ಅಬ್ಬರಿಸಿದೆ. ಸುಳ್ಯ ತಾಲೂಕಿನ ವಿವಿದೆಡೆ ಭಾರೀ ಗುಡುಗು ಮಳೆಯಾಗಿದೆ. ಪಂಜ ಆಸುಪಾಸಿನಲ್ಲಿ ಭಾರೀ ಗಾಳಿಗೆ ಕೃಷಿಗೆ ಹಾನಿಯಾಗಿದೆ, ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಕೆಲವು ಮನೆಗಳಿಗೂ ಹಾನಿಯಾಗಿದೆ. ವಾರದಲ್ಲಿ ಎರಡನೇ ಬಾರಿಗೆ ಗಾಳಿಯ ಅಬ್ಬರ ಕಂಡುಬಂದಿದೆ. ಮರ್ಕಂಜದಲ್ಲೂ ಗಾಳಿಗೆ ಹಾನಿಯಾಗಿತ್ತು, 3 ದಿನಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. 60 ಕ್ಕೂ ಅಧಿಕ ವಿದ್ಯುತ್ ಕಂಬ ತುಂಡಾಗಿತ್ತು.
Media error: Format(s) not supported or source(s) not found
Download File: https://theruralmirror.com/wp-content/uploads/2022/05/VID-20220501-WA0018.mp4?_=1ಕಳೆದ ಒಂದು ತಿಂಗಳಿನಲ್ಲಿ ಭಾರೀ ಗಾಳಿಗೆ ಕಲ್ಮಡ್ಕ, ಮರ್ಕಂಜ, ಗುತ್ತಿಗಾರಿನ ಕೆಲವು ಕಡೆ, ಪಂಜ ಸೇರಿದಂತೆ ಹಲವು ಕಡೆಗಳಲ್ಲಿ ಹಾನಿಯಾಗಿದೆ. ಮಧ್ಯಾಹ್ನದ ವೇಳೆಗೆ ವಿಪರೀತ ತಾಪಮಾನ ಹಾಗೂ ಸಂಜೆಯ ವೇಳೆಗೆ ಮಳೆ. ಈ ಎರಡು ಕಾರಣದಿಂದ ಕೃಷಿಗೆ ಹಾನಿಯಾಗುತ್ತಿದೆ, ಗ್ರಾಮೀಣ ಭಾಗಗಳಲ್ಲಿ ಸಂಕಷ್ಟಗಳು ಉಂಟಾಗುತ್ತಿದೆ. ವಿಪರೀತ ತಾಪಮಾನದ ಕಾರಣದಿಂದ ಮಳೆಯ ಜೊತೆಗೆ ಗಾಳಿಯ ಅಬ್ಬರವೂ ಹೆಚ್ಚಾಗುತ್ತಿದೆ ಎಂದು ಹವಾಮಾನ ವಿಶ್ಲೇಷಕರು ಹೇಳುತ್ತಾರೆ.
ಭಾರೀ ಗಾಳಿ ಮಳೆಗೆ ಪಂಜದ ಆಸುಪಾಸಿನಲ್ಲಿ ಕೃಷಿ ಹಾನಿ #ಮಳೆ #rain pic.twitter.com/IogfziavP3
— theruralmirror (@ruralmirror) May 1, 2022
ಕಳೆದ 24 ಗಂಟೆಯಲ್ಲಿ ಅದರಲ್ಲೂ ಮುಂಜಾನೆ ವಿವಿದೆಡೆ ಸುರಿದ ಮಳೆ ಹೀಗಿತ್ತು ದೊಡ್ಡತೋಟ 51 , ಸುಬ್ರಹ್ಮಣ್ಯ 49 ಮಿಮೀ, ಸುಳ್ಯ ನಗರ 48 ಮಿಮೀ , ಕೇನ್ಯ 46 ಮಿಮೀ,ಕೋಡಿಂಬಾಳ 42 ಮಿ ಮೀ, ಕಲ್ಲಾಜೆ 35 ಮಿಮೀ, ಬಳ್ಪ 30 ಮಿಮೀ, ಎಣ್ಮೂರು 28 ಮಿಮೀ, ಕೊಲ್ಲಮೊಗ್ರ 25 ಮಿಮೀ, ಹರಿಹರ 25 ಮಿಮೀ, ಕಮಿಲ 20 ಮಿಮೀ, ಕರಿಕಳ 18 ಮಿಮೀ, ಕೊಳ್ತಿಗೆ 18 ಮಿಮೀ, ,ಕಲ್ಮಡ್ಕ 18 ಮಿಮೀ, ಚೊಕ್ಕಾಡಿ 16 ಮಿಮೀ, ಕೋಡಪದವು 16 ಮಿಮೀ , ಮಡಪ್ಪಾಡಿ 14 ಮಿಮೀ, ವಾಲ್ತಾಜೆ 14 ಮಿಮೀ, ಚೆಂಬು 13 ಮಿಮೀ, ಮೆಟ್ಟಿನಡ್ಕ 11 ಮಿಮೀ, ಕೈರಂಗಳ 11 ಮಿಮೀ ,ಮಂಚಿ 7 ಮಿಮೀ, ಕಾವಿನಮೂಲೆ 4 ಮಿಮೀ, ಅಯ್ಯನಕಟ್ಟೆ 3 ಮಿಮೀ ಮಳೆಯಾಗಿದೆ.
ಗಾಳಿ ಮಳೆಗೆ ಕೃಷಿ ಹಾನಿ #rain #ಮಳೆ pic.twitter.com/jUuhekXqgW
— theruralmirror (@ruralmirror) May 1, 2022