ರಾಜ್ಯದಲ್ಲಿ 51 ವರ್ಷಗಳ ಬಳಿಕ ದಾಖಲೆಯ ಮಳೆ |

September 19, 2022
2:13 PM

ಈ ಬಾರಿ ಮಳೆಯೋ ಮಳೆ. ಮಲೆನಾಡು ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಮಾರ್ಚ್‌ ನಂತರ ಆಗಾಗ ಮಳೆಯಾಗುತ್ತಲೇ ಇತ್ತು. ಅಂದರೆ ಸುಮಾರು 8 ತಿಂಗಳು ಮಳೆಯ ತಿಂಗಳಾಗಿದೆ. ಮಾಹಿತಿ ಪ್ರಕಾರ 51 ವರ್ಷಗಳ ಬಳಿಕ ಈ ವರ್ಷದಲ್ಲಿ ಅಧಿಕ ಮಳೆಯಾಗಿದೆ.

ಈ ಬಾರಿಯ ಭಾರೀ ಮಳೆ ರಾಜ್ಯದ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಕರಾವಳಿ ಜಿಲ್ಲೆಗಳಲ್ಲಿ, ಮಲೆನಾಡಿನಲ್ಲಿ ಅಪಾರ ಹಾನಿಯಾಗಿದ್ದರೆ ನಗರ ಪ್ರದೇಶದಲ್ಲೂ ಮಳೆಯ ಹಾನಿ ತಪ್ಪಿಸಲು ಆಗಿಲ್ಲ. ಸಿಲಿಕಾನ್ ಸಿಟಿಯಲ್ಲೂ ಮಳೆಯ ಅವಾಂತರದಿಂದ ರಸ್ತೆ, ಅಪಾರ್ಮೆಂಟ್, ವಿಲ್ಲಾಗಳು ಜಲಾವೃತಗೊಂಡಿವೆ. ಕಳೆದ 51 ವರ್ಷಗಳಲ್ಲೇ ಸುರಿದ ದಾಖಲೆಯ ಮಳೆಯಾಗಿದೆ ಈ ವರ್ಷ.

ಮಾರ್ಚ್‌ ನಂತರ ಮಲೆನಾಡು ಪ್ರದೇಶದ ಅಲ್ಲಲ್ಲಿ ಮಳೆಯಾಗಿದ್ದರೂ ಜೂನ್‌ ತಿಂಗಳಲ್ಲಿ ಮಳೆಯ ಕೊರತೆ ಕಂಡುಬಂದಿತ್ತು. ವಾಯುಭಾರ ಕುಸಿತದ ಕಾರಣದಿಂದ ಹವಾಮಾನದ ಏರುಪೇರು ಕಂಡುಬಂದಿತ್ತು. ಅದಾದ ನಂತರ ಜುಲೈ ಮತ್ತು ಆಗಸ್ಟ್ ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಈಗ ಸೆಪ್ಟಂಬರ್‌ ತಿಂಗಳಿನಲ್ಲಿಯೂ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ದಾಖಲೆಗಳ ಪ್ರಕಾರ 1971 ರಿಂದ 2021 ರ ಜುಲೈವರೆಗೆ ಯಾವತ್ತೂ ಇಷ್ಟು ಮಳೆಯಾಗಿರಲಿಲ್ಲ.  ಇನ್ನೂ ಕೂಡಾ ಮಳೆ ಸುರಿಯುತ್ತಲೇ ಇದೆ. ಈಗ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror