ಕಳೆದ ಎರಡು ದಿನಗಳಿಂದ ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ಇಡೀ ದಿನ ಮಳೆಯಾಗಿತ್ತು. ಹಲವು ಕಡೆಗಳಲ್ಲಿ 60 ಮಿಮೀಗಿಂತ ಅಧಿಕ ಮಳೆಯಾಗಿತ್ತು. ಶನಿವಾರ ಮತ್ತೆ ಇಡೀ ದಿನ ಭರ್ಜರಿ ಮಳೆಯಾಗುತ್ತಿದೆ. ರಾತ್ರಿಯೂ ಮಳೆ ಸುರಿಯುತ್ತಿದೆ. ಈಗಾಗಲೇ ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಸ್ನಾನ ಘಟ್ಟ ಮುಳುಗಡೆಯ ಹಂತದಲ್ಲಿದೆ.
#HeavyRains ಕುಕ್ಕೆಸುಬ್ರಹ್ಮಣ್ಯ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. pic.twitter.com/gd4iSf2TGz
Advertisement— theruralmirror (@ruralmirror) July 22, 2023
ಜೂನ್ ತಿಂಗಳು ಅಂದರೆ ಮಳೆಗಾಲ ಆರಂಭವಾದ ಬಳಿಕ ಮೊದಲ ಬಾರಿಗೆ ಧಾರಾಕಾರ ಮಳೆ ಕರಾವಳಿ ಜಿಲ್ಲೆಯಲ್ಲಿ ಕಾಣುತ್ತಿದೆ. ಎರಡು ದಿನಗಳಿಂದ ಸುರಿದ ಮಳೆಗೆ ಹೊಳೆ, ನದಿಗಳು ತುಂಬಿ ಹರಿಯುತ್ತಿದೆ. ಘಟ್ಟ ಪ್ರದೇಶಗಳಲ್ಲೂ ಭಾರೀ ಮಳೆಯಾಗುತ್ತಿದೆ. ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಸ್ನಾನಘಟ್ಟ ಮುಳುಗಡೆಯ ಹಂತದಲ್ಲಿದೆ. ರಾತ್ರಿಯೂ ಮಳೆಯಾಗುತ್ತಿದೆ. ಗ್ರಾಮೀಣ ಭಾಗಗಳಲ್ಲೂ ಹೊಳೆಗಳು ತುಂಬಿ ಹರಿಯುತ್ತಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಎರಡು ದಿನಗಳ ಉತ್ತಮ ಮಳೆಯಾಗಲಿದೆ.