ಸುಳ್ಯ ತಾಲೂಕಿನಲ್ಲಿ ಮತ್ತೆ ಧಾರಾಕಾರ ಮಳೆ ಮುಂದುವರಿದಿದೆ. ಗ್ರಾಮೀಣ ಭಾಗಗಳು ತತ್ತರಗೊಂಡಿವೆ. ಹಲವು ಹೊಳೆ, ನದಿಗಳು ಉಕ್ಕಿ ಹರಿಯುತ್ತಿರುವ ಕಾರಣದಿಂದ ಸೇತುವೆಗಳು ಬ್ಲಾಕ್ ಆಗಿವೆ. ಸಂಚಾರ ಸಂಕಷ್ಟದಲ್ಲಿದೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರ, ಬಾಳುಗೋಡು ಮೊದಲಾದ ಪ್ರದೇಶಗಳಲ್ಲಿ ಮಳೆಯ ಅಬ್ಬರ ಹೆಚ್ಚಿದೆ.
ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟ ಮುಳುಗಡೆ ಮುಂದುವರಿದಿದೆ. ಸುಬ್ರಹ್ಮಣ್ಯ-ಪುತ್ತೂರು ಸಂಪರ್ಕ ರಸ್ತೆ ಸೇರಿದಂತೆ ಗ್ರಾಮೀಣ ರಸ್ತೆಗಳಲ್ಲೂ ನೀರು ತುಂಬಿ ಸಂಚಾರ ಸಂಕಷ್ಟದಲ್ಲಿದೆ. ಸುಳ್ಯದ ಕೊಲ್ಲಮೊಗ್ರ , ಹರಿಹರ ಪ್ರದೇಶಗಳಲ್ಲೂ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹೊಳೆ ತುಂಬಿ ಹರಿಯುತ್ತಿದೆ. ಕಳೆದ ವರ್ಷದ ಭಾರೀ ಮಳೆಯ ಕಾರಣದಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ಇದೀಗ ಭಾರೀ ಮಳೆ ಎರಡು ದಿನಗಳಿಂದ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಆತಂಕ ಉಂಟಾಗಿದೆ.
#HeavyRains ಧಾರಾಕಾರ ಮಳೆಗೆ ಗ್ರಾಮೀಣ ಭಾಗಗಳಲ್ಲೂ ಸಂಕಷ್ಟ. ಹೊಳೆ ನದಿಗಳು ತುಂಬಿ ಹರಿಯುತ್ತಿದೆ. pic.twitter.com/WeJYeiyT3k
— theruralmirror (@ruralmirror) July 23, 2023
Advertisement
ಸುಳ್ಯದ ಗ್ರಾಮೀಣ ಭಾಗವಾದ ಐನೆಕಿದು ಪ್ರದೇಶದಲ್ಲಿನ ಹೊಳೆ. #HeavyRains #sulliarains #sulyarains pic.twitter.com/jRcALZjKic
Advertisement— theruralmirror (@ruralmirror) July 23, 2023