ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ ಧಗೆ ದಿನೇ ದಿನೇ ಏರತೊಡಗಿತ್ತು. ಮಳೆಗಾಗಿ(Rain) ಎಲ್ಲರೂ ವರುಣ ದೇವರನ್ನು ಪ್ರಾರ್ಥಿಸುವಂತಾಗಿತ್ತು. ಆದರೆ ಈಗ ರಾಜ್ಯದ ಚಾಮರಾಜನಗರ(Chamarajanagara), ಮಂಗಳೂರು(Mangaluru), ಹಾಸನ (Hassan), ಹಾವೇರಿ(Haveri) ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮಳೆಯ ಪರಿಣಾಮದಿಂದ ರೈತರು(Farmer) ಒಂದೆಡೆ ಸಂಭ್ರಮ ಪಟ್ಟರೆ ಇನ್ನೊಂದೆಡೆ ಕೆಲವರು ಬೆಳೆ ಹಾನಿ(Crop Lost) ಹಾಗೂ ಕೆಲವು ಅವಾಂತರಗಳಿಂದ ಸಣ್ಣಪುಟ್ಟ ತೊಂದರೆ ಅನುಭವಿಸಿದ್ದಾರೆ.
ಧಾರವಾಡದಲ್ಲಿ ಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗಿದೆ. ಪರಿಣಾಮ ನಗರದ ಹಲವೆಡೆ ಮರಗಳು ಧರೆಗೆ ಉರುಳಿವೆ. ಕಳೆದ ಒಂದು ಗಂಟೆಯಿಂದ ಮಳೆ ಮುಂದುವರಿಯುತ್ತಿದೆ. ಹುಬ್ಬಳ್ಳಿಯಲ್ಲೂ ಮಳೆಯಾಗುತ್ತಿದೆ. ನಗರದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.
ಚಿಕ್ಕಮಗಳೂರು ನಗರ, ಜಯಪುರ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ ಭಾಗಗಳಲ್ಲಿಯೂ ವರುಣ ಅಬ್ಬರಿಸಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮಳೆಯಿಂದ ರೈತರು, ಅಡಿಕೆ, ಕಾಫಿ-ಮೆಣಸು ಬೆಳೆಗಾರರ ಮೊಗದಲ್ಲಿ ಸಂತಸ ಮನೆಮಾಡಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಬಿಸಿಲಿನ ಬೇಗೆಯಿಂದ ಬಳಲಿದ್ದ ಭಕ್ತರು ಮಳೆಯನ್ನು ಸಂಭ್ರಮಿಸಿದ್ದಾರೆ.
- ಅಂತರ್ಜಾಲ ಮಾಹಿತಿ