ಮಲೆನಾಡಲ್ಲಿ ಭಾರೀ ಮಳೆ | ಧಾರಾಕಾರ ಮಳೆಗೆ ತುಂಬಿದ ನದಿ | ಒಮ್ಮೆಲೇ 94 ಮಿಮೀ ಗೂ ಹೆಚ್ಚು ಸುರಿದ ಮಳೆ |

September 7, 2021
9:08 PM

ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಮಂಗಳವಾರ ಒಮ್ಮೆಲೇ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಳ್ಯ ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಕಲ್ಲಾಜೆ ಪ್ರದೇಶದಲ್ಲಿ  94  ಮಿಮೀ ಗಿಂತಲೂ ಅಧಿಕ ಮಳೆ ಸುರಿದಿದೆ. ಭಾರೀ ಮಳೆಯ ಕಾರಣದಿಂದ ಹೊಳೆ-ನದಿಗಳು ತುಂಬಿ ಹರಿಯುತ್ತಿದ್ದು ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿತು.

ಮಲೆನಾಡು ಭಾಗಗಳಲ್ಲಿ  ವಿಪರೀತ ಮಳೆಯಾಗುತ್ತಿದೆ. ವಾಯುಭಾರ ಕುಸಿತದ ಪ್ರಭಾವ ಹಾಗೂ ಮುಂಗಾರು ಮಳೆಯ ಪ್ರಭಾವ ಸೇರಿ ಮಲೆನಾಡು ಮಳೆ ನಾಡಾಗಿ ಮಂಗಳವಾರ ಕಂಡಿತು. ಕುಕ್ಕೆ ಸುಬ್ರಹ್ಮಣ್ಯದಲ್ಲೂ ಮಳೆ ಪ್ರಭಾವ ಹೆಚ್ಚಾಗಿತ್ತು, ಘಟ್ಟ ಪ್ರದೇಶದಲ್ಲೂ ಮಳೆ ಸುರಿದ ಕಾರಣ ದರ್ಪಣ ತೀರ್ಥ ನದಿಯಲ್ಲಿ  ಹೆಚ್ಚಿನ ನೀರು ಕಂಡುಬಂದಿತ್ತು. ಉಳಿದಂತೆ ಕುಮಾರಧಾರಾ ಸೇರಿದಂತೆ ದಕ ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯಿತು. ಮಳೆಯ ಅಬ್ಬರಕ್ಕೆ ಕೃಷಿಕರಿಗೆ ಭಯ ಶುರುವಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ವಾಯುಭಾರ ಕುಸಿತದ ಕಾರಣದಿಂದ ಸೆ.10 ರವರೆಗೆ ಇದೇ ರೀತಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇತ್ತು. ಆದರೆ ಸದ್ಯದ ಮಾಹಿತಿಯಂತೆ ಮೋಡಗಳು ಚದುರಲು ಪ್ರಾರಂಭವಾಗಿದ್ದು ಮಳೆ ಕಡಿಮೆಯಾಗುವ ಸಾಧ್ಯತೆ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?
September 16, 2026
7:17 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ
September 15, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ
September 15, 2026
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror