Advertisement
MIRROR FOCUS

ಕರಾವಳಿ ಜಿಲ್ಲೆಯಲ್ಲಿ ಮುಂದುವರಿದ ಮಳೆ | ಹಲವು ಕಡೆ 100mm+ ಮಳೆ | ಕೆಲವು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ | ಮಕ್ಕಳಿಗೆ ರಜೆ….ಪೋಷಕರೇ ಇರಲಿ ಎಚ್ಚರ |

Share

ಕರಾವಳಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಭಾರೀ ಮಳೆಯ ಕಾರಣದಿಂದ ಕೆಲವು ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ. ರಜೆ ನೀಡಿದ ಬಳಿಕ ಮಕ್ಕಳ ಜವಾಬ್ದಾರಿ ಪೋಷಕರಿಗೆ. ಪೋಷಕರೇ ಈಗ ಇರಲಿ ಎಚ್ಚರ.…….. ಮುಂದೆ ಓದಿ ……

ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಯಿಂದ ಹಲವು ಕಡೆ ಸಣ್ಣಪುಟ್ಟ ಕುಸಿತ, ಗಾಳಿಗೆ ಮರ ಬೀಳುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗಿದೆ. ಗುರುವಾರ ಕೂಡಾ ಬೆಳಗ್ಗೆ ಮಳೆಯಾದ ಹಿನ್ನೆಲೆಯಲ್ಲಿ ಕೆಲವು ತಾಲೂಕಿನಲ್ಲಿ ಶಾಲೆಗಳಿಗೆ ಮುಂಜಾಗ್ರತಾಕ್ರಮವಾಗಿ ರಜೆ ನೀಡಲಾಗಿದೆ. ಕಳೆದ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಯ ಹಲವು ಕಡೆ ಉತ್ತಮ ಮಳೆಯಾಗಿದೆ.

ಕೊಲ್ಲಮೊಗ್ರದಲ್ಲಿ 76 ಮಿಮೀ, ಬಾಳುಗೋಡು 104 ಮಿಮೀ, ಮಡಪ್ಪಾಡಿ 77 ಮಿಮೀ,  ಸುಬ್ರಹ್ಮಣ್ಯ 144 ಮಿಮೀ,  ಕಲ್ಲಾಜೆ 140 ಮಿಮೀ, ಬಳ್ಪ 112 ಮಿಮೀ,  ಬಾಳಿಲ 75 ಮಿಮೀ, ಬೆಳ್ಳಾರೆ 50 ಮಿಮೀ , ಐವರ್ನಾಡು 102 ಮಿಮೀ, ಸುಳ್ಯ 81 ಮಿಮೀ, ಚೆಂಬು 84 ಮಿಮೀ, , ಕೋಡಿಂಬಾಳ 42 ಮಿಮೀ, ನೆಲ್ಯಾಡಿ 82 ಮಿಮೀ, ಪಾಣಾಜೆ 66 ಮಿಮೀ, ಪುತ್ತೂರು 55 ಮಿಮೀ, ಬೆಳ್ತಂಗಡಿ 78 ಮಿಮೀ, ಬಜಗೋಳಿ 160 ಮಿಮೀ,  ಕಾರ್ಕಳ 120 ಮಿಮೀ,  ಮಂಗಳೂರು 43 ಮಿಮೀ,  ಉಡುಪಿ 93 ಮಿಮೀ ಹಾಗೂ ಕುಂಬಳೆಯಲ್ಲಿ 73 ಮಿಮೀ ಮಳೆಯಾಗಿದೆ.

ಭಾರೀ ಮಳೆಯ ಕಾರಣದಿಂದ ಶಾಲೆಗೆ ರಜೆ ನೀಡಿರುವುದರಿಂದ ಪೋಷಕರ ಎಚ್ಚರ ವಹಿಸಬೇಕಿದೆ. ಮಳೆ ಹಾಗೂ ಮಳೆಗಾಲದ ನೀರಿನ ಆಟಗಳು ಮಕ್ಕಳನ್ನು ಸೆಳೆಯುತ್ತದೆ. ಪೋಷಕರು ಕೆಲಸದ ನಿಮಿತ್ತ ತೆರಳುವ ವೇಳೆ ಮಕ್ಕಳ ಕಡೆಗೂ ಗಮನ ನೀಡಬೇಕಿದೆ. ಮಕ್ಕಳು ಮಳೆಗಾಲ ನದಿ, ಕೆರೆ, ಹೊಳೆಯ ಕಡೆಗೆ ತೆರಳದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಕಾಲ ಕಳೆಯುವ ಹಾಗೆ ಗಮನಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಶಾಲೆಗೆ ರಜೆ ನೀಡುವುದು ಪೋಷಕರಿಗೆ ಹೆಚ್ಚು ಜವಾಬ್ದಾರಿಯಿಂದ ಇರಬೇಕಾಗುತ್ತದೆ.

All the taluks in the coastal district are experiencing heavy rainfall. Some areas have received over 100 mm of rain. School holidays have been declared in some taluks due to the downpour. Parents are reminded to take responsibility for their children during this time off. Be cautious, parents.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

3 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

10 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

21 hours ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

1 day ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

1 day ago