ಶಿರಸಿ: ಕಳೆದ ಎರಡು ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದ ಹಲವಾರು ಆಸ್ತಿ ಮುಳುಗಡೆಯಾಗಿದೆ. ಇದೀಗ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಕಾರೊಂದು ಹಳ್ಳದಲ್ಲಿ ಕೊಚ್ಚಿಹೋಗಿದ್ದು, 4 ಅಥವಾ 5 ಜನರು ಕಾರಿನೊಳಗೆ ಸಿಲುಕಿರುವ ಶಂಕೆ ಇದೆ.
ಬುಧವಾರ ರಾತ್ರಿ ಕೊಡನಮನೆಯ ಬಳಿಯಲ್ಲಿ ಸೇತುವೆಯಿಂದ ಆಯತಪ್ಪಿ ಕೆಳಗುರುಳಿರುವ ಕಾರು ನೀರಿನಲ್ಲಿ ಅರ್ಧ ಕಿಲೋ ಮೀಟರ್ ದೂರ ಹೋಗಿದೆ ಎನ್ನಲಾಗುತ್ತಿದ್ದು, ಈ ವಿಷಯ ಗುರುವಾರ ಮಧ್ಯಾಹ್ನದ ಸಮಯದಲ್ಲಿ ಬೆಳಕಿಗೆ ಬಂದಿದೆ.
ನಿನ್ನೆ ಶಿರಸಿ, ಸಿದ್ದಾಪುರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಹಾಗಾಗಿ ಕಾರಿನ ಚಾಲಕನಿಗೆ ತಿರುವಿನಲ್ಲಿ ರಸ್ತೆ ಸರಿಯಾಗಿ ಕಾಣದೆ ಹಳ್ಳದಲ್ಲಿ ಹೋಗಿ ಬಿದ್ದಿದೆ ಎಂಬ ಮಾಹಿತಿ ತಿಳಿದು ಬಂದಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel