ಮಹಾ ಮಳೆಗೆ ಹೈರಾಣಾದ ಮುಂಬೈ ಜನತೆ : ಶಾಲೆಗಳು ಬಂದ್, ರೈಲು, ವಾಹನ ಸಂಚಾರಕ್ಕೆ ಅಡಚಣೆ : ಜನಜೀವನ ಅಸ್ಥವ್ಯಸ್ಥ

July 10, 2024
12:28 PM

ವಾಣಿಜ್ಯ ನಗರಿ(commercial city) ಮುಂಬೈನಲ್ಲಿ(Mumbai) ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲೆಯ ಮಳೆಯಾಗಿದೆ(Record rainfall) . 2019ರ ನಂತರ ಒಂದೇ ದಿನ 300 ಮಿ.ಮೀ ಮಳೆ ಸುರಿದಿದೆ. ಈ ಪರಿಸ್ಥಿತಿ ಇನ್ನೂ ಮುಂದುವರೆಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ(IMD) ರೆಡ್​ ಅಲರ್ಟ್​​(Red Alert) ನೀಡಿದೆ. ವಾಣಿಜ್ಯ ನಗರಿಯಲ್ಲಿ ಮುಂಬೈನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು(Roads), ಹೆದ್ದಾರಿಗಳು(Highway) ಜಲಾವೃತವಾಗಿವೆ. ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

Advertisement
Advertisement
Advertisement
Advertisement

ಶಾಲಾ ಕಾಲೇಜುಗಳು ಬೆಳಗಿನ ತರಗತಿಗಳನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್​ (ಬಿಎಂಸಿ) ತಿಳಿಸಿದೆ. ಮಧ್ಯರಾತ್ರಿ 1ರಿಂದ ಬೆಳಗ್ಗೆ 7 ಗಂಟೆಯವರೆಗೆ ಅಂದರೆ ಆರು ತಾಸಿನಲ್ಲಿ ದಾಖಲೆಯ 300 ಎಂಎಂ ಮಳೆ ಸುರಿದಿದೆ. ಮುಂದಿನ ಎರಡು ದಿನಗಳ ಕಾಲವೂ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಬಿಎಂಸಿ ತಿಳಿಸಿದೆ.

Advertisement
ಮುಂಬೈ-ಗುಜರಾತ್​, ಮುಂಬೈ- ಪುಣೆ, ಮುಂಬೈ-ಕೊಲ್ಹಾಪುರ ಸೆಕ್ಟರ್​​ ರೈಲುಗಳು ರದ್ದು ಅಥವಾ ವಿಳಂಬವಾಗಿ ಪ್ರಯಾಣ ಬೆಳೆಸಿವೆ. ಸಾಂತಾಕ್ರೂಜ್, ಅಂಧೇರಿ, ಜೋಗೇಶ್ವರಿ, ಮಲಾಡ್, ಕಾಂದಿವಾಲ್ ಮತ್ತು ದಹಿಸರ್ ಸೇರಿದಂತೆ ಹಲವು ಸಬ್​​ವೇಗಳಲ್ಲಿ 3ರಿಂದ 5 ಅಡಿಗಳಷ್ಟು ನೀರು ನಿಂತಿದ್ದು, ಪೂರ್ವ ಪಶ್ಚಿಮ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ದಹಿಸರ್, ಬೊರಿವಲಿ, ಕಾಂದಿವಲಿ, ಮಲಾಡ್, ಜೋಗೇಶ್ವರಿ, ಅಂಧೇರಿ, ಸಾಂತಾಕ್ರೂಜ್, ಸಿಯಾನ್, ವಡಾಲಾ, ಕುರ್ಲಾ, ಘಾಟ್‌ಕೋಪರ್, ಭಾಂಡೂಪ್ ಮತ್ತು ಥಾಣೆಯಲ್ಲಿ ಜೋರು ಮಳೆಯಿಂದಾಗಿ ಅನೇಕ ಮನೆಗಳು ಜಲಾವೃತಗೊಂಡಿವೆ. ಸೇತುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ 54 ಜನರನ್ನು ರಕ್ಷಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿ ಕನಿಷ್ಠ 275 ಮನೆಗಳು ಹಾನಿಗೊಳಗಾಗಿದ್ದು, ಸುಮಾರು 20 ವಾಹನಗಳು ಜಲಾವೃತವಾಗಿವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror