ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ : ತುಂಬುತ್ತಿರುವ KRS ಡ್ಯಾಂ : ನಾಳೆಯಿಂದ ನಾಲೆಗಳಿಗೆ ನೀರು ಬಿಡುವ ಸಾಧ್ಯತೆ

July 9, 2024
3:23 PM

ರಾಜ್ಯದ ಬಹುತೇಕ ಕಡೆ ಮುಂಗಾರು(Mansoon) ಚುರುಕುಗೊಂಡು ನದಿ(River), ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕಾವೇರಿ ಜಲಾನಯನ(Cauvery Basin) ಪ್ರದೇಶದಲ್ಲಿ ಕಳೆದ ವಾರದಿಂದ ಒಳ್ಳೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟಿಗೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಆದರೆ ಕೆಆರ್‌ಎಸ್‌ (KRS Dam) ಜಲಾಶಯದಿಂದ ನಾಲೆಗಳಿಗೆ(Canals) ನೀರು ಬಿಡುಗಡೆಯನ್ನು ಮುಂದೂಡಲಾಗಿದೆ. ನಾಲಾ ಆಧುನೀಕರಣ ಕಾಮಗಾರಿಯಿಂದಾಗಿ ನೀರು ಬಿಡುಗಡೆ ವಿಳಂಬವಾಗಿದೆ.

Advertisement
ಬುಧವಾರದಿಂದ ಅಂದರೆ ಜುಲೈ 10ರ ಮೇಲೆ ನಾಲೆಗೆ ನೀರು ಹರಿಸುವ ಸಾಧ್ಯತೆ ಇದೆ. ನಿನ್ನೆ ಸಂಜೆಯಿಂದಲೇ ನೀರು ಬಿಡುಗಡೆ ಮಾಡವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ನೀರು ಬಿಡುಗಡೆಗೆ ತೀರ್ಮಾನಿಸಲಾಗಿತ್ತು. ಜು.8ರಿಂದ 15 ದಿನ ನೀರು ಬಿಡುಗಡೆ ಮಾಡುವುದಾಗಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದರು. ಆದರೆ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿಗೆಯಿಂದ ನೀರು ಬಿಡುಗಡೆ ತಡವಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನಾಲೆಯಲ್ಲೇ ಯಂತ್ರೋಪಕರಣಗಳು ಇವೆ. ನಾಲೆಯಿಂದ ಯಂತ್ರೋಪಕರಣ ತೆರವುಗೊಳಿಸಿ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.

 

ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 103.40 ಅಡಿ.
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 25.594 ಟಿಎಂಸಿ
ಒಳ ಹರಿವು – 6,600 ಕ್ಯೂಸೆಕ್
ಹೊರ ಹರಿವು – 575 ಕ್ಯೂಸೆಕ್

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆ.5-7 ಉತ್ತಮ ಮಳೆ – ಹವಾಮಾನ ಇಲಾಖೆ ಮಾಹಿತಿ
August 4, 2025
7:55 AM
by: The Rural Mirror ಸುದ್ದಿಜಾಲ
ಪ್ರೇಮ ಸಂಬಂಧದಲ್ಲಿ ಈ ರಾಶಿಯವರಿಗೆ ವಿಶ್ವಾಸದ ಕೊರತೆಯ ಸಮಸ್ಯೆ
August 4, 2025
7:38 AM
by: ದ ರೂರಲ್ ಮಿರರ್.ಕಾಂ
ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯ ಹೊಸ ಮಾದರಿಯ 6 ಕಾರು ಧರ್ಮಸ್ಥಳಕ್ಕೆ ಕೊಡುಗೆ
August 4, 2025
7:26 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ
August 3, 2025
12:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group