ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ(Mansoon Rain). ರೈತರು(Farmers) ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯದ ಅಣೆಕಟ್ಟುಗಳಿಗೆ(Dam) ನೀರು ಹರಿದು ಬರುತ್ತಿದ್ದು, ಕೃಷಿ ಚಟುವಟೆಕೆಗಳಿಗೆ( ಲಾಭವಾಗುತ್ತಿದೆ. ಕಲ್ಯಾಣ ಕರ್ನಾಟಕದ (Kalyana Karnataka Rains) ಚಿಂಚೊಳ್ಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನಾಗರಾಳ ಬಳಿ ಇರುವ ಮುಲ್ಲಾಮಾರಿ ಜಲಾಶಯದ ಒಳಹರಿವು ಹೆಚ್ಚಳವಾಗುತ್ತಿದೆ. ಇತ್ತ ಕೆಆರ್‌ಎಸ್ ಜಲಾಶಯಕ್ಕೆ(KRS Dam) 2404 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 454 ಕ್ಯೂಸೆಕ್ ನೀರನ್ನು ಹೊರ ಬೀಡಲಾಗುತ್ತಿದೆ.
ಮುಲ್ಲಾಮಾರಿ ಕೆಳದಂಡೆ ಜಲಾಶಯದ ಕನಿಷ್ಟ 490 ಮೀಟರ್ ಆಗಿದ್ದು, ಗರಿಷ್ಠ ಮಟ್ಟ491 ಮೀಟರ್ ಆಗಿದ್ದು, 1500 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಯಾವುದೇ ಕ್ಷಣದಲ್ಲಿ ಮುಲ್ಲಾಮಾರಿ ಕೆಳದಂಡೆ ಜಲಾಶಯದ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಮುಲ್ಲಾಮಾರಿ ಕೆಡದಂಡೆ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
ಈ ಎಲ್ಲ ಗ್ರಾಮಗಳ ನಾಗರಿಕರಿಗೆ ಎಚ್ಚರಿಕೆಯಿಂದಿರಲು ಸೂಚನೆ : ಈ ಭಾಗದ ಚಿಮ್ಮನಚೋಡ,ತಾಜಲಾಪುರ, ಗಾರಂಪಳ್ಳಿ, ಸೇರಿ ಹಲವು ಗ್ರಾಮಗಳ ನಾಗರಿಕರಿಗೆ ನದಿ ದಡದಲ್ಲಿ ಹೋಗದಂತೆ ಎಚ್ಚರಿಕೆಯಿಂದಿರಲು ಎಇ ಸೂಚನೆ ನೀಡಿದ್ದಾರೆ.
ಇತ್ತ ಮೈಸೂರು ಪ್ರಾಂತ್ಯದಲ್ಲೂ ಉತ್ತಮ ಮಳೆ : ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ಕರ್ನಾಟಕದ ಕಾಶ್ಮೀರ ಎಂದೇ ಹೆಸರುವಾಸಿಯಾದ ಕೊಡಗು ಜಿಲ್ಲೆಯಲ್ಲಿ (Kodagu Rains) ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ದಿನದಿಂದ ದಿನಕ್ಕೆ ನೀರಿನ ಮಟ್ಟ ಹಾಗೂ ಒಳ ಹರಿವಿನ ಪ್ರಮಾಣವು ಹೆಚ್ಚಾಗುತ್ತಿದೆ. 124.80 ಅಡಿಗಳ ಸಾಮರ್ಥ್ಯವಿರುವ ಜಲಾಶಯದ ಇಂದಿನ ಮಟ್ಟ 86.20 ಅಡಿಗಳಾಗಿದ್ದು ಒಂದು ದಿನಕ್ಕೆ ಒಂದು ಅಡಿಗೂ ಹೆಚ್ಚು ಜಲಾಶಯದ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಕೆಆರ್‌ಎಸ್ ಜಲಾಶಯಕ್ಕೆ 2404 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 454 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕಬಿನಿ ಜಲಾಶಯದ ಇಂದಿನ ಸ್ಥಿತಿಗತಿ : ಎಚ್‌ಡಿ ಕೋಟೆಯ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಇಂದು ಕಡಿಮೆಯಾಗಿದೆ. 2284 ಅಡಿಗಳ ಸಾಮರ್ಥ್ಯವಿರುವ ಜಲಾಶಯದ ಇಂದಿನ ಮಟ್ಟ 2263.38 ಅಡಿಗಳಾಗಿದ್ದು, ಜಲಾಶಯಕ್ಕೆ 1825 ಕ್ಯೂಸೆಕ್ ನೀರು ಒಳ ಹರಿವಿದ್ದರೆ ಜಲಾಶಯದಿಂದ 300 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಮೊನ್ನೆ (ಜೂನ್ 12) ಜಲಾಶಯಕ್ಕೆ ಭರ್ಜರಿ ಒಳಹರಿವು ಇತ್ತು. ಆದರೆ ಕಳೆದ ಎರಡು ದಿನಗಳಿಂದ ಒಳ ಹರಿವಿನ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.
- ಅಂತರ್ಜಾಲ ಮಾಹಿತಿ