ಪಂಜಾಬ್ ಸೇರಿ ಹೆಲವು ರಾಜ್ಯಗಳಲ್ಲಿ ಭಾರಿ ಮಳೆ | ಪ್ರವಾಹ ಬಾಧಿತ ಪಂಜಾಬ್ ಗೆ ಶಿವರಾಜ್ ಸಿಂಗ್ ಚೌಹಾಣ್ ಭೇಟಿ

September 7, 2025
1:06 PM

ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ  ನಷ್ಟದ  ಕುರಿತಂತೆ ವರದಿಯನ್ನು ಪ್ರಧಾನಿ ಅವರಿಗೆ ಸಲ್ಲಿಸುವುದಾಗಿ  ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಪ್ರವಾಹ ಬಾಧಿತ ಪಂಜಾಬ್ ಗೆ  ಭೇಟಿ ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ  ಮಾಹಿತಿ ಹಂಚಿಕೊಂಡಿರುವ ಅವರು,  ಪ್ರವಾಹದಿಂದ  ಸಾಕಷ್ಟು ಹಾನಿಯಾಗಿದೆ.  ಬಾಧಿತ ಪ್ರದೇಶಗಳ  ಪುನರ್ ನಿರ್ಮಾಣಕ್ಕಾಗಿ  ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಯೋಜನೆಗಳ ಅಗತ್ಯವಿದೆ ಎಂದು  ಪ್ರತಿಪಾದಿಸಿದ್ದಾರೆ.  ಅಕ್ರಮ ಗಣಿಗಾರಿಕೆಯಿಂದ  ರಾಜ್ಯದ ಸಟ್ಲೆಜ್, ಬಿಯಾಸ್,  ರಾವಿ ಮತ್ತು  ಘಗ್ಗರ್ ನದಿಗಳ ದಡದಲ್ಲಿರುವ  ಒಡ್ಡುಗಳು ದುರ್ಬಲಗೊಂಡಿವೆ. ಮಾಜಿ ಪ್ರಧಾನಿ ಅಟಲ್  ಬಿಹಾರಿ ವಾಜಪೇಯಿ ಮತ್ತು ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್  ಅವರ ಆಡಳಿತಾವಧಿಯಲ್ಲಿ  ಬೆಳೆಗಳನ್ನು ಪ್ರವಾಹದಿಂದ ರಕ್ಷಿಸಲು ಇವುಗಳನ್ನು ಬಲಪಡಿಸಲಾಗಿತ್ತು.  ಆದರೀಗ ಇವುಗಳಿಗೆ ಹಾನಿಯಾಗಿದೆ. ಭವಿಷ್ಯದಲ್ಲಿ  ಪಂಜಾಬ್ ಅನ್ನು ಇಂತಹ ದುರಂತಗಳಿಂದ ರಕ್ಷಿಸಲು  ಇವುಗಳನ್ನು ಬಲಪಡಿಸುವುದು ಅಗತ್ಯವಾಗಿದೆ.  ಕೇಂದ್ರದಿಂದ  ಪಂಜಾಬ್ ಗೆ  ಅಗತ್ಯ ನೆರವು ನೀಡುವುದಾಗಿ ಇದೇ ವೇಳೆ ಸಚಿವರು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ; ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಆದ್ಯತೆ
November 10, 2025
7:32 AM
by: ದ ರೂರಲ್ ಮಿರರ್.ಕಾಂ
ಇಲಿಗಳ ಕಾಟಕ್ಕೆ ಇಲ್ಲಿದೆ ಸುಲಭ ಪರಿಹಾರ…!
November 10, 2025
7:26 AM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಕ್ಯಾನ್ಸರ್ ಪ್ರತಿಬಂಧಕ – ಅಧ್ಯಯನ ವರದಿ
November 10, 2025
7:16 AM
by: ರೂರಲ್‌ ಮಿರರ್ ಸುದ್ದಿಜಾಲ
ಪಶ್ಚಿಮಘಟ್ಟಗಳಲ್ಲಿ ಹೊಸ ಸಸ್ಯ ಪ್ರಭೇದಗಳು ಪತ್ತೆ | ಸೊನೆರೆಲಾ ಜಾತಿಯ   ಮೂರು  ಪ್ರಭೇದಗಳು
November 10, 2025
7:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror