ಭರ್ಜರಿಯಾಗಿ ಎಂಟ್ರಿ ಕೊಟ್ಟ ಮುಂಗಾರು ಮಳೆ(Monsoon rain) ಚೆನ್ನಾಗಿ ಸುರಿದು ಒಂದಷ್ಟು ಅನಾಹುತಗಳನ್ನು ಸೃಷ್ಟಿಸಿ ಮಾಯವಾಗಿತ್ತು. ಅಲ್ಲಲ್ಲಿ ಮಳೆ ವಾತಾವರಣ ಇದ್ದರು, ಕಳೆದ ಒಂದು ವಾರದಿಂದ ಅಂತ ಮಳೆ ಇರಲಿಲ್ಲ. ಆದರೆ ಉತ್ತರ ಕರ್ನಾಟಕ(North Karnataka) ಕಡೆ ಮತ್ತೆ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಜನರ ಜೀವನ ಅಸ್ತವ್ಯಸ್ತ ಗೊಂಡಿದೆ. ಇದೀಗ ಯಾದಗಿರಿ(Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂ (Basava Sagara Dam) ನಿಂದ ಭಾರಿ ಪ್ರಮಾಣದ ನೀರು ಬಿಡುಗಡೆಯಾಗಿದ್ದು, ಕೃಷ್ಣಾ ನದಿ (Krishna River) ತೀರದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.
ಡ್ಯಾಂನ 25 ಗೇಟ್ ಓಪನ್ ಮಾಡಿ ಕೃಷ್ಣಾ ನದಿಗೆ 1,20,800 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 1,10,000 ಕ್ಯುಸೆಕ್ ನೀರು ಒಳಹರಿವಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 30.83 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳ ಹಿನ್ನಲೆ ನೀರು ಬಿಡುಗಡೆ ಪ್ರಮಾಣ ಏರಿಕೆಯಾಗಿದೆ.
ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದರೂ ಡ್ಯಾಂ ಮುಂಭಾಗದಲ್ಲಿಯೇ ಮೀನುಗಾರರು ಹುಚ್ಚಾಟ ನಡೆಸಿದ್ದಾರೆ. ಉಕ್ಕಿ ಹರಿಯುವ ನದಿಯಲ್ಲಿಯೇ ಮೀನು ಹಿಡಿಯುತ್ತಿದ್ದು, ಅಪಾಯವನ್ನು ಲೆಕ್ಕಿಸದೇ ಡೋಂಟ್ ಕೇರ್ ಎಂದು ಮೀನು ಹಿಡಿಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.