ಟಿಬೆಟ್‌ನ ಮೌಂಟ್ ಎವರೆಸ್ಟ್‌ನ ಪೂರ್ವ ಇಳಿಜಾರು ಪ್ರದೇಶದಲ್ಲಿ ನಡೆದ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ 4 900 ಮೀಟರ್‌ಗಿಂತ ಹೆಚ್ಚಿನ ಎತ್ತರದ ಶಿಬಿರಗಳಲ್ಲಿ ಸುಮಾರು 1 ಸಾವಿರ ಮಂದಿ ಸಿಲುಕಿದ್ದಾರೆ. ಹಿಮಪಾತದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದ್ದು, ಅಂದಾಜು 350 ಜನರನ್ನು ರಕ್ಷಿಸಿ ಕುಡಾಂಗ್ ಪಟ್ಟಣದತ್ತ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ. ಹಿಮಪಾತದ ಪರಿಣಾಮವಾಗಿ ಕೆಲವು ಡೇರೆಗಳು ಕುಸಿದುಬಿದ್ದಿದೆ. ಪ್ರವೇಶ ಮಾರ್ಗಗಳು ಹಿಮದಿಂದ ನಿರ್ಬಂಧಿತವಾಗಿರುವುದರಿಂದ, ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಮಾರ್ಗ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಚೈನಾದಲ್ಲಿ ಚಂಡಮಾರುತದ ಪರಿಸ್ಥಿತಿಯಿಂದಾಗಿ ಎವರೆಸ್ಟ್ ಪ್ರದೇಶಕ್ಕೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

