ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಕುನೂರು ಬಳಿ ಪತನವಾಗಿತ್ತು.ಈ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಹೀಗೆ ವಿವರಿಸುತ್ತಾರೆ……
ಮಧ್ಯಾಹ್ನ ಸುಮಾರು 12 ರ ಹೊತ್ತಿಗೆ ದುರ್ಘಟನೆ ನಡೆದಿತ್ತು. ಒಂದು ಭಯಾನಕ ಶಬ್ದ ಕೇಳಿತು. ಅದು ತುಂಬ ಹತ್ತಿರದಲ್ಲೇ ಕೇಳಿಸಿತು. ಹೀಗಾಗಿ ಕುತೂಹಲ ಮತ್ತು ಭಯದಿಂದ ಹೊರಬಂದು ನೋಡಿದೆ. ಆಗ ಹೆಲಿಕಾಪ್ಟರ್ವೊಂದು ಮರಕ್ಕೆ ಅಪ್ಪಳಿಸಿತ್ತು. ಅಲ್ಲಿಂದ ಬೆಂಕಿಯ ಉಂಡೆ ಏಳುತ್ತಿತ್ತು. ನೋಡುತ್ತಿದ್ದಂತೆ ಮತ್ತೆ ಆ ಹೆಲಿಕಾಪ್ಟರ್ ಮರಕ್ಕೆ ಅಪ್ಪಳಿಸಿತು. ಅಷ್ಟರಲ್ಲಿ ಮೂವರು ಹೆಲಿಕಾಪ್ಟರ್ನಿಂದ ಕೆಳಗೆ ಬಿದ್ದರು. ಅದನ್ನು ನೋಡಿ ನಾನು ಸುತ್ತಲಿನ ಜನರನ್ನು ಕೂಗಿ ಕರೆದೆ. ಬಳಿಕ ಅಗ್ನಿಶಾಮಕ ದಳ, ತುರ್ತು ಸೇವಾ ಘಟಕಗಳಿಗೆ ಕರೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಸೇನಾ ಹೆಲಿಕಾಪ್ಟರ್ ಏನಾಯಿತು ? ಪ್ರತ್ಯಕ್ಷದರ್ಶಿ ಹೀಗೆ ವಿವರಿಸುತ್ತಾರೆ….. #BipinRawat
#HelicopterCrash #helicopter_crash#HelicopterAccident
Vedio Credit @AnandaVikatan pic.twitter.com/rJSw1tbqbA— theruralmirror (@ruralmirror) December 9, 2021
Advertisement
ಇನ್ನೊಬ್ಬರು ಪ್ರತ್ಯಕ್ಷದರ್ಶಿ ಮಂಜಪ್ಪ ಅವರು ಮಾಧ್ಯಮಗಳಿಗೆ ತಿಳಿಸಿದಂತೆ, ಕುನೂರಿನ ಕಟ್ಟೇರಿ ಹಿಲ್ಸ್‌ನಲ್ಲಿ ಈ ಘಟನೆ ನಡೆದಿದೆ. ಇದು ಊಟಿಯಿಂದ 25 ಕಿ.ಮೀ ದೂರದಲ್ಲಿದೆ. ಬೆಳಗ್ಗೆ 11.20ಕ್ಕೆ ಘಟನೆ ಸಂಭವಿಸಿದೆ. ಚಳಿಗಾಲ ಆರಂಭವಾಗಿರುವುದರಿಂದ ಮಂಜು ಕವಿದಿತ್ತು ಎಂದು ಹೇಳುತ್ತಾರೆ. ಹೀಗಾಗಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ, ಸದ್ದು ಕೇಳಿತು ಎನ್ನುತ್ತಾರೆ.
Advertisement– The Rural Mirror (@ruralmirror) 9 Dec 2021