ಬಿಪಿನ್​ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್​ ಏನಾಗಿತ್ತು ? | ಪ್ರತ್ಯಕ್ಷದರ್ಶಿ ಹೇಳಿದ್ದು ಹೀಗೆ…..|

December 9, 2021
10:27 AM

ಭಾರತೀಯ ಸೇನಾ‌ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಕುನೂರು ಬಳಿ ಪತನವಾಗಿತ್ತು.ಈ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಹೀಗೆ ವಿವರಿಸುತ್ತಾರೆ……

ಮಧ್ಯಾಹ್ನ ಸುಮಾರು 12 ರ ಹೊತ್ತಿಗೆ ದುರ್ಘಟನೆ ನಡೆದಿತ್ತು. ಒಂದು ಭಯಾನಕ ಶಬ್ದ ಕೇಳಿತು. ಅದು ತುಂಬ ಹತ್ತಿರದಲ್ಲೇ ಕೇಳಿಸಿತು. ಹೀಗಾಗಿ ಕುತೂಹಲ ಮತ್ತು ಭಯದಿಂದ ಹೊರಬಂದು ನೋಡಿದೆ. ಆಗ ಹೆಲಿಕಾಪ್ಟರ್​ವೊಂದು ಮರಕ್ಕೆ ಅಪ್ಪಳಿಸಿತ್ತು. ಅಲ್ಲಿಂದ ಬೆಂಕಿಯ ಉಂಡೆ ಏಳುತ್ತಿತ್ತು. ನೋಡುತ್ತಿದ್ದಂತೆ ಮತ್ತೆ ಆ ಹೆಲಿಕಾಪ್ಟರ್ ಮರಕ್ಕೆ ಅಪ್ಪಳಿಸಿತು. ಅಷ್ಟರಲ್ಲಿ ಮೂವರು ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದರು. ಅದನ್ನು ನೋಡಿ ನಾನು ಸುತ್ತಲಿನ ಜನರನ್ನು ಕೂಗಿ ಕರೆದೆ. ಬಳಿಕ ಅಗ್ನಿಶಾಮಕ ದಳ, ತುರ್ತು ಸೇವಾ ಘಟಕಗಳಿಗೆ ಕರೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಇನ್ನೊಬ್ಬರು ಪ್ರತ್ಯಕ್ಷದರ್ಶಿ ಮಂಜಪ್ಪ ಅವರು ಮಾಧ್ಯಮಗಳಿಗೆ ತಿಳಿಸಿದಂತೆ,  ಕುನೂರಿನ ಕಟ್ಟೇರಿ ಹಿಲ್ಸ್‌ನಲ್ಲಿ ಈ ಘಟನೆ ನಡೆದಿದೆ. ಇದು ಊಟಿಯಿಂದ 25 ಕಿ.ಮೀ ದೂರದಲ್ಲಿದೆ. ಬೆಳಗ್ಗೆ 11.20ಕ್ಕೆ ಘಟನೆ ಸಂಭವಿಸಿದೆ. ಚಳಿಗಾಲ ಆರಂಭವಾಗಿರುವುದರಿಂದ ಮಂಜು ಕವಿದಿತ್ತು ಎಂದು ಹೇಳುತ್ತಾರೆ. ಹೀಗಾಗಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ, ಸದ್ದು ಕೇಳಿತು ಎನ್ನುತ್ತಾರೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ನವೆಂಬರ್ ತಿಂಗಳ ಹವಾಮಾನ ಬದಲಾವಣೆ ಮತ್ತು ಅರಬ್ಬಿ ಸಮುದ್ರದ ಮಳೆಯ ಮುನ್ಸೂಚನೆ
ಹವಾಮಾನ ವರದಿ | 07-11-2026 | ನ.14ರಿಂದ ಮತ್ತೆ ಮಳೆ ? ಅರಬ್ಬಿ ಸಮುದ್ರದಲ್ಲಿ ಹೊಸ ಬೆಳವಣಿಗೆ
November 7, 2026
12:20 PM
by: ಸಾಯಿಶೇಖರ್ ಕರಿಕಳ
ದೀಪಾವಳಿ ಸಂದರ್ಭದಲ್ಲಿ ಪೋಷಕರೊಂದಿಗೆ ಹಣತೆ ಬೆಳಗಿಸುತ್ತಿರುವ ಮಗು.
ದೀಪಾವಳಿ ಪಟಾಕಿ ಅವಘಡ: ಮಕ್ಕಳ ಕಣ್ಣು, ಮುಖದ ರಕ್ಷಣೆಗೆ ಪೋಷಕರು ಎಚ್ಚರ ವಹಿಸಿ
November 7, 2026
7:31 AM
by: ದ ರೂರಲ್ ಮಿರರ್.ಕಾಂ
ಸಾಗುವಳಿ ಚೀಟಿ ಮತ್ತು ಅರಣ್ಯ ಎನ್‌ಒಸಿ ಸಮಸ್ಯೆ
ಸಾಗುವಳಿ ಪತ್ರಕ್ಕಾಗಿ ರೈತರಿಗೆ ಎನ್‌ಒಸಿ – ಜಂಟಿ ಸರ್ವೆ ಬಳಿಕ ಕ್ರಮ, 4 ತಿಂಗಳಲ್ಲಿ ಸರ್ವೆ ಪೂರ್ಣಗೊಳಿಸುವ ಭರವಸೆ
November 7, 2026
7:20 AM
by: ದ ರೂರಲ್ ಮಿರರ್.ಕಾಂ
ಪೆಟ್ರೋಲ್‌ನಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಪತ್ತೆ
November 7, 2026
6:51 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror