ಬಿಪಿ ಕಾಯಿಲೆ ಇರುವವರಿಗೆ ಇಲ್ಲಿದೆ ಕೆಲವು ಆರೋಗ್ಯಕರ ಟಿಪ್ಸ್

January 7, 2026
9:43 PM

ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ ರಕ್ತದೊತ್ತಡ ಯಾವಾಗಲೂ ಕೂಡ ಒಂದೇ ರೀತಿ ಇರಬೇಕು. ಅಂದರೆ ಲೋ ಬಿಪಿ ಕೂಡಾ ಆಗಬಾರದು. ಬಿಪಿ ಕಾಣಿಸಿಕೊಳ್ಳಲು ಮುಖ್ಯ ಕಾರಣ ಯಾವುದು ಎಂದು ಸರಿಯಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಆಹಾರ ಸೇವನೆ, ಅನುವಂಶೀಯ ಕಾರಣಗಳು, ಮಾನಸಿಕ ಒತ್ತಡ ಹೀಗೆ ಹತ್ತು ಹಲವಾರು ಕಾರಣಗಳು ಇರುತ್ತದೆ. ಈ ಕಾಯಿಲೆ ಇರುವವರನ್ನು ನೋಡಿಯೇ ಇರಬಹುದು ದಿನಲೂ ಮಾತ್ರಗಳನ್ನು ಸೇವಿಸುತ್ತಾನೇ ಇರುತ್ತಾರೆ. ಇನ್ನು ಮಾತ್ರಗಳ ಜೊತೆಗೆ ದೈನಂದಿನ ಆಹಾರಪದ್ಥತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡರೆ ಸುಲಭವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಯಾವ ರೀತಿ ಆಹಾರದಲ್ಲಿ ಬಿಪಿ ನಿಯಂತ್ರಿಸಬಹುದು:

  • ಕರಿಮೆಣಸು: ಕರಿಮೆಣಸನ್ನು ನಮ್ಮ ದೈನಂದಿನ ಆಹಾರಪದ್ಥತಿಯಲ್ಲಿ ಸೇರಿಸಿಕೊಳ್ಳುವುದರಿಂ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಇದರಿಂದ ಅಪಧಮನಿಗಳನ್ನು ಶುದ್ಧಿಕರಿಸಲು ಸಹಾಯ ಮಾಡುತ್ತದೆ.
  • ಹಣ್ಣುಗಳ ಸೇವನೆ: ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ರಕ್ತದೊತ್ತಡ ಕ್ರಮೇಣ ಕಡಿಮೆಯಾಗುತ್ತದೆ.
  • ಮೆಂತ್ಯ ಸೇವನೆ: ಮೆಂತ್ಯ ಬೀಜಗಳು ಅತ್ಯುತ್ತಮ ರಕ್ತ ಶುದ್ಧೀಕರಣಕಾರಕ. ಇದರಲ್ಲಿ ಪ್ರೋಟೀನ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.
  • ಕಪ್ಪು ಕವುನಿ: ಕಪ್ಪು ಕವುನಿ ಅಥವಾ ಪೌಷ್ಟಿಕಾಂಶಭರಿತ ಕಪ್ಪು ಅಕ್ಕಿ ಎಂದು ಕರೆಯುವ ಈ ಅಕ್ಕಿಯಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ ಮತ್ತು ಹಲವಾರು ಉತ್ಕರ್ಷಣ ನಿರೋಧಕಗಳು ಇರುತ್ತದ. ಇವು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ
ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!
January 8, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror