ಪ್ಲಾಸ್ಟಿಕ್ ಕವರ್‌ಗಳು(Plastic) ಇಡೀ ಪರಿಸರವನ್ನು ಆವರಿಸಿಬಿಟ್ಟಿದೆ. ಈ ಪೆಡಂಭೂತವನ್ನು ಪರಿಸರದಿಂದ(Nature) ತೆಗೆದು ಹಾಕಲಾಗದಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಆದರೆ ಪ್ರಜ್ಞಾವಂತ ನಾಗರೀಕರಾದ ನಾವು ಒಂದಷ್ಟು ಮುಂಜಾಗೃತ ಕ್ರಮಗಳನ್ನು(Precaution) ಕೈಗೊಳ್ಳಬಹುದು. ಮುಂದಿನ ಪೀಳಿಗೆಗಾದರು ಇದರಿಂದ ಮುಕ್ತಿಯನ್ನು ನೀಡಬಹುದು. ಇದಕ್ಕಾಗಿ ನಮ್ಮ ದೇಶದಲ್ಲೇ ಪರಿಸರ ಸ್ನೇಹಿ ಕೈ ಚೀಲಗಳನ್ನು ತಯಾರಿಸಲಾಗುತ್ತಿದೆ.
ಈ ಬಗ್ಗೆ ನಾವು ತಿಳಿದು ಬಳಸಿದರೆ ಉತ್ತಮ. ಇದರಿಂದ ನಮ್ಮ ಪರಿಸರ ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಅರೋಗ್ಯವಂತರಾಗಿ ಬೆಳೆಯುವಂತೆ ಮಾಡಬಹುದು. ನಮ್ಮ ದೇಶದ ಡಿಫೆನ್ಸ್ ರೀಸರ್ಚ ಡೆವಲಪ್ಮೆಂಟ್ ಸೆಂಟರ್(Defense Research Development Centre) ಇವರಿಂದ ತಯಾರಾದ ಪರಿಸರ ಸ್ನೇಹಿ ಕೈಚೀಲಗಳ(Plastic bags) ಕುರಿತು ಒಂದಿಷ್ಟು ಮಾಹಿತಿ ನಿಮಗಾಗಿ..
- ಇವು ಸಸ್ಯ ಜನ್ಯ ಪಿಎಲ್ಎ ಯಿಂದ ಅಂದರೆ ಮೆಕ್ಕೆ ಜೋಳ ಮತ್ತು ಸಾಬುದಾನಿಯಿಂದ ತಯಾರಾಗಿವೆ…
- ಜೀವ ಸಂಕುಲಕ್ಕೆ ಮಾರಕವಾದ ಪ್ಲಾಸ್ಟಿಕ್ ನಂತಹ ಯಾವುದೇ ಅಂಶಗಳನ್ನು ಹೊಂದಿರುವುದಿಲ್ಲ….
- ಬೇಡೆಂದು ಎಸೆದಲ್ಲಿ ನೀವು ನೆಟ್ಟ ಗಿಡ ಬೆಳೆಯಲು ಗೊಬ್ಬರವಾಗುತ್ತದೆ.. ಕೇವಲ180 ದಿನಗಳಲ್ಲಿ!( ಆದರೆ ಪ್ಲಾಸ್ಟಿಕ್ ಮಣ್ಣಿನಲ್ಲಿ ಕಣದಂತಹ ಸಣ್ಣ ಸಣ್ಣ ಚೂರು ಗಳಾಗಲು ಬೇಕು ಕನಿಷ್ಟ 20 ವರ್ಷ ಗಳು… ಆದರೂ ಗೊಬ್ಬರ ವಾಗುವುದಿಲ್ಲ)
- ಹೀಗೆ ಎಸೆದಾಗ ನಿಮ್ಮ ಮುದ್ದಾದ ಆಕಳು ಸೇವಿಸಿ ದ್ದಲ್ಲಿ ಚಿಂತಿಸಬೇಡಿ… ಇದರಿಂದ ನಿಮ್ಮ ಆಕಳ ಆರೋಗ್ಯ ಕ್ಕಾಗಲಿ…ಜೀವಕ್ಕಾಗಲೀ…ಹಾನಿಯುಂಟಾಗುವುದಿಲ್ಲ!
- ಈ ಚೀಲ ಗಳನ್ನು ಸುಟ್ಟರೆ ಕಪ್ಪು ಬೂದಿ ಯಾಗುವುದೇ ವಿನಃ ವಿಷಪೂರಿತ ಹೊಗೆಯಾಗುವುದಿಲ್ಲ…
- ಈ ಉತ್ಪನ್ನಗಳಿಗೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯಿಂದ ಅನುಮತಿ ದೊರೆತಿದೆ.
- ಇವುಗಳ ಸಂಶೋಧನೆ ಮತ್ತು ತಯಾರಿಸುವ ಜವಬ್ದಾರಿ ಹೈದರಾಬಾದ್ ನ DRDO ಸಂಸ್ಥೆ ವಹಿಸಿ ಕೊಂಡಿರವುದರಿಂದ ಪ್ಲಾಸ್ಟಿಕ್ ಕಲಬೆರಕೆಯ ಅನುಮಾನ ವಿಲ್ಲ.
ಇವುಗಳ ಬಳಕೆ : ಇವು ಪ್ಲಾಸ್ಟಿಕ್ ಗೆ ಬದಲಿ ಉತ್ಪನ್ನಗಳಾದ್ದರಿಂದ, ಪ್ಲಾಸ್ಟಿಕ್ ಮತ್ತು ಪೇಪರ್ ಬಳಸುವ ಕಡೆಗಳಲ್ಲಿ ಬಳಸಬಹುದು.ಉದಾಹರಣೆಗೆ carry bags, grocery bags, hotel meal packings, wraps, munching sheets, table covers, food packings, liquid packings, garbage bags, garment bags, etc… ಇವು ಗಳ ಬೆಲೆ ವಿಚಾರವಾಗಿ. ಹೇಳೋದಾದರೆ, ಬಟ್ಟೆ ಚೀಲ, ಪೇಪರ್ ಚೀಲ ಮತ್ತು ಲ್ಯಾಮಿನೇಟೆಡ್ ಪಾಲಿತಿನ್ ಬ್ಯಾಗ್ ಗಳಿಗಿಂತ ಅಗ್ಗವಾಗಿದ್ದು ,ಪ್ಲಾಸ್ಟಿಕ್ ಗಿಂತ ಕಲವೇ ರೂಪಾಯಿಗಳಲ್ಲಿ ದುಬಾರಿಯಾಗಿವೆ. ಆದ್ದರಿಂದ ಪ್ರಜ್ಞಾವಂತ ನಾಗರಿಕರಾದ ನಾವೆಲ್ಲರೂ ನಮ್ಮ ಬದುಕನ್ನು ಇಷ್ಟು ಚೆಂದವಾಗಿ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಭೂತಾಯಿಯನ್ನು ಸ್ವಚ್ಛವಾಗಿರಿಸಲು, ಆರೋಗ್ಯಕರ, ಗೌರವದ ಬದುಕನ್ನು ಬಾಳಲು ಪ್ಲಾಸ್ಟಿಕ್ ತ್ಯಜಿಸಿ, ಈ ಪರಿಸರ ಸ್ನೇಹಿ ಬ್ಯಾಗ್, ಕವರ್ ಗಳನ್ನು ಬಳಸಿ.