ಇನ್ನು 20 ವರ್ಷದಲ್ಲಿ ಆಕಾಶದಲ್ಲಿ ನಕ್ಷತ್ರಗಳೇ ಇರಲ್ವಂತೆ…!

June 3, 2023
7:00 PM

ಆಗಸದಲ್ಲಿ ಚಂದಿರನನ್ನು ನೋಡುವಂತೆಯೇ ನಕ್ಷತ್ರಗಳು, ನಕ್ಷತ್ರ ಪುಂಜಗಳು ಬಹು ಆಕರ್ಷವಾಗಿರುತ್ತವೆ. ಆಕಾಶ ವೀಕ್ಷಣೆ ಮಾಡುವ ಅನೇಕರಿಗೆ ನಕ್ಷತ್ರಗಳು ಹಾಗೂ ಅವುಗಳ ಚಲನೆಯ ಬಹು ಆಸಕ್ತಿಯ ವಿಷಯ. ಆದರೆ ಹೆಚ್ಚುತ್ತಿರುವ ಬೆಳಕಿನ ಮಾಲಿನ್ಯದ ಕಾರಣದಿಂದ ಮುಂದಿನ 20 ವರ್ಷಗಳಲ್ಲಿ ಆಕಾಶದಲ್ಲಿ  ನಕ್ಷತ್ರಗಳು ಗೋಚರವಾಗುವುದಿಲ್ಲ ಎಂದು ವಿಜ್ಞಾನಿಗಳ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ನಕ್ಷತ್ರವೊಂದು ಹುಟ್ಟುವುದು ಅನೇಕ ಸಹಸ್ರ ಸಂವತ್ಸರಗಳ ಕ್ರಿಯೆ. ಈ ಕ್ರಿಯೆ ಕೆಲವೇ ಹಂತಗಳಲ್ಲಿ ಸಾಗುತ್ತವೆ. ಸೂರ್ಯನೇ ಭೂಮಿಗೆ ಹತ್ತಿರದ ನಕ್ಷತ್ರ. ಅದು ಒಂದು ಮಧ್ಯಮ ಗಾತ್ರದ ತಾರೆ ತನ್ನ ಗುರುತ್ವದಿಂದಲೇ ಒಟ್ಟುಗೂಡಿದ ಪ್ಲಾಸ್ಮಾದ ಹೊಳೆಯುವ ಗೋಳ. ಇತರ ಅನೇಕ ನಕ್ಷತ್ರಗಳು ಭೂಮಿಯಿಂದ ಬರಿಗಣ್ಣಿಗೆ ರಾತ್ರಿ ಸಮಯದಲ್ಲಿ ಅಪಾರ ವೇಗದ ಚಲನೆ ಇದ್ದರೂ ಹೊಳೆಯುವ ಆಕಾಶದಲ್ಲಿ ಸ್ಥಿರ ಬಂದುಗಳಂತೆ ಕಾಣಿಸುತ್ತವೆ. ಕಾರಣ ಅವು ಭೂಮಿಯಿಂದ ಅಪಾರ ದೂರ ಇವೆ.  

ಈಗ ನಕ್ಷತ್ರಗಳು ಆಕಾಶದ  ಸೌಂದರ್ಯದ ಪ್ರತೀಕ. ರಾತ್ರಿಯ ವೇಳೆ ಆಕಾಶ ದಿಟ್ಟಿಸಿ ನೋಡುತ್ತಾ ಆಕಾಶದಲ್ಲಿನ ನಕ್ಷತ್ರ ಎಣಿಸುವ ಸಂತೋಷವೇ ಬೇರೆ. ಆದರೆ ಮುಂದಿನ ದಿನಗಳಲ್ಲಿ ಆಕಾಶದಲ್ಲಿ ನಕ್ಷತ್ರಗಳ ಗೋಚರ ಅಸಾಧ್ಯ, ಆ ಸಂತೋಷ ಅಲ್ಪ ವರ್ಷಗಳು ಎಂದು ಹೇಳುತ್ತಿರುವ ವಿಜ್ಞಾನಿಗಳು ಇದಕ್ಕೆಲ್ಲಾ ಕಾರಣ ಬೆಳಕಿನ ಮಾಲಿನ್ಯ ಎಂಬ ಕಾರಣವನ್ನು ನೀಡಿದ್ದಾರೆ. ಬೆಳಕಿನ ಮಾಲಿನ್ಯದಿಂದಾಗಿ ಕೇವಲ 20 ವರ್ಷಗಳು ಮಾತ್ರ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುತ್ತವೆ. ನಂತರ ನಕ್ಷತ್ರಗಳು ನಾಶವಾಗಲಿವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ದ ಗಾರ್ಡಿಯನ್ ಗೆ ನೀಡಿದ  ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರಿಟಿಷ್‌ ಖಗೋಳಶಾಸ್ತ್ರಜ್ಞ, ರಾಯಲ್‌ ಮಾರ್ಟಿನ್‌ ರೀಸ್‌  ‘ಕಳೆದ ಹಲಾವರು ವರ್ಷಗಳಲ್ಲಿ ಬೆಳಕಿನ ಮಾಲಿನ್ಯವು ತೀವ್ರವಾಗಿದೆ. 2016 ರಿಂದ ಕ್ಷೀರಪಥವು ಪ್ರಪಂಚದ ಮೂರನೇ ಒಂದು ಭಾಗದಷ್ಟುಜನರಿಗೆ ಗೋಚರವಾಗುವುದಿಲ್ಲ ಎಂದು ಖಗೋಳಶಾಸ್ತ್ರಜ್ಞರು ವರದಿ ಮಾಡಿದ್ದರು. ಮುಂದಿನ ಪೀಳಿಗೆಯ ಮಕ್ಕಳು ರಾತ್ರಿ ಆಕಾಶವನ್ನು ಅದರ ಪ್ರಕಾಶತೆ ಮತ್ತು ನಕ್ಷತ್ರಗಳನ್ನು ನೋಡಲು ಸಾಧ್ಯವಿಲ್ಲ ಎಂಬುದು ಗಂಭೀರ ವಿಷಯವಾಗಿದೆ’ ಎಂದಿದ್ದಾರೆ. ಈ ಬೆಳಕಿನ ಮಾಲಿನ್ಯವು ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿದೆ ಎಂದಿದ್ದಾರೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಪರೇಷನ್ ಸಿಂದೂರ್ – ಪಾಕಿಸ್ತಾನದ ದಾಳಿಗೆ ಭಾರತದ ಪ್ರತ್ಯುತ್ತರ
May 9, 2025
8:00 PM
by: The Rural Mirror ಸುದ್ದಿಜಾಲ
ಭಾರತ, ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಳ | ವಾಯುಪಡೆಯ ನೆಲೆಯಿಂದ ಎಚ್ಚರಿಕೆ
May 9, 2025
7:49 PM
by: The Rural Mirror ಸುದ್ದಿಜಾಲ
ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ
May 9, 2025
7:51 AM
by: ದ ರೂರಲ್ ಮಿರರ್.ಕಾಂ
ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group