ದೇಶದಲ್ಲಿ ಡಾನಾ ಚಂಡಮಾರುತವು ಬಲಗೊಂಡಿದೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯವು ಚಂಡಮಾರುತಾವಗಿ ಮಾರ್ಪಟ್ಟು ಇದೀಗ ಅಬ್ಬರಿಸುತ್ತಾ ಒಡಿಶಾ ಕರಾವಳಿಯಲ್ಲಿ ಅಪ್ಪಳಿಸುತ್ತಿದೆ. ಒಡಿಶಾ ಸರ್ಕಾರ ಕರಾವಳಿ ಪ್ರದೇಶಗಳ ಜನರನ್ನು ಸ್ಥಳಾಂತರಿಸುವ ಕೆಲಸ ಈಗಾಗಲೇ ಮಾಡಿದೆ. 14 ಜಿಲ್ಲೆಗಳ ಚಂಡಮಾರುತ ಆರ್ಭಟಿಸುವ ಪ್ರದೇಶಗಳಲ್ಲಿ 288 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಚಂಡಮಾರುತ ‘ಡಾನಾ’ ನಾಳೆ ತಡರಾತ್ರಿ ಅಥವಾ ಶುಕ್ರವಾರ ಮುಂಜಾನೆ ಒಡಿಶಾ ಕರಾವಳಿಯಲ್ಲಿ ಭೂಸ್ಪರ್ಶ ಉಂಟುಮಾಡುವ ಸಾಧ್ಯತೆಯಿದೆ. ಭೂಕುಸಿತದ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 100 ರಿಂದ 120 ಕಿ.ಮೀ. ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸದ್ಯ ಚಂಡಮಾರುತವು ಒಡಿಶಾ ಕರಾವಳಿಯಿಂದ ಸುಮಾರು 460 ಕಿಮೀ ದೂರದಲ್ಲಿದೆ ಮತ್ತು ಬಂಗಾಳಕೊಲ್ಲಿಯಲ್ಲಿ ಒಡಿಶಾ ಕರಾವಳಿಯ ಕಡೆಗೆ ಗಂಟೆಗೆ 12 ಕಿಮೀ ವೇಗದಲ್ಲಿ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel