Advertisement
MIRROR FOCUS

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

Share

”ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ(Foreign Affairs Military) ಎಸ್. ಜೈಶಂಕರ್(S Jai Shankar) ಹೇಳಿದರು.‌

Advertisement
Advertisement

ನವದೆಹಲಿಯಲ್ಲಿ ಶುಕ್ರವಾರ ನಡೆದ 2024ರ CII ವಾರ್ಷಿಕ ವ್ಯಾಪಾರ ಶೃಂಗಸಭೆಯಲ್ಲಿ(Summit) ಮಾತನಾಡಿದ ಅವರು, “ಇಂದಿನ ಆರ್ಥಿಕತೆಯ ಯುಗದಲ್ಲಿ ಭಾರತೀಯ ಕೌಶಲ್ಯ ಮತ್ತು ಪ್ರತಿಭೆಯ ಪಾತ್ರವನ್ನು ಸಹ ಮರುಮೌಲ್ಯಮಾಪನ ಮಾಡಲಾಗುತ್ತಿದೆ. ತಾಂತ್ರಿಕ ಪ್ರಗತಿಯ ಸ್ವರೂಪವು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿದೆ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನಸಂಖ್ಯೆ ಕೊರತೆ ಇದೆ. ಭಾರತದೊಂದಿಗೆ ಚಲನಶೀಲತೆ ಒಪ್ಪಂದಗಳನ್ನು ಮಾಡಿಕೊಳ್ಳಲು ಅಭಿವೃದ್ಧಿ ಹೊಂದಿದ ದೇಶಗಳು ಆಸಕ್ತಿ ತೋರುತ್ತಿವೆ” ಎಂದರು.

Advertisement

”ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿ ಹರಡುವುದು ಮೋದಿ ಸರ್ಕಾರದ ಚಿಂತನೆಯಾಗಿದೆ. ಇದರಿಂದ ಅಭಿವೃದ್ಧಿ ಹೊಂದಿದ ದೇಶಗಳು ಮೋದಿ ಯೋಚನೆಗಳನ್ನು ಬೆಂಬಲಿಸಿವೆ. ಜೊತೆಗೆ ನಮ್ಮ ಮಾನವ ಸಂಪನ್ಮೂಲಗಳ ಉನ್ನತೀಕರಣದಲ್ಲಿ ವ್ಯಾಪಾರಗಳಿಗೆ ನ್ಯಾಯಯುತ ಪಾಲು ಲಭಿಸಬೇಕಿದೆ” ಎಂದು ವಿವರಿಸಿದರು.

ವಿದೇಶಗಳಲ್ಲಿಯೂ ಸಹ ಭಾರತೀಯ ನಾಗರಿಕರನ್ನು ಸುರಕ್ಷಿತಗೊಳಿಸುವ ಬಾಧ್ಯತೆಯನ್ನು ಪ್ರತಿಪಾದಿಸಿದ ಸಚಿವರು, ಉಕ್ರೇನ್ ಮತ್ತು ಸುಡಾನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತದ ಯಶಸ್ವಿ ಕಾರ್ಯಾಚರಣೆಗಳನ್ನು ಎತ್ತಿ ತೋರಿಸಿದರು. ಭಾರತವನ್ನು ನಾವೀನ್ಯತೆ, ಸಂಶೋಧನೆ ಮತ್ತು ವಿನ್ಯಾಸಕ್ಕಾಗಿ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಭರವಸೆ ನೀಡಿದರು.

Advertisement

“ಜಾಗತಿಕ ಕೆಲಸದ ಸ್ಥಳವು ವಿಸ್ತರಿಸಿದಂತೆ, ವಿದೇಶದಲ್ಲಿ ನಮ್ಮ ನಾಗರಿಕರನ್ನು ಸುರಕ್ಷಿತಗೊಳಿಸುವ ಬಾಧ್ಯತೆಯು ಪ್ರಮಾಣಾನುಗುಣವಾಗಿ ಬೆಳೆಯುತ್ತದೆ. ಅದೃಷ್ಟವಶಾತ್, ಇದು ಉಕ್ರೇನ್ ಮತ್ತು ಸುಡಾನ್‌ನಲ್ಲಿ ಇತ್ತೀಚೆಗೆ ಸಾಕ್ಷಿಯಾಗಿರುವಂತೆ ನಾವು ಈಗಾಗಲೇ ಸಾಮರ್ಥ್ಯಗಳನ್ನು ನಿರ್ಮಿಸಿದ ಮತ್ತು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು (ಎಸ್​ಒಪಿ) ರಚಿಸಿರುವ ಪ್ರದೇಶವಾಗಿದೆ. ವಿದೇಶದಲ್ಲಿ ಪ್ರಯಾಣಿಸುವ ಮತ್ತು ಕೆಲಸ ಮಾಡುವ ಭಾರತೀಯರ ಸುಲಭ ಜೀವನಕ್ಕಾಗಿ ನಾವು ತಂತ್ರಜ್ಞಾನವನ್ನು ಹೆಚ್ಚು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

“ಮೇಕ್ ಇನ್ ಇಂಡಿಯಾ ಪ್ರಾಮುಖ್ಯತೆಯೊಂದಿಗೆ ನಾವೀನ್ಯತೆ, ಸಂಶೋಧನೆ ಮತ್ತು ವಿನ್ಯಾಸಕ್ಕಾಗಿ ನಮ್ಮ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ‘ವರ್ಕ್ ಇನ್ ಇಂಡಿಯಾ’ ನೈಸರ್ಗಿಕ ಫಲಿತಾಂಶವಾಗಿದ್ದು, ಇದು ‘ಮೇಕ್ ಇನ್ ಇಂಡಿಯಾ’ಗೆ ಆಧಾರವಾಗಿದೆ” ಎಂದರು. “ಭಾರತವು ಭಯೋತ್ಪಾದನೆ ಮತ್ತು ಉಗ್ರವಾದದ ಪ್ರಭಾವವನ್ನು ತಗ್ಗಿಸುವತ್ತ ಕ್ರಮಗಳನ್ನು ತೆಗೆದುಕೊಂಡಿದೆ. ಜೊತೆಗೆ ಜಗತ್ತನ್ನು ಸಾಧ್ಯವಾದಷ್ಟು ಸ್ಥಿರಗೊಳಿಸುವ ನಿಟ್ಟಿನಲ್ಲಿ ಉತ್ತಮ ಕೊಡುಗೆ ನೀಡುವ ಕಾರ್ಯದಲ್ಲಿ ತೊಡಗಿದೆ. ‘ಭಾರತ್ ಫಸ್ಟ್’ ಮತ್ತು ‘ವಸುದೈವ ಕುಟುಂಬಕಂ’ ಈ ವಿವೇಚನಾಯುಕ್ತ ಸಂಯೋಜನೆಯೇ ‘ವಿಶ್ವ ಬಂಧು’ ಎಂಬುದನ್ನು ವ್ಯಾಖ್ಯಾನಿಸುತ್ತದೆ” ಎಂದು ಸಚಿವ ಜೈಶಂಕರ್ ವಿವರಿಸಿದರು.

Advertisement
  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದ  ಚಾರಣ ಪಥಗಳಲ್ಲಿ ದಿನಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಅವಕಾಶ | ಸಚಿವ ಈಶ್ವರ್ ಖಂಡ್ರೆ

ರಾಜ್ಯದ ಎಲ್ಲಾ ಚಾರಣ ಪಥಗಳಲ್ಲಿ ದಿನವೊಂದಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಅವಕಾಶ.

14 hours ago

ಹವಾಮಾನ ವರದಿ | 04-10-2024 | ಗುಡುಗು ಸಹಿತ ಮಳೆ ಮುಂದುವರಿಕೆ | ಹಿಂಗಾರು ಮತ್ತಷ್ಟು ವಿಳಂಬ |

ಮಳೆಯು ವಾತಾವರಣದ ಅಧಿಕ ತಾಪಮಾನದಿಂದ ಸ್ಥಳೀಯವಾಗಿ ಉಂಟಾದ ಮೋಡಗಳಿಂದಾಗುತ್ತಿವೆ. ಹಿಂಗಾರು ಮಾರುತಗಳು ಮತ್ತಷ್ಟು…

16 hours ago

ಅಡಿಕೆ ಧಾರಣೆ ಇಳಿಕೆ | ಅನಾವಶ್ಯಕ ಗೊಂದಲ ಬೇಡ | ಅಡಿಕೆಗೆ ಬೇಡಿಕೆ ಇದ್ದು ಧಾರಣೆ ಕುಸಿಯುವ ಲಕ್ಷಣವಿಲ್ಲ – ಕಿಶೋರ್‌ ಕುಮಾರ್‌ ಕೊಡ್ಗಿ |

ಅಡಿಕೆ ಧಾರಣೆಗೆ ಸಂಬಂಧಿಸಿದ  ಅನಾವಶ್ಯಕ ಗೊಂದಲಗಳಿಂದ ಕೂಡಿದ, ಆಡಿಕೆ ಬೆಳೆಗಾರರ ಆತ್ಮ ಸೈರ್ಯ ಕುಗ್ಗಿಸುವ…

2 days ago

ಡಾಕ್ಟರೇಟ್ ಪದವಿ ಪಡೆದ ಪುತ್ತೂರಿನ ವಿವೇಕಾನಂದ ಪ್ರಾಧ್ಯಾಪಕಿ ವಿದ್ಯಾ ಎಸ್

ವಿದ್ಯಾ ಎಸ್‌ ಅವರಿಗೆ "ಕರ್ನಾಟಕದ ಹವ್ಯಕ ಸಮುದಾಯ: ಒಂದು ಸಮಾಜಶಾಸ್ತ್ರೀಯ ಅಧ್ಯಯನ" ಎಂಬ…

2 days ago

ಹವಾಮಾನ ವರದಿ | 03-10-2024 | ಅಲ್ಲಲ್ಲಿ ತುಂತುರು ಮಳೆ ಸಾಧ್ಯತೆ | ಹಿಂಗಾರು ಆರಂಭ ವಿಳಂಬ ಸಾಧ್ಯತೆ |

ಅರಬ್ಬಿ ಸಮುದ್ರದಿಂದ ಕಡೆಯಿಂದ ವಾಯವ್ಯದಿಂದ ಹಾಗೂ ದಕ್ಷಿಣದ ಶ್ರೀಲಂಕಾ ಕಡೆಯಿಂದ ಬೀಸುತ್ತಿರುವ ಅಲ್ಪ…

2 days ago

ಊಹಾ ಪತ್ರಿಕೋದ್ಯಮವೇ ಇಂದು ಬೇಕೇ..? – ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಗಂಡ ಹೆಂಡತಿ ಜಗಳವನ್ನೇ ಇಡೀ ದಿನ ತೋರಿಸಿದರೆ ಅದು ನೈತಿಕ ಪತ್ರಿಕೋದ್ಯಮನಾ  ಮುಖ್ಯಮಂತ್ರಿ …

2 days ago