Advertisement
MIRROR FOCUS

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

Share

”ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ(Foreign Affairs Military) ಎಸ್. ಜೈಶಂಕರ್(S Jai Shankar) ಹೇಳಿದರು.‌

ನವದೆಹಲಿಯಲ್ಲಿ ಶುಕ್ರವಾರ ನಡೆದ 2024ರ CII ವಾರ್ಷಿಕ ವ್ಯಾಪಾರ ಶೃಂಗಸಭೆಯಲ್ಲಿ(Summit) ಮಾತನಾಡಿದ ಅವರು, “ಇಂದಿನ ಆರ್ಥಿಕತೆಯ ಯುಗದಲ್ಲಿ ಭಾರತೀಯ ಕೌಶಲ್ಯ ಮತ್ತು ಪ್ರತಿಭೆಯ ಪಾತ್ರವನ್ನು ಸಹ ಮರುಮೌಲ್ಯಮಾಪನ ಮಾಡಲಾಗುತ್ತಿದೆ. ತಾಂತ್ರಿಕ ಪ್ರಗತಿಯ ಸ್ವರೂಪವು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿದೆ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನಸಂಖ್ಯೆ ಕೊರತೆ ಇದೆ. ಭಾರತದೊಂದಿಗೆ ಚಲನಶೀಲತೆ ಒಪ್ಪಂದಗಳನ್ನು ಮಾಡಿಕೊಳ್ಳಲು ಅಭಿವೃದ್ಧಿ ಹೊಂದಿದ ದೇಶಗಳು ಆಸಕ್ತಿ ತೋರುತ್ತಿವೆ” ಎಂದರು.

”ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿ ಹರಡುವುದು ಮೋದಿ ಸರ್ಕಾರದ ಚಿಂತನೆಯಾಗಿದೆ. ಇದರಿಂದ ಅಭಿವೃದ್ಧಿ ಹೊಂದಿದ ದೇಶಗಳು ಮೋದಿ ಯೋಚನೆಗಳನ್ನು ಬೆಂಬಲಿಸಿವೆ. ಜೊತೆಗೆ ನಮ್ಮ ಮಾನವ ಸಂಪನ್ಮೂಲಗಳ ಉನ್ನತೀಕರಣದಲ್ಲಿ ವ್ಯಾಪಾರಗಳಿಗೆ ನ್ಯಾಯಯುತ ಪಾಲು ಲಭಿಸಬೇಕಿದೆ” ಎಂದು ವಿವರಿಸಿದರು.

ವಿದೇಶಗಳಲ್ಲಿಯೂ ಸಹ ಭಾರತೀಯ ನಾಗರಿಕರನ್ನು ಸುರಕ್ಷಿತಗೊಳಿಸುವ ಬಾಧ್ಯತೆಯನ್ನು ಪ್ರತಿಪಾದಿಸಿದ ಸಚಿವರು, ಉಕ್ರೇನ್ ಮತ್ತು ಸುಡಾನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತದ ಯಶಸ್ವಿ ಕಾರ್ಯಾಚರಣೆಗಳನ್ನು ಎತ್ತಿ ತೋರಿಸಿದರು. ಭಾರತವನ್ನು ನಾವೀನ್ಯತೆ, ಸಂಶೋಧನೆ ಮತ್ತು ವಿನ್ಯಾಸಕ್ಕಾಗಿ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಭರವಸೆ ನೀಡಿದರು.

“ಜಾಗತಿಕ ಕೆಲಸದ ಸ್ಥಳವು ವಿಸ್ತರಿಸಿದಂತೆ, ವಿದೇಶದಲ್ಲಿ ನಮ್ಮ ನಾಗರಿಕರನ್ನು ಸುರಕ್ಷಿತಗೊಳಿಸುವ ಬಾಧ್ಯತೆಯು ಪ್ರಮಾಣಾನುಗುಣವಾಗಿ ಬೆಳೆಯುತ್ತದೆ. ಅದೃಷ್ಟವಶಾತ್, ಇದು ಉಕ್ರೇನ್ ಮತ್ತು ಸುಡಾನ್‌ನಲ್ಲಿ ಇತ್ತೀಚೆಗೆ ಸಾಕ್ಷಿಯಾಗಿರುವಂತೆ ನಾವು ಈಗಾಗಲೇ ಸಾಮರ್ಥ್ಯಗಳನ್ನು ನಿರ್ಮಿಸಿದ ಮತ್ತು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು (ಎಸ್​ಒಪಿ) ರಚಿಸಿರುವ ಪ್ರದೇಶವಾಗಿದೆ. ವಿದೇಶದಲ್ಲಿ ಪ್ರಯಾಣಿಸುವ ಮತ್ತು ಕೆಲಸ ಮಾಡುವ ಭಾರತೀಯರ ಸುಲಭ ಜೀವನಕ್ಕಾಗಿ ನಾವು ತಂತ್ರಜ್ಞಾನವನ್ನು ಹೆಚ್ಚು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

“ಮೇಕ್ ಇನ್ ಇಂಡಿಯಾ ಪ್ರಾಮುಖ್ಯತೆಯೊಂದಿಗೆ ನಾವೀನ್ಯತೆ, ಸಂಶೋಧನೆ ಮತ್ತು ವಿನ್ಯಾಸಕ್ಕಾಗಿ ನಮ್ಮ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ‘ವರ್ಕ್ ಇನ್ ಇಂಡಿಯಾ’ ನೈಸರ್ಗಿಕ ಫಲಿತಾಂಶವಾಗಿದ್ದು, ಇದು ‘ಮೇಕ್ ಇನ್ ಇಂಡಿಯಾ’ಗೆ ಆಧಾರವಾಗಿದೆ” ಎಂದರು. “ಭಾರತವು ಭಯೋತ್ಪಾದನೆ ಮತ್ತು ಉಗ್ರವಾದದ ಪ್ರಭಾವವನ್ನು ತಗ್ಗಿಸುವತ್ತ ಕ್ರಮಗಳನ್ನು ತೆಗೆದುಕೊಂಡಿದೆ. ಜೊತೆಗೆ ಜಗತ್ತನ್ನು ಸಾಧ್ಯವಾದಷ್ಟು ಸ್ಥಿರಗೊಳಿಸುವ ನಿಟ್ಟಿನಲ್ಲಿ ಉತ್ತಮ ಕೊಡುಗೆ ನೀಡುವ ಕಾರ್ಯದಲ್ಲಿ ತೊಡಗಿದೆ. ‘ಭಾರತ್ ಫಸ್ಟ್’ ಮತ್ತು ‘ವಸುದೈವ ಕುಟುಂಬಕಂ’ ಈ ವಿವೇಚನಾಯುಕ್ತ ಸಂಯೋಜನೆಯೇ ‘ವಿಶ್ವ ಬಂಧು’ ಎಂಬುದನ್ನು ವ್ಯಾಖ್ಯಾನಿಸುತ್ತದೆ” ಎಂದು ಸಚಿವ ಜೈಶಂಕರ್ ವಿವರಿಸಿದರು.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

51 seconds ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

11 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

15 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

17 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

19 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

19 hours ago