ಹಳ್ಳಿಗಳಲ್ಲೂ ಈಗ ಸದ್ದು ಮಾಡುತ್ತಿದೆ ವೇಗದ ಇಂಟರ್ನೆಟ್‌ | ಪ್ರಧಾನಿಗಳ ಸ್ವಾತಂತ್ರ್ಯ ಭಾಷಣ ಈಡೇರುತ್ತಿದೆ | ಹಳ್ಳಿ ಮನೆಯಿಂದಲೂ ಈಗ ವರ್ಕ್‌ ಫ್ರಂ ಹೋಂ |

August 19, 2021
11:29 PM

ಕಳೆದ ವರ್ಷ ಸ್ವಾತಂತ್ರೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು , ಮುಂದಿನ ದಿನಗಳಲ್ಲಿ  ಪ್ರತೀ ಹಳ್ಳಿಗಳಿಗೂ ವೇಗದ ಇಂಟರ್ನೆಟ್‌ ತಲುಪಲಿದೆ ” ಎಂದಿದ್ದರು. ಇದೀಗ ವರ್ಷದಲ್ಲಿ ಹಳ್ಳಿಗಳಲ್ಲೂ ವೇಗದ ಇಂಟರ್ನೆಟ್‌ ಸದ್ದು ಮಾಡುತ್ತಿದೆ, ತೀರಾ ಕಾಡು ಪ್ರದೇಶದಲ್ಲೀ ಇಂಟರ್ನೆಟ್‌ ಲಭ್ಯವಿದೆ. ಇನ್ನೂ ಇಂಟರ್ನೆಟ್‌ ತಲುಪಬೇಕಾದ ಹಳ್ಳಿಗಳು ಇವೆ. ಅಂತಹ ಹಳ್ಳಿಯ ಕಡೆಗೂ ವೇಗದ ಇಂಟರ್ನೆಟ್‌ ಹರಿಯುವ ಪ್ರಯತ್ನವಂತೂ ನಡೆದಿದೆ.

Advertisement
Advertisement

 

ದೇಶದ ಪ್ರಧಾನಿಗಳು ಸ್ವಾತಂತ್ರ್ಯೋತ್ಸವ ದಿನ ಭಾಷಣದಲ್ಲಿ ಹಳ್ಳಿಗಳಿಗೂ ವೇಗದ ಇಂಟರ್ನೆಟ್‌ ಲಭ್ಯವಾಗಲಿದೆ ಎಂದಿದ್ದೇ ತಡ, ಅನೇಕರು ಇದು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಆದರೆ ಇದರ ಬೆನ್ನೆತ್ತಿದ ಗ್ರಾಮೀಣ ಭಾಗದ ಜನರಿಗೆ ಈಗ ವೇಗದ ಇಂಟರ್ನೆಟ್‌ ಲಭ್ಯವಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ  ಬಿ ಎಸ್‌ ಎನ್‌ ಎಲ್‌ ಮೂಲಕ ವೇಗದ ಇಂಟರ್ನೆಟ್‌ ಲಭ್ಯವಾಗುತ್ತಿದೆ. ಒ ಎಫ್‌ ಸಿ  ಕೇಬಲ್‌ ಮೂಲಕ ಬಿ ಎಸ್‌ ಎನ್‌ ಎಲ್‌ ಈ ಸೇವೆ ನೀಡುತ್ತದೆ. ಆದರೆ ಖಾಸಗಿ ಫ್ರಾಂಚೈಸಿ ಮೂಲಕ  ಸಂಪರ್ಕ ನೀಡುತ್ತದೆ. ಇದಕ್ಕಾಗಿಯೇ ಹಲವಾರು ಪ್ರಾಂಚೈಸಿಗಳು ಈಗ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಬಿ ಎಸ್‌ ಎನ್‌ ಎಲ್‌ ಜೊತೆ ಒಪ್ಪಂದ ಮಾಡಿಕೊಂಡು ಪ್ರಾಂಚೈಸಿಗಳು ಗ್ರಾಮಗಳಲ್ಲಿ ಕೇಬಲ್‌ ಎಳೆದು ಮನೆ ಮನೆಗೆ ಸಂಪರ್ಕ ನೀಡುತ್ತಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ  ಗ್ರಾಮೀಣ ಭಾಗಕ್ಕೂ ವೇಗದ ಇಂಟರ್ನೆಟ್‌ ಲಭ್ಯವಾಗಬೇಕು ಹಾಗೂ ಪ್ರಧಾನಿಗಳ ಭಾಷಣದ ಆಧಾರದಲ್ಲಿ ಬಿ ಎಸ್‌ ಎನ್‌ ಎಲ್‌ ಹಿರಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿದ ಸುಳ್ಯದ ಯುವಕರ ತಂಡಕ್ಕೆ ಯಶಸ್ಸು ಸಿಕ್ಕಿತ್ತು. ಅದಾದ ಬಳಿಕ ಒ ಎಫ್‌ ಸಿ  ಮೂಲಕ ಮನೆ ಮನೆಗೆ ಇಂಟರ್ನೆಟ್‌ ತಲುಪಿಸಲು ಎಲ್ಲೆಡೆಯೂ ಪ್ರಾಂಚೈಸಿಗಳಿಗೆ ಅವಕಾಶ ನೀಡಲಾಯಿತು. ಹೀಗಾಗಿ ಈಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯಗಳಲ್ಲಿ  ಹೆಚ್ಚಿನ ಸಂಪರ್ಕಗಳು ನಡೆಯುತ್ತಿದೆ. ಸುಳ್ಯ ತಾಲೂಕಿನಲ್ಲಿ  ಹಲವು ಮಂದಿ ಬಿ ಎಸ್‌ ಎನ್‌ ಎಲ್‌ ಜೊತೆ ಒಪ್ಪಂದ ಮಾಡಿಕೊಂಡು ಪ್ರಾಂಚೈಸಿ ಮೂಲಕ ಕೇಬಲ್‌ ಎಳೆಯುವ ಕಾರ್ಯ ಮಾಡುತ್ತಿದ್ದಾರೆ.

ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ, ಬಾಳುಗೋಡುನಂತಹ ತೀರಾ ಗ್ರಾಮೀಣ ಭಾಗಗಳಲ್ಲೂ ಈಗ ಬಿ ಎಸ್‌ ಎನ್‌ ಎಲ್‌ ಕೇಬಲ್‌ ಕಾಣುತ್ತಿದೆ. ಮನೆ ಮನೆಗೆ ಇಂಟರ್ನೆಟ್‌ ಸಂಪರ್ಕ ಸಾಧ್ಯವಾಗುತ್ತಿದೆ.

ಇದೀಗ ಎಡಮಂಗಲ ಕಡೆಗೂ ಈಗ ಇಂಟರ್ನೆಟ್‌ ಸಂಪರ್ಕದ ವ್ಯವಸ್ಥೆಯಾಗುತ್ತಿದೆ. ಇಲ್ಲಿನ ಬಹುತೇಕ ಮನೆಗಳಿಗೆ ಇಂಟರ್ನೆಟ್‌ ಸೇವೆ ಲಭ್ಯವಾಗಬೇಕು ಎನ್ನುವುದು  ಉದ್ದೇಶವಾಗಿದೆ, ದೇಶದ ಪ್ರಧಾನಿಗಳ ಕನಸು ಇದಾಗಿದ್ದು ಹಳ್ಳಿಗಳಲ್ಲೂ ವೇಗದ ಇಂಟರ್ನೆಟ್‌ ಇಂದು ಅಗತ್ಯವಾಗಿದೆ ಎಂದು ಹೇಳುತ್ತಾರೆ ಎಡಮಂಗಲ ಬಳಿಯ ಎಣ್ಮೂರಿನ ಶ್ರೀನಂದನ ಕೆ.  ನಿಂತಿಕಲ್ಲಿನಿಂದ ಎಡಮಂಗಲದವರೆಗೆ ಪ್ರಾಂಚೈಸಿ ಮೂಲಕ ಕೇಬಲ್‌ ಎಳೆಯುತ್ತಿದ್ದು ಕೆಲವೇ ದಿನಗಳಲ್ಲಿ  ಇಡೀ ಪ್ರದೇಶದಲ್ಲಿ ಇಂಟರೆ ನೆಟ್‌ ಲಭ್ಯವಾಗಲಿದೆ.

ಶ್ರೀನಂದನ್ ಕೆ ಅವರು ಎಣ್ಮೂರು ಗ್ರಾಮದಲ್ಲಿ ಇಂಟರ್ನೆಟ್ ಸಮಸ್ಯೆಯನ್ನು ಅರಿತು ಬಿ ಎಸ್ ಎನ್ ಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಫ್ರಾಂಚೈಸಿ ಮೂಲಕ ಗ್ರಾಮದ ಮೂಲೆಮೂಲೆಗೆ ಇಂಟರ್ನೆಟ್ ಬರಬೇಕೆನ್ನುವ ಇಚ್ಛೆಯಲ್ಲಿ ಕೇಬಲ್ ಎಳೆಸುವ ಮುಂದಾಳತ್ವ ಇಲ್ಲಿ ವಹಿಸಿಕೊಂಡಿದ್ದಾರೆ. ಈಗಾಗಲೇ ಕೇರ್ಪಡದಿಂದ ನರ್ಲಡ್ಕ, ಗುಂಡಿಮಜಲು ಹಾಗೂ ಗುತ್ತು ಕಡೆ ಕೇಬಲ್ ಎಳೆಯಲಾಗಿದೆ. ಇನ್ನೊಂದೆರಡು ದಿನದಲ್ಲಿ ಕರೀಂಬಿಲ, ಹೇಮಳ, ಪಡ್ಪಿನಂಗಡಿ ಕಡೆಗೂ ಕೇಬಲ್ ತಲುಪಲಿದೆ.

ಗ್ರಾಮೀಣ ಭಾಗದಲ್ಲಿ ವೇಗದ ಇಂಟರ್ನೆಟ್‌ ಲಭ್ಯವಾದರೆ , ವರ್ಕ್‌ ಫ್ರಂ ಮೂಲಕ ಕೆಲಸ ಮಾಡುವ ಅನೇಕರಿಗೆ ಪ್ರಯೋಜನವಾಗುತ್ತದೆ. ಯುವಕರು ಮನೆಯಲ್ಲಿದ್ದುಕೊಂಡೇ ಉದ್ಯೋಗ ಹಾಗೂ ಕೃಷಿ ಕಡೆಗೂ ಗಮನಹರಿಸುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಖಾಸಗಿ ಸಂಸ್ಥೆಯ ಉದ್ಯೋಗಿ ಗಗನ್‌ ಅಭಿಪ್ರಾಯ.

 

 

 

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್
January 30, 2026
10:42 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ
January 30, 2026
6:18 PM
by: ವಿಶೇಷ ಪ್ರತಿನಿಧಿ
ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ
January 30, 2026
6:04 PM
by: ದ ರೂರಲ್ ಮಿರರ್.ಕಾಂ
AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror