ಕಳೆದ ವರ್ಷ ಸ್ವಾತಂತ್ರೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು , ಮುಂದಿನ ದಿನಗಳಲ್ಲಿ ಪ್ರತೀ ಹಳ್ಳಿಗಳಿಗೂ ವೇಗದ ಇಂಟರ್ನೆಟ್ ತಲುಪಲಿದೆ ” ಎಂದಿದ್ದರು. ಇದೀಗ ವರ್ಷದಲ್ಲಿ ಹಳ್ಳಿಗಳಲ್ಲೂ ವೇಗದ ಇಂಟರ್ನೆಟ್ ಸದ್ದು ಮಾಡುತ್ತಿದೆ, ತೀರಾ ಕಾಡು ಪ್ರದೇಶದಲ್ಲೀ ಇಂಟರ್ನೆಟ್ ಲಭ್ಯವಿದೆ. ಇನ್ನೂ ಇಂಟರ್ನೆಟ್ ತಲುಪಬೇಕಾದ ಹಳ್ಳಿಗಳು ಇವೆ. ಅಂತಹ ಹಳ್ಳಿಯ ಕಡೆಗೂ ವೇಗದ ಇಂಟರ್ನೆಟ್ ಹರಿಯುವ ಪ್ರಯತ್ನವಂತೂ ನಡೆದಿದೆ.
ದೇಶದ ಪ್ರಧಾನಿಗಳು ಸ್ವಾತಂತ್ರ್ಯೋತ್ಸವ ದಿನ ಭಾಷಣದಲ್ಲಿ ಹಳ್ಳಿಗಳಿಗೂ ವೇಗದ ಇಂಟರ್ನೆಟ್ ಲಭ್ಯವಾಗಲಿದೆ ಎಂದಿದ್ದೇ ತಡ, ಅನೇಕರು ಇದು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಆದರೆ ಇದರ ಬೆನ್ನೆತ್ತಿದ ಗ್ರಾಮೀಣ ಭಾಗದ ಜನರಿಗೆ ಈಗ ವೇಗದ ಇಂಟರ್ನೆಟ್ ಲಭ್ಯವಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಿ ಎಸ್ ಎನ್ ಎಲ್ ಮೂಲಕ ವೇಗದ ಇಂಟರ್ನೆಟ್ ಲಭ್ಯವಾಗುತ್ತಿದೆ. ಒ ಎಫ್ ಸಿ ಕೇಬಲ್ ಮೂಲಕ ಬಿ ಎಸ್ ಎನ್ ಎಲ್ ಈ ಸೇವೆ ನೀಡುತ್ತದೆ. ಆದರೆ ಖಾಸಗಿ ಫ್ರಾಂಚೈಸಿ ಮೂಲಕ ಸಂಪರ್ಕ ನೀಡುತ್ತದೆ. ಇದಕ್ಕಾಗಿಯೇ ಹಲವಾರು ಪ್ರಾಂಚೈಸಿಗಳು ಈಗ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಬಿ ಎಸ್ ಎನ್ ಎಲ್ ಜೊತೆ ಒಪ್ಪಂದ ಮಾಡಿಕೊಂಡು ಪ್ರಾಂಚೈಸಿಗಳು ಗ್ರಾಮಗಳಲ್ಲಿ ಕೇಬಲ್ ಎಳೆದು ಮನೆ ಮನೆಗೆ ಸಂಪರ್ಕ ನೀಡುತ್ತಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಗ್ರಾಮೀಣ ಭಾಗಕ್ಕೂ ವೇಗದ ಇಂಟರ್ನೆಟ್ ಲಭ್ಯವಾಗಬೇಕು ಹಾಗೂ ಪ್ರಧಾನಿಗಳ ಭಾಷಣದ ಆಧಾರದಲ್ಲಿ ಬಿ ಎಸ್ ಎನ್ ಎಲ್ ಹಿರಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿದ ಸುಳ್ಯದ ಯುವಕರ ತಂಡಕ್ಕೆ ಯಶಸ್ಸು ಸಿಕ್ಕಿತ್ತು. ಅದಾದ ಬಳಿಕ ಒ ಎಫ್ ಸಿ ಮೂಲಕ ಮನೆ ಮನೆಗೆ ಇಂಟರ್ನೆಟ್ ತಲುಪಿಸಲು ಎಲ್ಲೆಡೆಯೂ ಪ್ರಾಂಚೈಸಿಗಳಿಗೆ ಅವಕಾಶ ನೀಡಲಾಯಿತು. ಹೀಗಾಗಿ ಈಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯಗಳಲ್ಲಿ ಹೆಚ್ಚಿನ ಸಂಪರ್ಕಗಳು ನಡೆಯುತ್ತಿದೆ. ಸುಳ್ಯ ತಾಲೂಕಿನಲ್ಲಿ ಹಲವು ಮಂದಿ ಬಿ ಎಸ್ ಎನ್ ಎಲ್ ಜೊತೆ ಒಪ್ಪಂದ ಮಾಡಿಕೊಂಡು ಪ್ರಾಂಚೈಸಿ ಮೂಲಕ ಕೇಬಲ್ ಎಳೆಯುವ ಕಾರ್ಯ ಮಾಡುತ್ತಿದ್ದಾರೆ.
ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ, ಬಾಳುಗೋಡುನಂತಹ ತೀರಾ ಗ್ರಾಮೀಣ ಭಾಗಗಳಲ್ಲೂ ಈಗ ಬಿ ಎಸ್ ಎನ್ ಎಲ್ ಕೇಬಲ್ ಕಾಣುತ್ತಿದೆ. ಮನೆ ಮನೆಗೆ ಇಂಟರ್ನೆಟ್ ಸಂಪರ್ಕ ಸಾಧ್ಯವಾಗುತ್ತಿದೆ.
ಇದೀಗ ಎಡಮಂಗಲ ಕಡೆಗೂ ಈಗ ಇಂಟರ್ನೆಟ್ ಸಂಪರ್ಕದ ವ್ಯವಸ್ಥೆಯಾಗುತ್ತಿದೆ. ಇಲ್ಲಿನ ಬಹುತೇಕ ಮನೆಗಳಿಗೆ ಇಂಟರ್ನೆಟ್ ಸೇವೆ ಲಭ್ಯವಾಗಬೇಕು ಎನ್ನುವುದು ಉದ್ದೇಶವಾಗಿದೆ, ದೇಶದ ಪ್ರಧಾನಿಗಳ ಕನಸು ಇದಾಗಿದ್ದು ಹಳ್ಳಿಗಳಲ್ಲೂ ವೇಗದ ಇಂಟರ್ನೆಟ್ ಇಂದು ಅಗತ್ಯವಾಗಿದೆ ಎಂದು ಹೇಳುತ್ತಾರೆ ಎಡಮಂಗಲ ಬಳಿಯ ಎಣ್ಮೂರಿನ ಶ್ರೀನಂದನ ಕೆ. ನಿಂತಿಕಲ್ಲಿನಿಂದ ಎಡಮಂಗಲದವರೆಗೆ ಪ್ರಾಂಚೈಸಿ ಮೂಲಕ ಕೇಬಲ್ ಎಳೆಯುತ್ತಿದ್ದು ಕೆಲವೇ ದಿನಗಳಲ್ಲಿ ಇಡೀ ಪ್ರದೇಶದಲ್ಲಿ ಇಂಟರೆ ನೆಟ್ ಲಭ್ಯವಾಗಲಿದೆ.
ಶ್ರೀನಂದನ್ ಕೆ ಅವರು ಎಣ್ಮೂರು ಗ್ರಾಮದಲ್ಲಿ ಇಂಟರ್ನೆಟ್ ಸಮಸ್ಯೆಯನ್ನು ಅರಿತು ಬಿ ಎಸ್ ಎನ್ ಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಫ್ರಾಂಚೈಸಿ ಮೂಲಕ ಗ್ರಾಮದ ಮೂಲೆಮೂಲೆಗೆ ಇಂಟರ್ನೆಟ್ ಬರಬೇಕೆನ್ನುವ ಇಚ್ಛೆಯಲ್ಲಿ ಕೇಬಲ್ ಎಳೆಸುವ ಮುಂದಾಳತ್ವ ಇಲ್ಲಿ ವಹಿಸಿಕೊಂಡಿದ್ದಾರೆ. ಈಗಾಗಲೇ ಕೇರ್ಪಡದಿಂದ ನರ್ಲಡ್ಕ, ಗುಂಡಿಮಜಲು ಹಾಗೂ ಗುತ್ತು ಕಡೆ ಕೇಬಲ್ ಎಳೆಯಲಾಗಿದೆ. ಇನ್ನೊಂದೆರಡು ದಿನದಲ್ಲಿ ಕರೀಂಬಿಲ, ಹೇಮಳ, ಪಡ್ಪಿನಂಗಡಿ ಕಡೆಗೂ ಕೇಬಲ್ ತಲುಪಲಿದೆ.
ಗ್ರಾಮೀಣ ಭಾಗದಲ್ಲಿ ವೇಗದ ಇಂಟರ್ನೆಟ್ ಲಭ್ಯವಾದರೆ , ವರ್ಕ್ ಫ್ರಂ ಮೂಲಕ ಕೆಲಸ ಮಾಡುವ ಅನೇಕರಿಗೆ ಪ್ರಯೋಜನವಾಗುತ್ತದೆ. ಯುವಕರು ಮನೆಯಲ್ಲಿದ್ದುಕೊಂಡೇ ಉದ್ಯೋಗ ಹಾಗೂ ಕೃಷಿ ಕಡೆಗೂ ಗಮನಹರಿಸುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಖಾಸಗಿ ಸಂಸ್ಥೆಯ ಉದ್ಯೋಗಿ ಗಗನ್ ಅಭಿಪ್ರಾಯ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…