ದೇಹದಲ್ಲಿ(Body) ವಿಟಾಮಿನ್ ಸಿ(Vitamin C) ಕೊರತೆ ಉಂಟಾದಾಗ “ನೆಲ್ಲಿ ಕಾಯಿ(Amla) ತಿನ್ನಿ ಸಮಸ್ಯೆ ಸರಿಹೋಗುತ್ತದೆ” ಎಂದು ವೈದ್ಯರು(Doctor) ಸಲಹೆ ನೀಡುತ್ತಾರೆ. ಆದರೆ, ಮಲೆನಾಡಿನ ಬೆಟ್ಟ, ಗುಡ್ಡಗಳಲ್ಲಿ ನೆಲ್ಲಿಕಾಯಿ ಹುಡುಕಿ ಹೊರಟರೆ ಗಿಡ ಮಾತ್ರ ಕಾಣಸಿಗುತ್ತಿದೆ..ಕಾಯಿಗಳೇ ಇಲ್ಲ !
ಇಂಥದ್ದೊಂದು ಕರಾಳ ವಿದ್ಯಮಾನ ಮಲೆನಾಡಿನಲ್ಲಿ ಸಂಭವಿಸುತ್ತಿದೆ. ಕಳೆದ ನಾಲೈು ವರ್ಷಗಳಿಂದ ಬೆಟ್ಟದ ನೆಲ್ಲಿ ಗಿಡಗಳು ಬಂಜೆಯಾಗಿ ನಿಂತಿವೆ. ಡಿಸೆಂಬರ್ ಚಳಿಗೆ ಕೆಲ ಗಿಡಗಗಳಲ್ಲಿ ನೆಲ್ಲಿ ಹೂವು ಅರಳುತ್ತಿದ್ದರೂ ಕಾಯಿಯೇ ಕಟ್ಟಿಕೊಳ್ಳುತ್ತಿಲ್ಲ. ಕಳೆದ ಎರಡು ವರ್ಷಗಳ ಈಚೆಯಂತೂ ಶೇ.80 ರಷ್ಟು ಗಿಡಗಳಲ್ಲಿ ಹೂವು ಬಿಡುತ್ತಿಲ್ಲ. ನೆಲ್ಲಿಕಾಯಿ ಆಸೆಯಿಂದ ಬೆಟ್ಟದ ತುತ್ತ ತುದಿಗೆ ಏರಿದರೂ ಎಲೆ ಉದುರಿಸಿ ಬೇತಾಳ ಸದೃಷ ನಿಂತ ನೆಲ್ಲಿ ಮರಗಳೇ ಕಾಣಿಸುತ್ತಿವೆ. ಬೆಟ್ಟದ ತುಂಬೆಲ್ಲ ನೂರಾರು ನೆಲ್ಲಿ ಗಿಡಗಳಿದ್ದರೂ ನಾಲೈದು ಗಿಡಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ಕಾಯಿಗಳು ಸಿಗುತ್ತಿವೆ.
ದಶಕದ ನೆನಪು: ನೆಲ್ಲಿಕಾಯಿ ಅಂದ ತಕ್ಷಣ ಇಂದಿನ ಮಧ್ಯ ಶಾಲೆ ಬಿಟ್ಟ ತಕ್ಷಣ ಬೆಟ್ಟ ಗುಡ್ಡ ಓಡಾಡಿ ನೆಲ್ಲಿ ಮರಗಳನ್ನು ಹತ್ತಿ ಕಾಯಿ ಕೊಯ್ಯುತ್ತಿದ್ದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಅಂದಿನ ದಿನಗಳಲ್ಲಿ ಪ್ರತಿ ಗಿಡಗಳಲ್ಲಿಯೂ ಭರ್ಜರಿ ನೆಲ್ಲಿಕಾಯಿ ಬಿಡುತ್ತಿತ್ತು ಮರವೇರಿ ಕಾಯಿ ಕೊಯ್ದು ಮನೆಗೆ ತಂದು ಅದನ್ನು ಉಪ್ಪು ನೀರಿನಲ್ಲಿ ನೆನೆಸಿಡುತ್ತಿದ್ದೆವು. ಇನ್ನು ಕೆಲವರು ನೆಲ್ಲಿಕಾಯಿಯ ಚಟ್ಟಿ ಮಾಡಿದರೆ ಇನ್ನು ಕೆಲವರದು ನೆಲ್ಲಿಕಾಯಿ ಒಣಗಿಸಿ ಅದಕ್ಕೆ ಉಪ್ಪು ಖಾರ ಹಾಕಿ ತಿನ್ನುತ್ತಿದ್ದರು. “ಅಂದು ಬಿಡುತ್ತಿದ್ದ ಶೇ.10ರಷ್ಟು ಇಂದು ನೆಲ್ಲಿಗಿಡಗಳು ಕಾಯಿ ಬಿಡುತ್ತಿಲ್ಲ” ಎಂದು ನೆನಪು ಮಾಡಿಕೊಳ್ಳುತ್ತಾರೆ ರೈತ ಸುಬ್ರಾಯ ಗೌಡ. ಪರಿಸರ ಹೋರಾಟಗಾರ ಅನಂತ ಆಶೀಸರ ದಶಕದ ಹಿಂದೆ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿದ್ದ ವೇಳೆ ಬೆಟ್ಟದ ನೆಲ್ಲಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಬೆಟ್ಟದ ನೆಲ್ಲಿಯ ಸಂರಕ್ಷಣೆಯ ದೃಷ್ಟಿಯಿಂದ ನಲ್ಲಿ ಗಿಡಗಳನ್ನು ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಬೆಟ್ಟಗಳಲ್ಲಿಯೇ ನೆಡುವ ಯೋಜನೆ ಹಾಕಿಕೊಂಡಿದ್ದರು. ಅರಣ್ಯ ಇಲಾಖೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ನೆಲ್ಲಿ ಇಲ್ಲಿ ಈಗಲೂ ನೆಡುತ್ತಿದೆ. ಆದರೆ, ಇನ್ನೊಂದೆಡೆ ಈ ನೈಸರ್ಗಿಕವಾಗಿ ಬೀಜೋತ್ಪಾದನೆ ಮಾಡಿ. ತನ್ನ ಸಂತತಿಯನ್ನು ತಾನೇ ಬೆಳೆಸಿಕೊಳ್ಳುವ ಶಕ್ತಿ ಮಲೆನಾಡಿನ ನೆಲ್ಲಿ ಗಿಡಗಳಿಗೆ ಕಡಿಮೆಯಾಗತೊಡಗಿದೆ.
ನೆಲ್ಲಿಗಿಡಗಳಲ್ಲಿ ಕಾಯಿ ಬರದಿರುವುದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಗಮನಕ್ಕೂ ಬಂದಿದೆ. ತಮ್ಮ ಕದಂಬ ಸಂಸ್ಥೆ ಮೂಲಕ ಇಂಗ್ಲಿಷ್ ಔಷಧಗಳಿಗೆ ಪರ್ಯಾಯವಾಗಿ, ನ್ಯಾನೋ ತಂತ್ರಜ್ಞಾನದ ಮೂಲಕ ಸಸ್ಯದ ಔಷಧಿ ತಯಾರಿಸುವ ಕಾರ್ಯವನ್ನು ಕದಂಬ ಸಂಸ್ಥೆ ದಶಕದಿಂದ ನಡೆಸಿಕೊಂಡು ಬಂದಿದೆ. ಔಷಧಿಯ ಗುಣಗಳ ಆಗರವಾಗಿರುವ ನೆಲ್ಲಿಕಾಯಿ ನಿಗದಿತ ಪ್ರಮಾಣದಲ್ಲಿ ಲಭ್ಯವಾಗದಿದ್ದಾಗ ಮಲೆನಾಡಿನ ಬೆಟ್ಟದ ಗಿಡಗಳಲ್ಲಿ ಕಾಯಿಯೇ ಬಿಡದಿರುವುದು ಅವರ ಗಮನಕ್ಕೆ ಬಂದಿದೆ. ಈ ವೈರುದ್ಯಕ್ಕೆ ಕಾರಣ ಏನು? ಎಂದು ಹುಡುಕ ಹೊರಟ ಅನಂತಕುಮಾರ ಹೆಗಡೆ ಮತ್ತು ಕದಂಬ ಸಂಸ್ಥೆ ಹಲವು ವಿಜ್ಞಾನಿಗಳು, ಪರಿಸರ ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ. ಈ ಸ್ಥಿತಿ ಹೋಗಲಾಡಿಸಲು ಏನು ಪರ್ಯಾಯ ಮಾರ್ಗ ಎಂಬುದನ್ನೂ ಚರ್ಚಿಸಿದ್ದಾರೆ. ಆದರೆ, ಇದಾವುದಕ್ಕೂ ವಿಜ್ಞಾನದಿಂದ ಸ್ಪಷ್ಟ ಉತ್ತರ ಬಂದಿಲ್ಲ. ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ನೆಲ್ಲಿ ಗಿಡಗಳ ಮೇಲೂ ಆಗಿರಬಹುದು ಎಂಬ ಊಹೆ ಎಲ್ಲರದ್ದು. ಒಟ್ಟಿನಲ್ಲಿ ಮಲೆನಾಡ ನೆಲ್ಲಿಗಿಡಗಳ ಬಂಜೆತನ ಹಲವು ಏರುಪೇರು ಸೃಷ್ಟಿಸುತ್ತಿದೆ.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…