ಹೆಚ್ಚುತ್ತಿದೆ ಜಾಗತಿಕ ತಾಪಮಾನ | ಕರಗುತ್ತಿದೆ ದೇಶದ ತಡೆಗೋಡೆ ಹಿಮಾಲಯದ ಹಿಮ ಸರೋವರಗಳು | ಭಾರತಕ್ಕೆ ಅಪಾಯ ಇದೆಯೇ…? | ಚಿತ್ರ ಸೆರೆ ಹಿಡಿದ ಇಸ್ರೋ

April 23, 2024
12:57 PM

ಹಿಮಾಲಯ(Himalaya) ಪರ್ವತ ಭಾರತ(India) ದೇಶಕ್ಕೆ ರಕ್ಷಣಾ ಕವಚ ಇದ್ದಂತೆ. ಪ್ರಾಕೃತಿಕವಾಗಿ ಸೌಂದರ್ಯದ ಗಣಿ. ಹಾಗೂ ನಮ್ಮ ಭೌಗೋಳಿಕವಾಗಿಯೂ ಇದು ಅತ್ಯಂತ ಉಪಯುಕ್ತ. ಆದರೆ ಹಿಮಾಲಯ ವರ್ಷ ಕಳೆದಂತೆ ತನ್ನತನವನ್ನು ಕಳೆದುಕೊಳ್ಳುತ್ತಿದೆ.  ಜಾಗತಿಕ ತಾಪಮಾನದ(Global warming) ಹಿನ್ನೆಲೆಯಿಂದ ಹಿಮಪಾತ, ಪ್ರವಾಹದಂತ ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾಗಿದೆ. ಇದೀಗ ಉತ್ತರಾಖಂಡದ(Uttar Khand) ಪಿಥೋರ್​ಗಢ ಜಿಲ್ಲೆಯಲ್ಲಿ ಹಿಮನದಿಯೊಂದು ಕರಗುತ್ತಿರುವ(Snow melting) ಘಟನೆ ನಡೆದ ಕೆಲವೇ ದಿನಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಿಮಾಲಯದಲ್ಲಿನ ಹಿಮನದಿಗಳು ಕ್ಷೀಣಿಸುತ್ತಿರುವ ಚಿತ್ರವೊಂದನ್ನು ಸೆರೆಹಿಡಿದಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದೆ.

Advertisement

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ದಶಕಗಳ ಉಪಗ್ರಹ ಚಿತ್ರಗಳನ್ನು ತಾಳೆ ಹಾಕಿ ನೋಡಲಾಗಿದ್ದು, ಹಿಮಾಲಯದಾದ್ಯಂತ ಹಿಮನದಿಗಳು ವ್ಯಾಪಕವಾಗಿ ಕರಗುತ್ತಿವೆ. ಹಿಮನದಿಗಳು ಮತ್ತು ಹಿಮದ ಹೊದಿಕೆಯಿಂದಾಗಿ ಮೂರನೇ ಧ್ರುವ ಎಂದು ಕರೆಯಲ್ಪಡುವ ಪ್ರದೇಶವು ಕಂಡು ಕೇಳರಿಯದಷ್ಟು ವೇಗದಲ್ಲಿ ಕರಗುತ್ತಿವೆ. ಇದು ಮುಂದಿನ ದಿನಗಳಲ್ಲಿ ಭಾರೀ ಅನಾಹುತಗಳನ್ನು ತಂದೊಡ್ಡಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಹಿಮ ಸರೋವರಗಳು ಗಮನಾರ್ಹ ಕುಸಿತ ಕಾಣುತ್ತಿರುವ ಉಪಗ್ರಹ ಚಿತ್ರಣವು ವಿಶೇಷವಾಗಿ, ಭಾರತಕ್ಕೆ ಹೆಚ್ಚು ಅಪಾಯ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಸಂಗ್ರಹಿಸಿದ ಉಪಗ್ರಹ ಮಾಹಿತಿ ಆಧಾರದ ಮೇಲೆ ಹಿಮನದಿಯಲ್ಲಿ ಸಂಭವಿಸುತ್ತಿರುವ ಬದಲಾವಣೆಗಳ ಬಗ್ಗೆ ಅಮೂಲ್ಯ ಮಾಹಿತಿ ನೀಡಿದೆ.

ಹಿಗ್ಗುತ್ತಿರುವ ಸರೋವರಗಳ ವ್ಯಾಪ್ತಿ: 1984 ರಿಂದ 2023 ರವರೆಗಿನ ಭಾರತೀಯ ಹಿಮಾಲಯ ನದಿ ಜಲಾನಯನ ಪ್ರದೇಶಗಳನ್ನು ಒಳಗೊಂಡ ಉಪಗ್ರಹ ಚಿತ್ರಗಳು ಹಿಮ ಸರೋವರಗಳಲ್ಲಿ ಆದ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತದೆ. 2016-17ರಲ್ಲಿ 2,341 ಸರೋವರಗಳಲ್ಲಿ 10 ಹೆಕ್ಟೇರ್‌ನಷ್ಟು ಹಿಗ್ಗಿದ್ದು ಕಂಡು ಬಂದಿತ್ತು. 1984 ರಿಂದ ಈವರೆಗೂ 676 ಹಿಮ ಸರೋವರಗಳು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲ್ಪಟ್ಟಿವೆ ಎಂದು ಪತ್ತೆ ಮಾಡಲಾಗಿದೆ.

ಭಾರತದ ವ್ಯಾಪ್ತಿಯಲ್ಲಿ ಬರುವ ಹಿಮ ಸರೋವರಗಳೂ ಕರಗುತ್ತಿವೆ. ಇದು ಮುಂದಿನ ಅಪಾಯದ ಮುನ್ಸೂಚನೆಯಾಗಿದೆ. 132 ಸರೋವರಗಳು ಭಾರತದೊಳಗೆ ಹರಿಯುತ್ತವೆ. ಇದರಲ್ಲಿ ಸಿಂಧೂ(67), ಗಂಗಾ (7) ಮತ್ತು ಬ್ರಹ್ಮಪುತ್ರ ನದಿಯ (58) ಜಲಾನಯನ ಪ್ರದೇಶದಲ್ಲಿ ಬರುತ್ತವೆ. ಇವುಗಳು ಹವಾಮಾನ ಬದಲಾವಣೆ, ತಾಪಮಾನ ಮತ್ತು ಭೌತಿಕ, ಸಾಮಾಜಿಕ ಕಾರಣಗಳಿಂದ ಕರಗಲು ಆರಂಭಿಸಿವೆ. ಹದಿನೆಂಟನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯ ಆರಂಭದಿಂದಲೂ ಜಗತ್ತಿನಾದ್ಯಂತ ಹಿಮನದಿಗಳು ವಿಸ್ತರಿಸುತ್ತಿರುವ ಬಗ್ಗೆ ವಿಶ್ವಾದ್ಯಂತ ನಡೆಸಲಾದ ಸಂಶೋಧನೆಯು ದೃಢಪಡಿಸಿದೆ.

ಹಿಮ ರಾಶಿಯ ಪ್ರವಾಹಈ ವಿದ್ಯಮಾನದಿಂದ ಹಿಮಾಲಯ ಪ್ರದೇಶದಲ್ಲಿ ಹೊಸ ಸರೋವರಗಳ ರಚನೆ ಮತ್ತು ಅಸ್ತಿತ್ವದಲ್ಲಿರುವ ಸರೋವರಗಳ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ. ಹಿಮನದಿಗಳ ಕರಗುವಿಕೆಯಿಂದ ಸೃಷ್ಟಿಯಾದ ಈ ಜಲರಾಶಿಗಳನ್ನು ಹಿಮ ಸರೋವರಗಳು(ಗ್ಲೇಶಿಯಲ್ ಸರೋವರಗಳು) ಎಂದು ಕರೆಯಲಾಗುತ್ತದೆ. ಹಿಮ ನದಿಗಳಿಗೆ ನೀರಿನ ಮೂಲಗಳಾಗಿರುವ ಇವುಗಳು, ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್ ಫ್ಲಡ್ಸ್ (GLOFs) ಸೃಷ್ಟಿಸಿ ಅಪಾಯ ತಂದಿಟ್ಟ ಉದಾಹರಣೆಗಳೂ ಇವೆ.

ಮಂಜುಗಡ್ಡೆ ಪರ್ವತಗಳು ನೈಸರ್ಗಿಕ ಪ್ರಭಾವದಿಂದ ಹೆಚ್ಚಿನ ಪ್ರಮಾಣದಲ್ಲಿ ಕರಗಿ ಸರೋವರಗಳಾಗಿ ಹರಿಯುವುದರಿಂದ ಪ್ರವಾಹ ಸಂಭವಿಸುತ್ತವೆ. ಇದು ಹಿಮಾಲಯದ ಕೆಳಭಾಗದಲ್ಲಿರುವ ಪ್ರದೇಶಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಇಸ್ರೋ ಹೇಳಿದೆ. ಅತಿಯಾದ ಶೀತ, ಎತ್ತರ ಮತ್ತು ಕಠಿಣ ಪ್ರದೇಶವಾದ ಕಾರಣ, ಹಿಮಾಲಯದಲ್ಲಿ ಸರೋವರಗಳ ರಚನೆ ಮತ್ತು ಅವುಗಳ ಸ್ಥಿತಿಗತಿಗಳನ್ನು ತಿಳಿಯುವುದು, ಅಧ್ಯಯನ ಮಾಡುವುದು ಸವಾಲಿನ ಸಂಗತಿಯಾಗಿದೆ. ಸ್ಯಾಟಲೈಟ್ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವು ಸರೋವರಗಳ ಮೇಲ್ವಿಚಾರಣೆಗೆ ಅತ್ಯುತ್ತಮ ಸಾಧನವಾಗಿದೆ. ಈ ಸಾಧನದಿಂದಾಗಿಯೇ ಹಿಮದ ಮಡಿಲಿನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

314 ಸರೋವರಗಳು 4,000 ರಿಂದ 5,000 ಮೀ ವ್ಯಾಪ್ತಿಯಷ್ಟು ವಿಸ್ತರಿಸಿವೆ. 296 ಸರೋವರಗಳು 5,000 ಮೀ ಎತ್ತರದಲ್ಲಿವೆ. ಗ್ಲೇಶಿಯಲ್ ಸರೋವರಗಳನ್ನು ಅವುಗಳ ರಚನೆಯ ಪ್ರಕ್ರಿಯೆಯ ಆಧಾರದ ಮೇಲೆ ನಾಲ್ಕು ವರ್ಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ ಮೊರೈನ್-ಡ್ಯಾಮ್ಡ್ (ಮೊರೇನ್ ಅಣೆಕಟ್ಟು ನೀರು), ಐಸ್-ಡ್ಯಾಮ್ಡ್ (ಐಸ್​​ನಿಂದ ಕೂಡಿದ ನೀರು), ಸವೆತ (ಕರಗಿದ ನೀರಿನಿಂದ ಆದ ಸರೋವರ) ಮತ್ತು ಇತರ ಗ್ಲೇಶಿಯಲ್​ಗಳು. ಹಿಮ ಸರೋವರಗಳ ಕರಗುವಿಕೆಯ ಪ್ರಮಾಣವು ವರ್ಷಕ್ಕೆ ಸುಮಾರು 1.96 ಹೆಕ್ಟೇರ್ ಆಗಿದೆ.

Source : ISRO ಹಾಗೂ ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group