ಗೂನಡ್ಕದ ಮೀಸಲು ಅರಣ್ಯದಲ್ಲಿ ಅರಣ್ಯ ಒತ್ತುವರಿ ಮೂಲಕ ಮಸೀದಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವು ಮಾಡಬೇಕೆಂಬ ನ್ಯಾಯಾಲಯದ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮೆರವಣಿಗೆ ಹಾಗೂ ಸುಳ್ಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಗೂ ಮುನ್ನ ಹಿಂಜಾವೇ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ನಂತರ ಅರಣ್ಯ ಇಲಾಖಾಯಲ್ಲಿ ಪ್ರತಭಟನಾ ಸಭೆ ನಡೆಸಿದರು. 2018 ರಲ್ಲಿ ಗೂನಡ್ಕ ರಕ್ಷಿತಾರಣ್ಯದಲ್ಲಿರುವ ಮಸೀದಿ ಕಟ್ಟಡ ತೆರವಿಗೆ ಆದೇಶವಾದರೂ ಇದುವರೆಗೂ ಅರಣ್ಯ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಇದೀಗ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆಯಾಗಿದೆ, ಇದಕ್ಕೆ ಕಾರಣ ಅರಣ್ಯ ಇಲಾಖೆ. ಇಲಾಖಾ ಅಧಿಕಾರಿಗಳು ಸೂಕ್ತ ದಾಖಲೆ ನೀಡದೇ ಇದ್ದುದು ಕಾರಣ ಎಂದು ಆರೋಪಿಸಿದರು. ಇದೀಗ ತಕ್ಷಣವೇ ಸೂಕ್ತ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಸುಳ್ಯದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ pic.twitter.com/xEBVJzidtV
— theruralmirror (@ruralmirror) April 11, 2022
Advertisement
ಸಭೆಯಲ್ಲಿ ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ, ಭಜರಂಗದಳ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಮಾತೃಸುರಕ್ಷಾ ಮಂಡಳಿ ಸಂಚಾಲಕ ಗಣಪತಿ ಭಟ್ ಕೆದಿಲ, ತಾಲೂಕು ಸಂಚಾಲಕ ಮಹೇಶ್ ಉಗ್ರಾಣಿಮನೆ, ಹಿಂಜಾವೇ ಪ್ರಮುಖರಾದ ಅಜಿತ್ ರೈ ಹೊಸಮನೆ, ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ ಜಗದೀಶ್, ಲತೀಶ್ ಗುಂಡ್ಯ, ನಿಕೇತ್ ಉಬರಡ್ಕ ಮೊದಲಾದವರಿದ್ದರು.