ಹಿಂದೂ ಜನಜಾಗೃತಿ ಸಮಿತಿಯು ದ್ವಿದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪುತ್ತೂರಿನ ಟೌನ್ ಬ್ಯಾಂಕ್ ಹಾಲ್ ನಲ್ಲಿ “ಹಲಾಲ್ ವ್ಯಾಖ್ಯಾನ” ದ ಆಯೋಜನೆಯನ್ನು ಅಭಿನವ ಭಾರತ ಮಿತ್ರ ಮಂಡಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖ ವಕ್ತಾರರಾಗಿ ಧಾರ್ಮಿಕ ಉಪನ್ಯಾಸಕರಾದ ಕೃಷ್ಣ ಉಪಾಧ್ಯಾಯ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಮತ್ತು ಹಿಂದೂ ಜನಜಾಗೃತಿಯ ರಾಜ್ಯ ಸಮನ್ವಯಕಾರದ ಗುರುಪ್ರಸಾದ್ ಗೌಡ ಉಪಸ್ಥಿತರಿದ್ದರು.
ಧಾರ್ಮಿಕ ಭಾಷಣ ಮಾಡಿದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ, ‘ಹಲಾಲ್’ ಕೇವಲ ಧರ್ಮಕ್ಕೆ ಸಂಬಂಧಿಸದೆ ಇಂದು ಇಸ್ಲಾಮಿ ಆರ್ಥಿಕ ವ್ಯವಸ್ಥೆಯಾಗುತ್ತಿದೆ. ಹಲಾಲ್ ಮೂಲಕ ವಿಶ್ವದ ಮೇಲೆ ಸಂಪೂರ್ಣ ನಿಯಂತ್ರಣ ಮಾಡುವ ಪ್ರಯತ್ನವಾಗಿದೆ. ಭಾರತದಲ್ಲಿ ಪರ್ಯಾಯ ಸಮಾನಾಂತರ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವುದಾಗಿದೆ. ಮಾಂಸದಿಂದ ಪ್ರಾರಂಭವಾದ ಹಲಾಲ್ ಇಂದು ಔಷಧಿ, ಕಟ್ಟಡ, ಬಟ್ಟೆ, ಪ್ರವಾಸೊದ್ಯಮ, ಸ್ಟಾಕ್ ಮಾರ್ಕೆಟ್, ಹೀಗೆ ಎಲ್ಲ ಕ್ಷೇತ್ರವನ್ನು ವ್ಯಾಪಿಸಿ ವಿಶ್ವದ 2 ಯುಎಸ್ ಟ್ರಿಲಿಯನ್ ಡಾಲರ್ ಇಕಾನಮಿ ಆಗಿದೆ. ಭಾರತದಲ್ಲಿ 4 ಲಕ್ಷ ಕೋಟಿ ಮಾಂಸದ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ಭಾರತದಲ್ಲಿ FSSAI, FDA ನಂತರ ಪ್ರಮಾಣಪತ್ರ ನೀಡುವ ಸರಕಾರಿ ಸಂಸ್ಥೆಗಳು ಇರುವಾಗ ಪ್ರತ್ಯೇಕ ಮತದ ಆಧಾರದ ಮೇಲೆ ಪ್ರಮಾಣಪತ್ರ ನೀಡಿ, ಹಣ ಸಂಗ್ರಹ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ.ಇದರ ಹಣ ಭಯೋತ್ಪಾಧನಾ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿದೆ. ಇದು ಹಿಂದೂಗಳ ಮೇಲೆ ಮಾಡಿದ ಜಿಜಿಯಾ ತಲೆದಂಡವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಉಪಾಧ್ಯಾಯ, ಧಾರ್ಮಿಕ ಉಪನ್ಯಾಸಕ ನೀಡಿ ಕೆಲವು ಕಾರ್ಯಕ್ರಮದಲ್ಲಿ ಹಿಂದೂ ಭಾಂದವರು ಹಿಂದೂಗಳ ಅಂಗಡಿಯಿಂದ ವ್ಯಾಪಾರ ಮಾಡಬೇಕು ಎಂದು ಹೇಳುತ್ತಾರೆ ಆದರೆ ಹಿಂದೂಗಳ ಅಂಗಡಿಯಲ್ಲಿ ಹಲಾಲ್ ವಸ್ತುಗಳು ಸಿಗುತ್ತವೆ. ಹಾಗಾಗಿ ನಾವು ಹಿಂದೂಗಳು ಹಿಂದೂಗಳಿಗಾಗಿ ವ್ಯಾಪಾರದಲ್ಲಿ “ಹಲಾಲ್” ರಹಿತ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ಪರ್ಯಾಯ ವ್ಯವಸ್ತೆಯನ್ನು ಮಾಡಿ ಹಲಾಲ್ ಅರ್ಥವ್ಯವಸ್ಥೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಹೇಳಿದರು.
ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಮಾತನಾಡುತ್ತಾ ಈ ಸಲದ ದೀಪಾವಳಿಯನ್ನು ಹಲಾಲ್ ಮುಕ್ತವಾಗಿ ಆಚರಿಸೋಣ ಮತ್ತು ಇಡೀ ವಿಶ್ವದಲ್ಲಿ ಹಲಾಲ್ ಅರ್ಥವ್ಯವಸ್ಥೆಯನ್ನು ಬಹಿಷ್ಕರಿಸೋಣ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ನಗರ ಸಭೆ ಅದ್ಯಕ್ಷರಾದ ರಾಜೇಶ್ ಬನ್ನೂರು, ಟೌನ್ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರ್ ಬಪ್ಪಳಿಗೆ, ನಗರಸಭಾ ಅದ್ಯಕ್ಷರಾದ ಜೀವಂದರ್ ಜೈನ್, ಅಂಬಿಕಾ ಕಾಲೇಜು ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ,ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಪ್ರಮುಖರಾದ ಚಿನ್ಮಯ , ಪುತ್ತಿಲ ಹಿಂದೂ ಮುಖಂಡರಾದ ಅರುಣ್ ಕುಮಾರ್, ನಗರ ಸಭೆಯ ಉಪಾಧ್ಯಕ್ಷರಾದ ವಿದ್ಯಾಗೌರಿ ಪುತ್ತೂರು ಮತ್ತಿತರ ಗಣ್ಯರು ಭಾಗಿಯಾಗಿದ್ದರು.