ರಾಜ್ಯದಲ್ಲಿ ಮದರಸಾ ನಿಷೇಧಿಸುವಂತೆ ಮನವಿ | ವಿವಿಧ ಹಿಂದೂಪರ ಸಂಘಟನೆಗಳಿಂದ ಶಿಕ್ಷಣ ಇಲಾಖೆಗೆ ಮನವಿ |

September 25, 2022
1:19 PM

ರಾಜ್ಯದಲ್ಲಿಯೂ ಮದರಸಾ (Madrasa) ನಿಷೇಧಿಸುವಂತೆ ವಿವಿಧ ಹಿಂದೂಪರ ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿ ಮಾಡಿವೆ. ಗಣಿತ ಇತಿಹಾಸ ಭಾಷೆಗಳ ಪರಿಚಯವೇ ಮದರಸಾಗಳಲ್ಲಿ ಮಾಡುವುದಿಲ್ಲ. ಇಲ್ಲಿ ಕೇವಲ ಧರ್ಮ ಬೋಧನೆ ಇರುತ್ತದೆ. ಹೀಗಾಗಿ ಇಂತಹ ಶಿಕ್ಷಣ ಅಗತ್ಯ ಇರುವುದಿಲ್ಲ ಎನ್ನುವುದು  ಅರ್ಜಿದಾರರ ಬೇಡಿಕೆ.  ಇದೀಗ ಈ ಮನವಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಮದರಸಗಳು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆ. ಹೀಗಾಗಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಮಾಡಿದಂತೆ ಕರ್ನಾಟಕದಲ್ಲೂ ಮದರಸಗಳನ್ನು ಬ್ಯಾನ್ ಮಾಡಿ ಅಲ್ಲಿ ಓದುತ್ತಿರುವ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮಾಡಬೇಕು ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ. ಮದರಸಾ ಶಿಕ್ಷಕರಿಗೆ ಯಾವುದೇ ಪಾಠ ಬೋಧನೆಗೆ ಅರ್ಹತೆ ಇರುವುದಿಲ್ಲ. ಮಕ್ಕಳಿಗೆ ಗಣಿತ ಇತಿಹಾಸ ಭಾಷೆಗಳ ಪರಿಚಯವೇ ಮದರಸಾಗಳಲ್ಲಿ ಮಾಡುವುದಿಲ್ಲ. ಹೀಗಾಗಿ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಸಾಧ್ಯತೆ ಇರುವುದರಿಂದ ಮದರಸಾಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.

ಗ್ರಾಮೀಣ ಭಾಗದಿಂದ ತೊಡಗಿ ಎಲ್ಲೆಡೆಯೂ ಮದರಸಾಗಳು ಕಾರ್ಯನಿರ್ವಹಿಸುತ್ತವೆ. ಮದರಸಾಗಳಿಗಾಗಿಯೇ ವಿವಿಧ ಸೌಲಭ್ಯಗಳು ಇದ್ದು ಅಲ್ಲಿನ ಶಿಕ್ಷಣ ವ್ಯವಸ್ಥೆಯಾಗಿಯೇ ಪ್ರತ್ಯೇಕ ವಿಭಾಗವೂ ಇದೆ. ಹೀಗಾಗಿ ಇದೀಗ ಹಿಂದೂ ಸಂಘಟನೆಗಳು ನೀಡಿರುವ ಮನವಿ ಇನ್ನೊಂದು ಚರ್ಚೆಗೆ ಕಾರಣವಾಗಿದೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣ |
March 16, 2025
11:20 AM
by: ಸಾಯಿಶೇಖರ್ ಕರಿಕಳ
ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ
March 16, 2025
7:53 AM
by: The Rural Mirror ಸುದ್ದಿಜಾಲ
ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ
March 16, 2025
7:36 AM
by: The Rural Mirror ಸುದ್ದಿಜಾಲ
ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
March 16, 2025
7:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror