ಇನ್ನೇನು ಜೀವನ ಮುಗಿದೇ ಹೋಯ್ತು.. ಬದುಕುವುದೇ ಕಷ್ಟ.. ಸಾವು ಒಂದೇ ದಾರಿ ಎಂದು ನಿರ್ಧರಿಸಿದ್ದಾಗ ಕೈ ಹಿಡಿದವನು ಶ್ರೀ ಕೃಷ್ಣ ಪರಮಾತ್ಮ. ಇದು ಯಾವುದೇ ಪುರಾಣ ಕಥೆಯೂ ಅಲ್ಲ. ಅಥವಾ ನಮ್ಮ ದೇಶದ ಹಿಂದೂ ಒಬ್ಬರ ಕಥೆಯೂ ಅಲ್ಲ. ಪಾಕಿಸ್ತಾನದ ಖ್ಯಾತ ಸೋಶಿಯಲ್ ಮೀಡಿಯಾ #socialmedia ಸ್ಟಾರ್ ಮತ್ತು ನಟ ಶಯಾನ್ ಅಲಿ ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಿಜ ಬದುಕಿನ ನೈಜ ಘಟನೆ.ಇದನ್ನು ಘರ್ ವಾಪ್ಸಿ ಎಂದು ಶಯಾನ್ ಆಲಿ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರವಾಗುವ ನಿರ್ಧಾರದ ಬಗ್ಗೆ ಮಾತನಾಡಿರುವ ಶಯಾನ್ ಅಲಿ ‘ಪಾಕಿಸ್ತಾನದ ಗುಪ್ತಚರ ಇಲಾಖೆಯ ಚಿತ್ರ ಹಿಂಸೆಯಿಂದಾಗಿ ನಾನು 2019 ರಲ್ಲಿ ಪಾಕಿಸ್ತಾನವನ್ನು ತೊರೆಯಬೇಕಾಯಿತು. ಆ ಸಮಯದಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ, ಸಾಯುವ ಹಂತಕ್ಕೂ ತಲುಪಿದ್ದೆ. ಆದರೆ ಆಗ ನನ್ನ ಕೈ ಹಿಡಿದಿದ್ದು ಭಗವಾನ್ ಶ್ರೀ ‘ಕೃಷ್ಣ’ ಎಂದು ಹೇಳಿದ್ದಾರೆ.
One of the most beautiful thing anyone can do is “Ghar Wapsi” 🌹
It feels so good to be connected with your roots once again 🙏
AdvertisementFull Ghar Wapsi Video:https://t.co/u9qnXwHT8O pic.twitter.com/DJj0NT3VMh
— Shayan Ali (@ShayaanAlii) June 16, 2023
Advertisement
ತನ್ನ ಮತಾಂತರವನ್ನು ಘರ್ ವಾಪ್ಸಿ ಎಂದು ಕರೆದಿರುವ ಶಯಾನ್ಅಲಿ, ನಾನು ಶೀಘ್ರದಲ್ಲೇ ನನ್ನ ತಾಯಿನಾಡು ಭಾರತಕ್ಕೆ ಭೇಟಿ ನೀಡುತ್ತೇನೆ, ಅಲ್ಲಿ ನನ್ನ ಅಜ್ಜಿ ಮತ್ತು ನನ್ನ ಎಲ್ಲಾ ಪೂರ್ವಜರು ಜನಿಸಿದ್ದಾರೆ. ಭಾರತದ ಮಣ್ಣು ಮತ್ತು ಜನರ ಜೊತೆ ನನ್ನನ್ನು ವಿಲೀನಗೊಳಿಸುತ್ತೇನೆ. ಏಕೆಂದರೆ ಅದು ನನ್ನ ಮನೆ ಎಂದು ಹೇಳಿದ್ದಾರೆ.
‘ಸನತ್ ಆಗಿರುವ ನಾನು ಬೇರೆ ಯಾವುದೇ ಧರ್ಮದ ಬಗ್ಗೆ ದ್ವೇಷವನ್ನು ಹೊಂದುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ನಿಮ್ಮ ನಂಬಿಕೆಗಳನ್ನು ಗೌರವಿಸುತ್ತೇನೆ ಮತ್ತು ನೀವು ನನ್ನ ನಂಬಿಕೆಯನ್ನು ಗೌರವಿಸಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ನನ್ನ ಭಗವದ್ಗೀತೆಯು ನನಗೆ ಅದನ್ನು ಕಲಿಸುತ್ತದೆ, ಅವರು ಯಾವುದೇ ಧರ್ಮಕ್ಕೆ ಸೇರಿದವರಾದರೂ ಸರಿ ಎಂದು ಶಯನ್ ಅಲಿ ಹೇಳಿದ್ದಾರೆ.’ಈ ವಿಶೇಷ ದಿನದಂದು, ನನ್ನ ಇಡೀ ಜೀವನದಲ್ಲಿ ನಾನು ತಿಳಿದೋ ಅಥವಾ ತಿಳಿಯದೆಯೋ ನೋಯಿಸಿದವರೆಲ್ಲರಿಗೂ ಕ್ಷಮೆಯಾಚಿಸಲು ಬಯಸುತ್ತೇನೆ. ಏಕೆಂದರೆ ಜನರನ್ನು ನೋಯಿಸುವ ಮೂಲಕ ನನ್ನ ಜೀವನದ ಈ ಸುಂದರ ಪ್ರಯಾಣವನ್ನು ಪ್ರಾರಂಭಿಸಲು ನಾನು ಬಯಸುವುದಿಲ್ಲ’ ಎಂದು ಶಯಾನ್ ಅಲಿ ಹೇಳಿದ್ದಾರೆ.
‘ಇಂದು ನಾನು ನನ್ನ ಮೂಲಕ್ಕೆ ಮರಳಲು ತುಂಬಾ ಹೆಮ್ಮೆ ಪಡುತ್ತೇನೆ ಮತ್ತು ನನ್ನ ಪೂರ್ವಜರು ಕೂಡ ಅದನ್ನೇ ಬಯಸಿದ್ದರು ಎಂದು ನಾನು ಭಾವಿಸುತ್ತೇನೆ’ ಎಂದು ಶಯಾನ್ ಅಲಿ ಹೇಳಿದ್ದಾರೆ. ಇದೇ ವೇಳೆ ‘ತನ್ನನ್ನು ಎಂದಿಗೂ ಬಿಟ್ಟುಕೊಡದ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ ನೆಸ್ (ಇಸ್ಕಾನ್) ಗೂ ಈ ಸಂದರ್ಭದಲ್ಲಿ ಶಯಾನ್ ಅಲಿ ಧನ್ಯವಾದ ತಿಳಿಸಿದ್ದಾರೆ. ಶಯಾನ್ ಅಲಿ ಅವರನ್ನು ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವಲ್ಲಿ ಇಸ್ಕಾನ್ ಪ್ರಮುಖ ಪಾತ್ರ ವಹಿಸಿತ್ತು.