ನಮ್ಮ ಭಾರತೀಯ ಬಾಹ್ಯಾಕಾಶ ಸಂಸ್ಥೆ(ISRO) ಚಂದ್ರಯಾನ -2ರ(Chandrayana-2) ಯಶಸ್ಸಿನ ನಂತರ ದೇಶದ ಮೊದಲ ಸೌರ ಮಿಷನ್ ಆದಿತ್ಯ-L1 (Aditya L1) ಬಾಹ್ಯಾಕಾಶ ನೌಕೆಯನ್ನು(spaceship) ಉಡ್ಡಯಿಸಿತ್ತು. ಅದೀಗ ಸೂರ್ಯ-ಭೂಮಿಯ L1 ಬಿಂದುವಿನ ಸುತ್ತ ತನ್ನ ಮೊದಲ ಹಾಲೋ ಕಕ್ಷೆಯನ್ನು ಪೂರ್ಣಗೊಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಸೂರ್ಯ ಮತ್ತು ಭೂಮಿ ನಡುವಿನ ಗುರುತ್ವಾಕರ್ಷಣೆ ನಿಷ್ಕ್ರಿಯವಾಗುವ ‘ಲ್ಯಾಗ್ರೇಂಜ್ ಪಾಯಿಂಟ್’ನ (L1) ಪ್ರಭಾವಲಯದ (Halo) ಮೊದಲ ಸುತ್ತನ್ನು ಆದಿತ್ಯ-ಎಲ್1 ಪೂರ್ಣಗೊಳಿಸಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಕುರಿತು ಪ್ರಕಟಣೆ ಹೊರಡಿಸಿದೆ.
ಆದಿತ್ಯ-L1 ಮಿಷನ್ ಭಾರತೀಯ ಸೌರ ವೀಕ್ಷಣಾಲಯವಾಗಿದ್ದು, ಇದು ಲಾಗ್ರಾಂಜಿಯನ್ ಪಾಯಿಂಟ್ L1 ನಲ್ಲಿದೆ. ಕಳೆದ ವರ್ಷ ಅಂದರೆ ಸೆಪ್ಟೆಂಬರ್ 2, 2023 ರಂದು, ಇದನ್ನು ಭೂಮಿಯಿಂದ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಈ ವರ್ಷ, ಜನವರಿ 4, 2024 ರಂದು, ಆದಿತ್ಯ-ಎಲ್1 ಅನ್ನು ಉದ್ದೇಶಿತ ಹಾಲೋ ಕಕ್ಷೆಯಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಇಸ್ರೋ, ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ಎಲ್1 ಬಿಂದುವಿನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸಲು 178 ದಿನಗಳನ್ನು ತೆಗೆದುಕೊಂಡಿತು ಎಂದು ಇಸ್ರೋ ಹೇಳಿದೆ. ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ಒಂದು ಸುತ್ತನ್ನು ಪೂರ್ಣಗೊಳಿಸಲು 178 ದಿನಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ಎರಡನೇ ಸುತ್ತಿನತ್ತ ಆದಿತ್ಯ ಎಲ್ 1 ಮಿಷನ್ ದಾಪುಗಾಲು ಇಟ್ಟಿದೆ. ಎರಡನೇ ಹಾಲೋ ಕಕ್ಷೆಯಲ್ಲಿ ವಾಹನದ ಚಲನೆಯನ್ನು ಯಾವುದೇ ತೊಂದರೆಯಿಲ್ಲದೆ ಖಚಿತಪಡಿಸಿಕೊಳ್ಳಲು ಕಕ್ಷೆಯನ್ನು ಸ್ಥಿರವಾಗಿಡಲು ಮಂಗಳವಾರವೂ ಹೊಂದಾಣಿಕೆಗಳನ್ನು ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.
ಇಸ್ರೋ ತನ್ನ ಹೇಳಿಕೆಯಲ್ಲಿ ಹೇಳಿದ್ದೇನು?: ಈ ಕುರಿತು ಇಸ್ರೋ, ಹಾಲೋ ಆರ್ಬಿಟ್‌ನಲ್ಲಿ ತನ್ನ ಪ್ರಯಾಣದ ಸಮಯದಲ್ಲಿ, ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ಅನೇಕ ಎದುರಾಳಿ ಶಕ್ತಿಗಳೊಂದಿಗೆ ಸಂಪರ್ಕಕ್ಕೆ ಬರುತ್ತದೆ, ಇದರಿಂದಾಗಿ ಅದು ಉದ್ದೇಶಿತ ಕಕ್ಷೆಯಿಂದ ಹೊರಬರುತ್ತದೆ. ಈ ಕಾರಣಕ್ಕಾಗಿ, ಆದಿತ್ಯ-L1 ಅನ್ನು ಈ ಕಕ್ಷೆಯಲ್ಲಿ ಇರಿಸಲು, ಅದರ ಮಾರ್ಗವನ್ನು ಫೆಬ್ರವರಿ 22 ಮತ್ತು ಜೂನ್ 7 ರಂದು ಎರಡು ಬಾರಿ ಬದಲಾಯಿಸಲಾಯಿತು. ಅಂತಹ ಪರಿಸ್ಥಿತಿಯಲ್ಲಿ, ವಾಹನವು L1 ಸುತ್ತ ಎರಡನೇ ಹಾಲೋ ಕಕ್ಷೆಯಲ್ಲಿ ತನ್ನ ಪ್ರಯಾಣವನ್ನು ಮುಂದುವರೆಸಬಹುದು ಎಂದು ಖಚಿತಪಡಿಸಿಕೊಳ್ಳಲಾಯಿತು’ ಎಂದು ಹೇಳಿದೆ. ಹೆಚ್ಚಿನ ಮಾಹಿತಿಯನ್ನು ನೀಡುತ್ತಾ, ಇಸ್ರೋ ಇಂದಿನ ಬದಲಾವಣೆಯ ನಂತರ, ಯುಆರ್‌ಎಸ್‌ಸಿ-ಇಸ್ರೋದಲ್ಲಿ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಫ್ಲೈಟ್ ಡೈನಾಮಿಕ್ಸ್ ಸಾಫ್ಟ್‌ವೇರ್ ಅನ್ನು ಆದಿತ್ಯ-ಎಲ್ 1 ಮಿಷನ್‌ಗಾಗಿ ಸಂಪೂರ್ಣವಾಗಿ ಸ್ಥಾಪಿಸಲಾಗಿದೆ.
ಭಾರತದ ಮೊದಲ ಸೂರ್ಯ ಮಿಷನ್ ಆದಿತ್ಯ-ಎಲ್1: ಆದಿತ್ಯ-ಎಲ್ 1 ಮಿಷನ್ ಸೂರ್ಯನ ಕುರಿತು ಅಧ್ಯಯನ ಮಾಡುವ ಭಾರತದ ಮೊದಲ ಮಿಷನ್ ಆಗಿದೆ. ಸೂರ್ಯನು ಸಕ್ರಿಯವಾಗಿದ್ದಾಗ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ. ಈ ಕಾರ್ಯಾಚರಣೆಗೆ 400 ಕೋಟಿ ರೂಪಾಯಿ ಹಣ ವೆಚ್ಚ ಮಾಡಿ ಇಸ್ರೋ ಇದನ್ನು ಕಳೆದ ವರ್ಷ ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಿತ್ತು. ದೇಶದ ಮೊದಲ ಸೌರ ಮಿಷನ್ ಆದಿತ್ಯ-L1 ಬಾಹ್ಯಾಕಾಶ ನೌಕೆಯು ಸೂರ್ಯ-ಭೂಮಿಯ L1 ಬಿಂದುವಿನ ಸುತ್ತ ತನ್ನ ಮೊದಲ ಹಾಲೋ ಕಕ್ಷೆಯನ್ನು ಪೂರ್ಣಗೊಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರೋದು ಭಾರತದ ವಿಜ್ಞಾನಿಗಳಿಗೆ ಹರ್ಷ ತಂದಿದೆ.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…