ಬಳ್ಪದ ತ್ರಿಶೂಲಿನೀ ದೇವಸ್ಥಾನ | ಕದಂಬರ ಕಾಲದ ದೇವಾಲಯದಲ್ಲಿ ನವರಾತ್ರಿ ಸಂಭ್ರಮ |

October 5, 2024
7:43 AM
ಕದಂಬ, ಚೋಳರ ಕಾಲದಿಂದಲೂ ದೇವಿಯ ಆರಾಧನೆ ನಡೆಯುತ್ತಿತ್ತು. ಕದಂಬರ ಕಾಲದ ದೇವಸ್ಥಾನವೊಂದು ಕಡಬ ತಾಲೂಕಿನ ಬಳ್ಪದ ಬೀದಿಗುಡ್ಡೆ ಬಳಿಯಲ್ಲಿದೆ. ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಅದು. ಸಂಪೂರ್ಣ ಶಿಲಾಮಯವಾದ ದೇವಸ್ಥಾನ ಇದಾಗಿದ್ದು, 2017 ರಲ್ಲಿ ಜೀರ್ಣೋದ್ಧಾರಗೊಂಡು ಈಗ ನವರಾತ್ರಿ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. 

ದೇಶದೆಲ್ಲೆಡೆ ನವರಾತ್ರಿ ಸಂಭ್ರಮ. ಸೃಷ್ಟಿಯ ಮೂಲವಾಗಿರುವ ದೇವಿಯನ್ನು ಒಂಬತ್ತು ರೂಪಗಳನ್ನು ಆರಾಧಿಸುವ, ಪೂಜಿಸುವ ಕ್ಷಣ ಇದು. ಹೀಗಾಗಿ ನವರಾತ್ರಿ  ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಪ್ರಮುಖ ಹಬ್ಬ. ಅನೇಕ ವರ್ಷಗಳಿಂದಲೂ ಈ ಹಬ್ಬ ಆಚರಿಸಲಾಗುತ್ತಿದೆ. ಹಿಂದಿನ ಅನೇಕ ರಾಜರ ಕಾಲದಿಂದಲೂ ದೇವಿಯ ಆರಾಧನೆ ಇದೆ ಎನ್ನುವುದಕ್ಕೆ ಹಲವು ಪುರಾವೆಗಳು ಇವೆ. ಅಂತಹ ಕೆಲವು ದೇವಸ್ಥಾನಗಳು ಈಗಲೂ ಇದೆ, ಅಲ್ಲೂ ಸಂಭ್ರಮ, ಸಡಗರದಿಂದ ಉತ್ಸವ ನಡೆಯುತ್ತಿದೆ. ಅಂತಹದ್ದರಲ್ಲಿ ಬಳ್ಪದ ತ್ರಿಶೂಲಿನೀ ದೇವಸ್ಥಾನವೂ ಒಂದು. ಇಲ್ಲಿ ಈಗ ನವರಾತ್ರಿ ಸಂಭ್ರಮ.

Advertisement

ನವರಾತ್ರಿ ಕರ್ನಾಟಕದಲ್ಲಿ ದಸರಾ ಎಂದು ಕರೆದರೆ, ಉತ್ತರ ಭಾರತದಲ್ಲಿ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿ ಆಚರಣೆಯ ಹಿಂದೆ ಹಲವು ಐತಿಹ್ಯಗಳಿವೆ. ಕತೆಗಳ ಪ್ರಕಾರ ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿದಳು ಮತ್ತು ನಂತರ ನವಮಿಯ ರಾತ್ರಿ ಅವನನ್ನು ಕೊಂದಳು ಎಂದು  ಹೇಳಲಾಗಿದೆ.ಹಿಂದಿನ ಕಾಲದಿಂದಲೂ ದೇವಿಯನ್ನು ಶಕ್ತಿಸ್ವರೂಪಿಣಿಯಾಗಿ ಆರಾಧಿಸಲಾಗುತ್ತಿತ್ತು. ಅಂದಿನಿಂದಲೂ ದೇವಿಯ ದೇವಸ್ಥಾನಗಳು ಹಲವಾರು ಇವೆ. ರಾಜರುಗಳು ಯುದ್ಧದ ಕಾಲಕ್ಕೆ ದೇವಿಯ ಮೊರೆ ಹೋಗಿದ್ದು ಕೂಡಾ ಪುರಾಣಗಳಲ್ಲಿ ಉಲ್ಲೇಖ ಇದೆ. ಅಂದರೆ ಸೃಷ್ಟಿಯ ಮೂಲವಾಗಿರುವ ದೇವಿಯೇ ಸರ್ವಸ್ವ.

ಕದಂಬ, ಚೋಳರ ಕಾಲದಿಂದಲೂ ದೇವಿಯ ಆರಾಧನೆ ನಡೆಯುತ್ತಿತ್ತು. ಕದಂಬರ ಕಾಲದ ದೇವಸ್ಥಾನವೊಂದು ಕಡಬ ತಾಲೂಕಿನ ಬಳ್ಪದ ಬೀದಿಗುಡ್ಡೆ ಬಳಿಯಲ್ಲಿದೆ. ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಅದು. ಸಂಪೂರ್ಣ ಶಿಲಾಮಯವಾದ ದೇವಸ್ಥಾನ ಇದಾಗಿದ್ದು, 2017 ರಲ್ಲಿ ಜೀರ್ಣೋದ್ಧಾರಗೊಂಡು ಈಗ ನವರಾತ್ರಿ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಬಳ್ಪದ ತ್ರಿಶೂಲಿನೀ ದೇವಸ್ಥಾನದಲ್ಲಿ ತ್ರಿಶೂಲವೇ ವಿಗ್ರಹವಾಗಿದೆ. ಸಂಪೂರ್ಣ ಶಿಲಾಮಯವಾದ ಈ ವಿಗ್ರಹವು ಅನೇಕ ವರ್ಷಗಳ ಹಿಂದೆಯೇ ಪ್ರತಿಷ್ಟಾಪಿಸಲಾಗಿದೆ. ದೇವಸ್ಥಾನದ ಹಿಂಭಾಗ ಬಂಡೆ ಇದ್ದು ಅದೆಲ್ಲಾ ಸಾನ್ನಿಧ್ಯ ಇರುವ ಬಂಡೆಗಳು ಎಂದು ಉಲ್ಲೇಖಸಲಾಗಿದೆ. ಹಿಂದೆ ದೇವಸ್ಥಾನ ಕಟ್ಟುವಾಗಲೇ ಹಾಗೆಯೇ ಈ ಬಂಡೆಗಳನ್ನು ಬಿಟ್ಟಿದ್ದಾರೆ. ಈಗಲೂ ಅದೇ ಮಾದರಿಯಲ್ಲಿ‌ ದೇವಸ್ಥಾನವನ್ನು ಉಳಿಸಿಕೊಳ್ಳಲಾಗಿದೆ.ಇಲ್ಲಿನ ಅನೇಕ ವಿನ್ಯಾಸ ಶೈಲಿಗಳನ್ನು ಗಮನಿಸಿದಾಗ ಇದು ರಾಜಾಶ್ರಯದಲ್ಲಿ ನಡೆಯುತ್ತಿದ್ದ ದೇವಸ್ಥಾನ ಎನ್ನುವುದಕ್ಕೆ ಪುರಾವೆಗಳು ಸಿಗುತ್ತವೆ.

ಇತಿಹಾಸಕಾರರು ಪ್ರಕಾರ ಈ ದೇವಸ್ಥಾನವು ಕದಂಬ ರಾಜರ ಕಾಲದಲ್ಲಿ ನಿರ್ಮಾಣವಾಗಿದೆ. ಇಲ್ಲಿನ ವಿನ್ಯಾಸ, ಶೈಲಿ, ದೇವಸ್ಥಾನದ ಒಳಗಿನ ಕೆತ್ತನೆಗಳನ್ನು ನೋಡಿ ಈ ಬಗ್ಗೆ ಹೇಳಲಾಗಿದೆ. ಒಳಗಿನ ಕೆತ್ತನೆಗಳು ಬಹಳ ಪುರಾತನ  ಶೈಲಿಯಲ್ಲಿದೆ. ಸುಮಾರು 1200 ವರ್ಷಗಳ ಹಿಂದೆ ಇಂತಹ ಕೆತ್ತನೆಗಳು ಇತ್ತು ಎಂದು ಇತಿಹಾಸಕಾರರು ಹೇಳಿದ್ದಾರೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀವತ್ಸ ಎಂ ವಿ ಹೇಳುತ್ತಾರೆ.
ಶ್ರೀವತ್ಸ ಎಂ ವಿ

ಈಗ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ.ಅ.12 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಅ.7 ರಂದು ಚಂಡಿಕಾ ಹೋಮ , ಅ.9 ರಂದು ಶಾರದಾ ಪೂಜೆ, ಅ.11 ಮಹಾನವಮಿ ಹಾಗೂ ಅ.12 ರಂದು ವಿಜಯದಶಮಿ ಕಾರ್ಯಕ್ರಮಗಳು ನಡೆಯಲಿದೆ.

The worship of the Goddess has been practiced since the Kadamba and Chola dynasties. A temple dating back to the Kadamba era, dedicated to Thrishoolini Durgaparameshwari, is situated near Balpa in Kadaba Taluk, Karnataka. This temple, constructed entirely of stone, underwent renovation in 2017 and now celebrates Navratri with great enthusiasm. The Trishul idol is located in the Trishulinee Temple of Balpa. This stone idol was installed several years ago. There is a large rock located behind the temple, often referred to as the rock presence.

The Trishul idol is located in the Thrishoolini Temple of Balpa. This idol, made entirely of stone, was installed several years ago. There is a rock located behind the temple, known as the Rock of Presence. Initially, these rocks were left untouched when the temple was constructed.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group