ಹಲಸಿನ ಮೌಲ್ಯವರ್ಧನೆ ವಿವಿಧ ಮಾದರಿಯಲ್ಲಿ ನಡೆಯುತ್ತಿದೆ. ಅದರಲ್ಲಿ ಹಲಸಿನ ಬೀಜಗಳಿಂದ ಮಾಡಿದ ಆರೋಗ್ಯ ಪಾನೀಯ ಜಾಫಿ. ಮಾರುಕಟ್ಟೆಗೆ ಬಂದಿರುವ ಹಲವು ಉತ್ಪನ್ನಗಳ ಪೈಕಿ ಜಾಫಿ ಹೆಚ್ಚು ಜನಪ್ರಿಯವಾಗಿತ್ತು. ಇದರ ತಯಾರಕ ಶಿವಣ್ಣ. ಇಂತಹ ಆಸಕ್ತ, ಅಧ್ಯಯನಶೀಲ ಹಾಗೂ ಹಲಸು ಮೌಲ್ಯವರ್ಧನೆಯ ರುವಾರಿ ಶಿವಣ್ಣ ಇನ್ನಿಲ್ಲ.
Advertisement
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಪರಿವರ್ತನಾ ಎಂಬ ಸ್ವಯಂಸೇವಾ ಸಂಸ್ಥೆಯ ಶಿವಣ್ಣ ಅವರು ತಯಾರಿಸಿದ “ಆರೋಗ್ಯ ಪಾನೀಯ” ಜಾಫಿ ಹೆಚ್ಚು ಜನಪ್ರಿಯವಾಗಿತ್ತು. ಈ ಜಾಫಿಯನ್ನು ಸವಿಯಲೇಬೇಕು ಎಂಬ ಟ್ಯಾಗ್ ಲೈನ್ ಕಳೆದ ಕೆಲವು ಸಮಯಗಳ ಹಿಂದೆ ಇತ್ತು. ಮಾರುಕಟ್ಟೆಗೆ ಬಂದಿರುವ ನವೀನ ಹಲಸಿನ ಉತ್ಪನ್ನಗಳ ಶ್ರೇಣಿಯಲ್ಲಿ ಜಾಫಿ ಗಮನ ಸೆಳೆದಿತ್ತು. “ಜಾಫಿ” ಶಿವಣ್ಣ ಎಂದೇ ಪರಿಚಿತವಾದ ಶಿವಣ್ಣ ಅವರು ಹಲಸಿನ ಉತ್ಪನ್ನಗಳ ರುವಾರಿ ಎಂದರೂ ತಪ್ಪಾಗಲಾರದು. ವಿವಿಧ ಹಲಸು ಉತ್ಪನ್ನಗಳ ಮೂಲಕ ಗಮನ ಸೆಳೆದವರು. ಹಲಸಿನ ಕಾಯಿ, ಹಣ್ಣುಗಳ ಮೌಲ್ಯ ವರ್ಧನೆ ಕುರಿತು ಚಿಂತಿಸುತ್ತಾ ಪ್ರಯತ್ನ ಮಾಡುತ್ತಿದ್ದ ಸಹೃದಯಿ ಕೃಷಿಕರಾಗಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement