ಎಚ್‌ಎಂಪಿವಿ ವೈರಸ್ | ಆತಂಕ ಬೇಡ… ಆತಂಕ ಬೇಡ…. ಆತಂಕ ಬೇಡ | ಎಲ್ಲರಿಂದಲೂ ಸ್ಪಷ್ಟನೆ | ಆದರೂ ಇರಲಿ ಎಚ್ಚರಿಕೆ |

January 7, 2025
10:27 PM
ಎಚ್‌ಎಂಪಿವಿ ವೈರಸ್ ಸೋಂಕಿನ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಆದರೆ ಈ ವೈರಸ್‌ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಸಲಾಗಿದೆ.

ಎಚ್‌ಎಂಪಿವಿ ವೈರಸ್ ಪ್ರಕರಣಗಳು ಪತ್ತೆಯಾಗಿದ್ದರೂ ಸಹ ಯಾವುದೇ ರೀತಿಯ ಆತಂಕ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸ್ಪಷ್ಟಪಡಿಸಿದ್ದಾರೆ.

Advertisement
Advertisement
Advertisement

ಚೀನಾದಲ್ಲಿ ಕಾಣಿಸಿಕೊಂಡಿರುವ ಎಚ್‌ಎಂಪಿವಿ ವೈರಸ್ ಸೋಂಕಿನ ಎರಡು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಆದರೆ ಆರೋಗ್ಯ ತಜ್ಞರು HMPV ಹೊಸ ಬಗೆಯ ಸೋಂಕಲ್ಲ. ಈ ಸೋಕು 2001ರಲ್ಲೇ ಮೊದಲ ಬಾರಿಗೆ ಗುರುತಿಸಲಾಗಿತ್ತು. ಮತ್ತು ಇದು ಹಲವು ವರ್ಷಗಳಿಂದ ಜಗತ್ತಿನೆಲ್ಲೆಡೆ ಹರಡುತ್ತಿದೆ. ಗಾಳಿಯ ಮೂಲಕ ಹರಡುವ ಈ ಸೋಂಕು ಎಲ್ಲ ವರ್ಗದವರಿಗೂ ತಗಲುವ ಸಾಧ್ಯತೆ ಇದೆ. ಆದರೆ ಯಾವುದೇ ಆತಂಕ ಪಡುವಂತಿಲ್ಲ ಎಂದು ಹೇಳಿದ್ದಾರೆ.

Advertisement

ಆದರೂ ದೇಶಾದ್ಯಂತ ಎಲ್ಲ ಆರೋಗ್ಯ ವ್ಯವಸ್ಥೆಗಳ ಮೇಲೆ ನಿಗಾ ಇಡಲಾಗಿದೆ. ಹಾಗೂ ದೇಶ ಎಂತಹುದೇ ಆರೋಗ್ಯ ಸವಾಲುಗಳು ಎದುರಾದರೂ ಅದನ್ನು ಹತ್ತಿಕ್ಕಲು ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, HMPV ಸೋಂಕು ಹೊಸದೇನಲ್ಲ. ಅದು ಈಗಾಗಲೇ ಜಗತ್ತಿನೆಲ್ಲೆಡೆ ಇದೆ. ಇದರಿಂದ ಯಾವುದೇ ತೊಂದರೆ ಇಲ್ಲ. ಸಂಭವನೀಯ ಪರಿಸ್ಥಿತಿಗಳನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಆತಂಕ ಬೇಡ : ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಹೀಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿನಲ್ಲಿ ಮಗುವೊಂದರಲ್ಲಿ ಕಂಡುಬಂದಿರುವ ವೈರಸ್ ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಲ್ಲ ಎಂದು ಹೇಳಿದ್ದಾರೆ.ಈ ವೈರಸ್ ಕಡಿಮೆ ಇಮ್ಯೂನಿಟಿ ಹೊಂದಿರುವ ಮಕ್ಕಳಿಗೆ ಬಂದಿದ್ದು, ಮಗುವಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಇಲ್ಲಿ ಕಂಡುಬಂದಿರುವ ವೈರಸ್‌ಗೂ  ಚೀನಾ ವೈರಸ್‌ಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

Advertisement

ವೈರಸ್ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ. ಈ ವೈರಸ್‌ನಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ದಿನೇಶ್‌ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ವೈರಸ್ ಬಗ್ಗೆ ಹೆಚ್ಚಿನ ಆತಂಕ ಅಗತ್ಯವಿಲ್ಲ  : ಸಂಸದ ಡಾ.ಕೆ.ಸುಧಾಕರ್

Advertisement

ಎಚ್.ಎಮ್.ಪಿ ವೈರಸ್ ಬಗ್ಗೆ ಹೆಚ್ಚಿನ ಆತಂಕ ಅಗತ್ಯವಿಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯವಿದೆ ಎಂದು ಮಾಜಿ ಆರೋಗ್ಯ ಸಚಿವರೂ ಆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿ, ವಿಶ್ವಸಂಸ್ಥೆ ಮತ್ತು ಕೇಂದ್ರ ಸರ್ಕಾರ ಎಚ್.ಎಮ್.ಪಿ  ಬಗ್ಗೆ ಜಾಗೃತಿ ಮೂಡಿಸಲು ಮುನ್ನೆಚ್ಚರಿಕಾ ಕ್ರಮಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರವು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ಪ್ರಕಾರ ಭಾರತದಲ್ಲಿ ಅರಣ್ಯ ಹೆಚ್ಚಳ-ಗುಣಮಟ್ಟ ಕುಸಿತ |
January 8, 2025
11:00 PM
by: The Rural Mirror ಸುದ್ದಿಜಾಲ
ಹವಾಮಾನ ಬದಲಾವಣೆ | ಇತ್ತೀಚೆಗಿನ ಅಧ್ಯಯನ ಅಪಾಯದ ಮುನ್ಸೂಚನೆ ತಿಳಿಸಿದೆ | ಕಾಡಿನ ಒಳಗಿನ ಸಮಸ್ಯೆ ಏನಾಗುತ್ತಿದೆ..?
January 8, 2025
10:34 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 08-01-2025 | ವಾಯುಭಾರ ಕುಸಿತದ ಲಕ್ಷಣ | ತುಂತುರು ಮಳೆ ಸಾಧ್ಯತೆ | ಈ ವರ್ಷದ ಚಳಿಗಾಲ ಅಂತ್ಯವಾಗುವ ಸಾಧ್ಯತೆ..? |
January 8, 2025
12:28 PM
by: ಸಾಯಿಶೇಖರ್ ಕರಿಕಳ
ಅಡಿಕೆ ಅಕ್ರಮ ಸಾಗಾಟಕ್ಕೆ ತಡೆ | 10 ಸಾವಿರ ಕೆಜಿ ಅಡಿಕೆ ವಶಕ್ಕೆ |
January 8, 2025
7:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror