ಬಣ್ಣಗಳ ಹಬ್ಬ ಹೋಳಿ ಮಾರ್ಚ್ 4ರಂದು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ವೇಳೆ ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮನವಿ ಮಾಡಿದೆ.
ಹೋಳಿ ಹಬ್ಬವು ಸಂತೋಷ, ಸಾಮರಸ್ಯ ಮತ್ತು ವಿಜಯದ ಸಂಕೇತ. ಆದರೆ ಜೋರಾದ ಶಬ್ದಗಳು, ಹಠಾತ್ ಬಣ್ಣ ಎರಚುವುದು, ನೀರಿನ ಬಲೂನ್‌ಗಳನ್ನು ಎಸೆಯುವುದು ಮತ್ತು ಆಕ್ರಮಣಕಾರಿ ನಡವಳಿಕೆಗಳು ಸಾಕುಪ್ರಾಣಿಗಳು ಹಾಗೂ ಬೀದಿ ಪ್ರಾಣಿಗಳಿಗೆ ಭಯ, ಒತ್ತಡ ಮತ್ತು ಗಂಭೀರ ಗಾಯಗಳಿಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.
ಪ್ರಾಣಿಗಳನ್ನು ಬೆನ್ನಟ್ಟುವುದು ಅಥವಾ ಬಲವಂತವಾಗಿ ಬಣ್ಣ ಬಳಿಯುವುದು ಕ್ರೌರ್ಯಕ್ಕೆ ಸಮಾನವಾಗಿದ್ದು, ಇದು ಕಾನೂನುಬದ್ಧವಾಗಿ ದಂಡನೀಯವೂ ಆಗಿದೆ.
ಪಾಲಿಸಬೇಕಾದ ಸೂಚನೆಗಳು:
-
ಸಾಕುಪ್ರಾಣಿಗಳು, ಬೀದಿ ಪ್ರಾಣಿಗಳು ಮತ್ತು ಪಕ್ಷಿಗಳ ಮೇಲೆ ಬಣ್ಣಗಳನ್ನು ಎರಚಬೇಡಿ.
-
ನೀರಿನ ಬಲೂನ್‌ಗಳು ಹಾಗೂ ಬಣ್ಣದ ನೀರನ್ನು ಪ್ರಾಣಿಗಳ ಮೇಲೆ ಸಿಂಪಡಿಸುವುದನ್ನು ತಪ್ಪಿಸಿ.
-
ಸಾಕುಪ್ರಾಣಿಗಳನ್ನು ಶಾಂತ ಮತ್ತು ಸುರಕ್ಷಿತ ಸ್ಥಳದಲ್ಲಿ ಇರಿಸಿ.
-
ಹಬ್ಬದ ನಂತರ ಬಣ್ಣದ ಅವಶೇಷ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸಿ.
-
ಪ್ರಾಣಿ ಬಣ್ಣಕ್ಕೆ ಒಡ್ಡಿಕೊಂಡರೆ ಶುದ್ಧ ನೀರಿನಿಂದ ನಿಧಾನವಾಗಿ ತೊಳೆಯಿ; ಅಗತ್ಯವಿದ್ದರೆ ಪಶುವೈದ್ಯಕೀಯ ನೆರವು ಪಡೆಯಿ.
ಮಕ್ಕಳು ಹಾಗೂ ಯುವಕರಲ್ಲಿ ಪ್ರಾಣಿ ಸ್ನೇಹಿ ಹೋಳಿ ಕುರಿತು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನೈಸರ್ಗಿಕ ಬಣ್ಣಗಳನ್ನು ಮನುಷ್ಯರಿಗೆ ಮಾತ್ರ ಬಳಸಿ, ಪರಿಸರ ಸ್ನೇಹಿ ಹಾಗೂ ಕ್ರೌರ್ಯ-ಮುಕ್ತ ಹಬ್ಬವನ್ನು ಆಚರಿಸಬೇಕೆಂದು ಪ್ರಕಟಣೆ ತಿಳಿಸಿದೆ.
The Animal Welfare Board of India has urged citizens to celebrate Holi responsibly without causing harm to animals and birds. The board advised avoiding colors, water balloons, loud noises, and ensuring pets remain safe indoors during celebrations.

